ಪಿಡಿಒಗಳ ವಾಪಸಾತಿಗೆ ಕಟ್ಟುನಿಟ್ಟಿನ ಆದೇಶ
Team Udayavani, Dec 19, 2018, 8:28 AM IST
ವಿಧಾನಪರಿಷತ್ತು: ವಿವಿಧ ಕಡೆ ನಿಯೋಜನೆ ಮೇಲೆ ಹೋಗಿರುವ ಸುಮಾರು 1,500 ಪಿಡಿಒಗಳನ್ನು ಮಾತೃ ಸಂಸ್ಥೆಗೆ ಕರೆಯಿಸಿಕೊಳ್ಳಲು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಅನೇಕ ಶಾಸಕರಿಂದ ಇಂತಹ ಕ್ರಮ ಬೇಡವೆಂಬ ಒತ್ತಡ ನನ್ನ ಮೇಲಿದೆ.
ಶಿಸ್ತು ತರಲು ಹೋದರೆ ಇಂತಹ ಸ್ಥಿತಿ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸದಸ್ಯರಾದ ಬಿ.ಜಿ.ಪಾಟೀಲ, ಎಂ.ಕೆ.ಪ್ರಾಣೇಶ, ಎಂ.ಪಿ.ಸುನೀಲ್ ಸುಬ್ರಮಣಿ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಬೇರೆ ಇಲಾಖೆಗಳಿಗೆ ಹೋಲಿಸಿದರೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಯಲ್ಲಿ ಶೇ.90-96ರಷ್ಟು ಪಿಡಿಒಗಳ ಹುದ್ದೆಗಳು ಭರ್ತಿಯಾಗಿವೆ. ಆದರೆ, 1,500ಕ್ಕೂ ಹೆಚ್ಚು ಪಿಡಿಒಗಳು ನಿಯೋಜನೆ ಮೇಲೆ ತಾಪಂ, ಜಿಪಂಗೆ ಹೋಗಿದ್ದಾರೆ. ಇನ್ನು ಕೆಲವರು ಇಲಾಖೆ ಅನುಮತಿ ಪಡೆದು ಶಾಸಕರು, ಸಂಸದರ ಆಪ್ತಕಾರ್ಯದರ್ಶಿ ಇನ್ನಿತರ ಸೇವೆಗೆ ಹೋಗಿದ್ದಾರೆ. ನಿಯೋಜನೆ ಮೇಲೆ ಹೋದ 1,500 ಪಿಡಿಒಗಳನ್ನು ಕರೆಸಿಕೊಳ್ಳಲು ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ ಎಂದರು.
90-95ಲಕ್ಷ ಸೇವೆ ನೀಡಿಕೆ: ರಾಜ್ಯಾದ್ಯಂತ ಬಹುತೇಕ ಗ್ರಾಮ ಪಂಚಾಯತ್‌ಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳು ಉತ್ತಮವಾಗಿ
ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೆ ಒಟ್ಟಾರೆ 90-95ಲಕ್ಷದಷ್ಟು ಸೇವೆಗಳನ್ನು ವಿವಿಧ ಫಲಾನುಭವಿಗಳಿಗೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಹೇಳಿದರು. 2016ರಿಂದ ಆರಂಭವಾದ ಬಾಪೂಜಿ
ಸೇವಾಕೇಂದ್ರಗಳಲ್ಲಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಯ 43, ಕಂದಾಯ ಇಲಾಖೆಯ 40, ವಾಣಿಜ್ಯ ಉದ್ದೇಶ 17 ಸೇರಿದಂತೆ ಒಟ್ಟು 100 ಸೇವೆಗಳನ್ನು ನೀಡಲಾಗುತ್ತಿದೆ. ಸುಮಾರು 37.57ಲಕ್ಷ ಫಲಾನುಭವಿಗಳಿಗೆ ಪಹಣಿ ಪತ್ರ ನೀಡಲಾಗಿದ್ದು, ನಾಡ ಕಚೇರಿ ಸೇವೆಗಳನ್ನು 1.11ಲಕ್ಷ ಜನರು ಪಡೆದಿದ್ದಾರೆ. ಅನಿಲ ಭಾಗ್ಯದಡಿ 3.25ಲಕ್ಷ ಜನರಿಗೆ, ಗ್ರಾಮೀಣಾಭಿವೃದ್ಧಿ ,ಪಂಚಾಯತ್ ರಾಜ್ ಇಲಾಖೆಯಡಿ 49.22ಲಕ್ಷ ಸೇವೆಗಳನ್ನು ನೀಡಲಾಗಿದೆ. ಸೇವೆಗೆ 10 ರೂ. ಶುಲ್ಕ ಪಡೆಯಲಾಗುತ್ತಿದ್ದು, ಇದರಲ್ಲಿ 5 ರೂ. ಗ್ರಾಪಂಗೆ ನೀಡಲಾಗುತ್ತಿದ್ದು, ಉಳಿದ ಹಣ ಭೂಮಿ ಯೋಜನೆ ನಿರ್ವಹಣೆಗೆ ಹೋಗುತ್ತದೆ.
ಬಾಪೂಜಿ ಕೇಂದ್ರಗಳಲ್ಲಿ ಇನ್ನಷ್ಟು ಪರಿಣಾಮಕಾರಿ
ಸೇವೆ ಹಾಗೂ ಸವಲತ್ತುಗಳಿಗೆ ಸಂಗ್ರಹವಾಗುವ ಆದಾಯದ ಹಣವನ್ನು ವೆಚ್ಚ ಮಾಡಲು ಗ್ರಾಪಂಗಳು ಮುಂದಾಗಬೇಕು . ಸಂಗ್ರಹವಾದ ಹಣದ ವೆಚ್ಚದ ಬಗ್ಗೆ ಸರಳ ಮಾರ್ಗಸೂಚಿ ಆದೇಶ ಒಂದೆರಡು ದಿನಗಳಲ್ಲಿ ಹೊರಡಿಸಲಾಗುವುದು ಎಂದರು.
ಪಿಡಿಒಗಳಿಗೆ ಬಿ ದರ್ಜೆ ಹುದ್ದೆ ನೀಡಬೇಕೆಂಬ ಬೇಡಿಕೆ ಪ್ರತ್ಯೇಕ ವಿಚಾರವಾಗಿದ್ದು, ಇಲ್ಲಿ ಅದನ್ನು ಪ್ರಸ್ತಾಪಿಸುವುದಿಲ್ಲ. ಬಾಪೂಜಿ ಸೇವಾ ಕೇಂದ್ರಗಳಲ್ಲಿ ಡಾಟಾ ಎಂಟ್ರಿ ಸಿಬ್ಬಂದಿ ಕಾಯಂ ಬೇಡಿಕೆ ಬಗ್ಗೆ ಬೇಡಿಕೆ ಇದೆ. ಈಗಾಗಲೇ ಅವರಿಗೆ ಸರ್ಕಾರದಿಂದ ನೇರ ವೇತನ ಪಾವತಿ ಆಗುತ್ತಿದೆ. ಅತಿ ಹೆಚ್ಚು ಸೇವೆ ನೀಡುವ, ಆರ್ಥಿಕ ಶಿಸ್ತು ಹೊಂದಿದ ಗ್ರಾಪಂಗಳಲ್ಲಿ ಅಗತ್ಯವಿದ್ದರೆ ಹೆಚ್ಚುವರಿ ಡಾಟಾ ಎಂಟ್ರಿ ಸಿಬ್ಬಂದಿ ನೇಮಕಕ್ಕೆ ಸರ್ಕಾರದಿಂದ ಅಭ್ಯಂತರವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಶೇ.99 ಶೌಚಾಲಯ ನಿರ್ಮಾಣ ಪೂರ್ಣ
ವಿಧಾನಪರಿಷತ್ತು: ಗ್ರಾಮೀಣ ಕರ್ನಾಟಕದಲ್ಲಿ ಜನವರಿ ಅಂತ್ಯಕ್ಕೆ ಶೇ.99ರಷ್ಟು ಶೌಚಾಲಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು,
ಶೌಚಾಲಯ ಬಳಕೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ಕೈಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ , ಪಂಚಾಯತ್
ರಾಜ್ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಎನ್. ಅಪ್ಪಾಜಿಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ನಿರ್ಮಲ ಭಾರತ ಯೋಜನೆಯಡಿ 2012-13ರ ಬೇಸ್‌ಲೈನ್ ಸಮೀಕ್ಷೆಯಡಿ ರಾಜ್ಯದಲ್ಲಿ ಸುಮಾರು 45.42 ಕುಟುಂಬಗಳಿಗೆ ಶೌಚಾಲಯ ಇಲ್ಲ ಎಂಬ ಮಾಹಿತಿ ಲಭ್ಯವಾ ಗಿತ್ತು. ಸ್ವಚ್ಛ ಭಾರತ ಅಭಿಯಾ ನದಡಿ 4,207 ಕೋಟಿ ರೂ.ವೆಚ್ಚದಲ್ಲಿ 45.42ಲಕ್ಷ ಶೌಚಾಲಯ ನಿರ್ಮಾಣ ಕಾರ್ಯ
ಪೂರ್ಣಗೊಳಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.