ವಿದ್ಯಾರ್ಥಿಗಳೇ ಆಯ್ಕೆ ಮಾಡಿಕೊಳ್ಳಬಹುದು ತಮಗಿಷ್ಟದ ಸೀಟು!
Team Udayavani, May 20, 2017, 11:19 AM IST
ಬೆಂಗಳೂರು: ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್ ಕಾಲೇಜು ಮತ್ತು ಖಾಸಗಿ ಪಾಲಿಟೆಕ್ನಿಕ್ ಕಾಲೇಜಿನ ಸರ್ಕಾರಿ ಕೋಟಾದ ಡಿಪ್ಲೊಮಾ ಸೀಟಿಗೆ ಪ್ರವೇಶವನ್ನು ಮೆರಿಟ್ ಹಾಗೂ ಪಾರದರ್ಶಕವಾಗಿ ನಡೆಸಲು
ತಾಂತ್ರಿಕ ಶಿಕ್ಷಣ ಇಲಾಖೆ ಮತ್ತೆ ಹಳೇ ವಿಧಾನ (ಆನ್‌ಲೈನ್ ಇಂಟರಾಕ್ಟೀವ್ ಕೌನ್ಸೆಲಿಂಗ್) ಅನುಸರಿಸಲು ಮುಂದಾಗಿದೆ. ಪ್ರಸಕ್ತ ಸಾಲಿನ (2017-18) ರಾಜ್ಯದ 81 ಸರ್ಕಾರಿ, 44 ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಲಭ್ಯವಿರುವ ಪೂರ್ಣ ಸೀಟಿಗೆ ಮತ್ತು 187 ಖಾಸಗಿ ಪಾಲಿಟೆಕ್ನಿಕ್ ಕಾಲೇಜುಗಳ ಸರ್ಕಾರಿ ಕೋಟಾದ ಸೀಟುಗಳ ಪ್ರವೇಶ
ಆನ್‌ಲೈನ್ ಇಂಟರಾಕ್ಟೀವ್ ಕೌನ್ಸೆಲಿಂಗ್ ಮೂಲಕ ನಡೆಯಲಿದೆ. ಇದು ಕರ್ನಾಟಕದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸಲಿದೆ.
ಎಸ್ಸೆಸ್ಸೆಲ್ಸಿ ಅಥವಾ ತತ್ಸಮ ಕೋರ್ಸ್‌ಗಳಲ್ಲಿ ಶೇ.35ಕ್ಕಿಂತ ಅಧಿಕ ಅಂಕಪಡೆದ ವಿದ್ಯಾರ್ಥಿಗಳು ಪ್ರಥಮ ಡಿಪ್ಲೊಮಾ
ಕೋರ್ಸ್‌ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಥವಾ ತಾಂತ್ರಿಕ ಶಿಕ್ಷಣ ಇಲಾಖೆ ವೆಬ್ ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮೂಲ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಅರ್ಜಿ ಜತೆಗೆ ಅಪ್ ಲೋಡ್ ಮಾಡಬೇಕಿದ್ದು, ಮೂಲ ದಾಖಲೆಗಳ ಮಾಹಿತಿ ಮತ್ತು ಆನ್‌ಲೈನ್ ಅರ್ಜಿಯಲ್ಲಿರುವ ಮಾಹಿತಿ ಒಂದೇ ಆಗಿರಬೇಕು. ಆನ್‌ಲೈನ್ ಅರ್ಜಿ ಸ್ವೀಕೃತವಾದ ನಂತರ ಆನ್‌ಲೈನ್ ಇಂಟರಾಕ್ವೀಟ್ ಕೌನ್ಸೆಲಿಂಗ್ ನಡೆಯಲಿದೆ.
ಏನಿದು ಇಂಟರಾಕ್ಟೀವ್ ಕೌನ್ಸೆಲಿಂಗ್?: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೆರಿಟ್ ಆಧಾರದಲ್ಲಿ ಅವರ ಪಾಲಕರ ಸಮ್ಮುಖದಲ್ಲೇ ಪ್ರಥಮ ವರ್ಷದ ಡಿಪ್ಲೊಮಾಗೆ ಸೀಟು ಹಂಚಿಕೆ ಮಾಡುವ ಪ್ರಕ್ರಿಯೆಯೇ ಇಂಟರಾಕ್ಟೀವ್ ಕೌನ್ಸೆಲಿಂಗ್. ಬೆಂಗಳೂರು ಸೇರಿ ರಾಜ್ಯದ 11 ನೋಡಲ್ ಕೇಂದ್ರದಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, ದೊಡ್ಡ ಸ್ಕ್ರೀನ್ ಮೂಲಕ ಆನ್‌ಲೈನ್‌ನಲ್ಲೇ ಕಾಲೇಜಿನ ಮಾಹಿತಿ, ಸೀಟು ಲಭ್ಯತೆಯ ವಿವರವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
ವಿದ್ಯಾರ್ಥಿಗಳು ಪಾಲಕರೊಂದಿಗೆ ಚರ್ಚಿಸಿ, ತಮಗೆ ಬೇಕಾದ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸೀಟು ಬೇಡ
ಎಂದಾದರೆ ಎರಡನೇ ಸುತ್ತಿಗೆ ಪ್ರವೇಶ ಪಡೆಯಬಹುದು.
ಹಿನ್ನೆಲೆ: ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ 2012-13ರಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ತರಗತಿ ಪ್ರವೇಶಕ್ಕಾಗಿ ಆನ್‌ಲೈನ್ ಇಂಟರಾಕ್ಟೀವ್ ಕೌನ್ಸೆಲಿಂಗ್ ಪದ್ಧತಿ ಅನುಷ್ಠಾನ ಮಾಡಿತ್ತು. 2012-13, 2013-14 ಹಾಗೂ 2014-15ರ ತನಕ ಈ ವ್ಯವಸ್ಥೆಯಲ್ಲೇ ಪ್ರವೇಶ ಪ್ರಕ್ರಿಯೆ ನಡೆದಿತ್ತು. ಈ ಮೂರು ವರ್ಷದಲ್ಲಿ ಆದ ಕೆಲವೊಂದು ದೋಷದಿಂದ
ಸರ್ಕಾರವೇ ಆನ್‌ಲೈನ್ ಇಂಟರಾಕ್ಟೀವ್ ಪದ್ಧತಿ ತೆಗೆದು 2015-16 ಹಾಗೂ 2016-17ನೇ ಸಾಲಿನಲ್ಲಿ ನಾನ್ ಇಂಟರಾಕ್ಟೀವ್ ಪದ್ಧತಿ ಅಳವಡಿಸಲಾಯಿತು. ಈ ವರ್ಷದಿಂದ ಮತ್ತೆ ಆನ್‌ಲೈನ್ ಇಂಟರಾಕ್ಟೀವ್ ಪ್ರವೇಶ ಪದ್ಧತಿ
ಅನುಸರಿಸಲು ಸರ್ಕಾರವೇ ಸೂಚನೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.