ಆನ್‌ಲೈನ್ ಗೇಮ್ ನಿಯಂತ್ರಣಕ್ಕೆ ಅಧ್ಯಯನ: ಜೆ.ಸಿ.ಮಾಧುಸ್ವಾಮಿ
Team Udayavani, Oct 31, 2021, 6:29 AM IST
ಬೆಂಗಳೂರು: ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆಯು ಪ್ರಸಕ್ತ ವರ್ಷ ಹಲವು ಪ್ರಮುಖ ವಿಷಯಗಳ ಬಗ್ಗೆ ಅಧ್ಯಯನ ನಡೆಸಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆಯ ನವೀಕೃತ ವೆಬ್‌ಸೈಟಿಗೆ ಚಾಲನೆ ನೀಡಿ ಮಾತನಾಡಿದ ಅವರು, ಆನ್‌ಲೈನ್ ಗೇಮಿಂಗ್ ನಿಯಂತ್ರಣ, ಖಾಸಗಿತನದ ಹಕ್ಕು, ನ್ಯಾಯಾಂಗ ವ್ಯವಸ್ಥೆಯ ಅಧ್ಯಯನ, ಸಾಕ್ಷಿಗಳ ಸಂರಕ್ಷಣೆ, ಸದನದಲ್ಲಿ ಶಾಸಕರ ಕಡ್ಡಾಯ ಹಾಜರಾತಿ, ಪರಿಣಾಮಕಾರಿ ಭಾಗ ವಹಿಸುವಿಕೆ, ಕರ್ತವ್ಯ ಹಾಗೂ ಜವಾಬ್ದಾರಿ ಕುರಿತು ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಸಂಸದೀಯ ವ್ಯವಸ್ಥೆ ಸುಧಾರಣೆ ಗಾಗಿ ಅಧಿವೇಶನಗಳ ಕಾರ್ಯ ಕಲಾಪಗಳಲ್ಲಿ ವ್ಯತ್ಯಯ ಉಂಟಾ ಗುತ್ತಿರುವುದನ್ನು ನಿಯಂತ್ರಿಸಲು ತಜ್ಞರ ಜತೆ ಚರ್ಚಿಸಿ ಅಧ್ಯಯನ ನಡೆಸಲಾಗುವುದು ಎಂದರು.
ಇದನ್ನೂ ಓದಿ:ಚೀನಾ ಸೈನಿಕರ ಪತ್ತೆಗಾಗಿ ಹೊಸ ತಂತ್ರಜ್ಞಾನ : ಗಡಿ ಉಲ್ಲಂಘನೆ ತಪ್ಪಿಸಲು ಈ ಪ್ರಯತ್ನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.