Subramanian Swamy: ನಾಗಮಂಗಲ ಗಲಭೆ; ಸೂಕ್ತ ದಾಖಲೆ ನೀಡಿದರೆ ಸುಪ್ರಿಂಕೋರ್ಟ್‌ನಲ್ಲಿ ದಾವೆ
Team Udayavani, Sep 14, 2024, 10:38 PM IST
ಕಾರ್ಕಳ: ನಾಗಮಂಗಲ ಗಲಭೆ ಅಹಿತಕರ ಘಟನೆ. ಮುಸ್ಲಿಮರು ಕಲ್ಲು ಎಸೆದಿದ್ದಾರೆ ಹಾಗೂ ಅವರ ವಿರುದ್ಧ ಸರಕಾರ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಬಗ್ಗೆ ಸರಿಯಾದ ದಾಖಲೆ ನೀಡಿದರೆ ಸುಪ್ರಿಂ ಕೋರ್ಟ್‌ನಲ್ಲಿ ದಾವೆ ಹೂಡಿ ಪ್ರಬಲ ವಾದ ಮಂಡನೆ ಮಾಡುವುದಾಗಿ ಮಾಜಿ ಕೇಂದ್ರ ಸಚಿವ, ವಿರಾಟ್ ಹಿಂದೂ ಸ್ಥಾನ್ ಸಂಗಮದ ರಾಷ್ಟ್ರೀಯ ಅಧ್ಯಕ್ಷ ಡಾ| ಸುಬ್ರಮಣಿಯನ್ ಸ್ವಾಮಿ ಹೇಳಿದರು.
ಮಂಗಳೂರಿನಿಂದ ಶೃಂಗೇರಿಗೆ ತೆರಳುವ ಮಾರ್ಗ ಮಧ್ಯೆ ಕಾರ್ಕಳದ ಪತ್ತೂಂಜಿಕಟ್ಟೆ ಶ್ರೀ ದತ್ತಾತ್ರೇಯ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
ರಾಮಸೇತು ಪಾರಂಪರಿಕ ಸ್ಮಾರಕವಾಗಬೇಕು:
ರಾಮಸೇತು ಹಿಂದೂಗಳಿಗೆ ಅತ್ಯಂತ ಭಾವನಾತ್ಮಕ ವಿಷಯ ವಾಗಿದ್ದು, ಇದನ್ನು ದೇಶದ ಪಾರಂಪರಿಕ ಸ್ಮಾರಕವಾಗಿ ಘೋಷಿಸಲು ಆಗ್ರಹಿಸುವೆ. ಕೇಂದ್ರ ಸರಕಾರ ಇದಕ್ಕೆ ಯಾಕೆ ಹಿಂಜರಿಯುತ್ತಿದೆ ಎನ್ನುವುದು ಗೊತ್ತಿಲ್ಲ ಎಂದರು.
ವಿರಾಟ್ ಹಿಂದೂ ಸಂಗಮದ ಕಾರ್ಯ ಶೈಲಿ ಭಿನ್ನವಾದುದು. ಇದು ಪರಂಪರೆ, ಸಂಸ್ಕೃತಿ ಇತಿಹಾಸ, ಹಿಂದುತ್ವ, ಸಂಸ್ಕೃತದ ಬಗ್ಗೆ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದ್ದು, ಇದು ರಾಜಕೀಯ ಸಂಘಟನೆ ಅಲ್ಲ ಎಂದರು.
ಸರಕಾರ ಹಿಂದೂ ದೇವಾಲಯವನ್ನು ತನ್ನ ವಶಕ್ಕೆ ಪಡೆದಿರುವುದು ಸಂವಿಧಾನ ಬಾಹಿರ. ನಾನು ತಮಿಳುನಾಡಿನಲ್ಲಿ ಕೆಲವು ದೇವಸ್ಥಾನಗಳನ್ನು ಸರಕಾರದ ಅಧೀನದಿಂದ ಬಿಡಿಸಿದ್ದೇನೆ. ಕರ್ನಾಟಕ ಹಾಗೂ ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲೂ ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದೇವೆ ಎಂದವರು ಹೇಳಿದರು.
ಮೋದಿ ಹೆಚ್ಚು ದಿನ ಪ್ರಧಾನಿ ಆಗಿರುವುದಿಲ್ಲ:
ಕೇಂದ್ರದಲ್ಲಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಹೆಚ್ಚು ದಿನ ಇರುವುದಿಲ್ಲ. ಅವರು ಅಧಿಕಾರ ಬಿಟ್ಟು ಕೊಡಲೇಬೇಕು. ಬಿಜೆಪಿಯಲ್ಲಿ ಯಾರು ಬೇಕಾದರೂ ಪ್ರಧಾನಿಯಾಗಬಹುದು. ಮುಂದಿನ ಪ್ರಧಾನಿ ಯಾರಾಗುತ್ತಾರೆಂದು ಈಗಲೇ ಹೇಳಿದಲ್ಲಿ ಹೆಸರು ಹಾಳಾಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.