ಕೋವಿಡ್ ಸಂಕಷ್ಟದ ಕಾಲದಲ್ಲಿ ಮಾಧ್ಯಮ ನಿರ್ವಹಿಸುತ್ತಿರುವ ಜವಾಬ್ದಾರಿ ಹಿರಿದು: ಸುರೇಶ್ ಕುಮಾರ್
Team Udayavani, May 12, 2021, 1:14 PM IST
ಬೆಂಗಳೂರು: ಕಳೆದ ನಲವತ್ತು ವರ್ಷಗಳಿಂದಲೂ ನಿರಂತರವಾಗಿ ಸಾರ್ವಜನಿಕ ಸೇವೆಯಲ್ಲಿದ್ದು, ಮಾಧ್ಯಮಗಳ ಕರ್ತವ್ಯ ಪ್ರಜ್ಞೆಯನ್ನು ಗಮನಿಸುತ್ತಲೇ ಬಂದಿದ್ದೇನೆ. ರೂಪಾಂತರಗೊಳ್ಳುತ್ತಿರುವ ಸವಾಲುಗಳ ನಡುವೆ ಈ ಕ್ಷೇತ್ರದ ಹೊಣೆಗಾರಿಕೆ ಹಿರಿದಾಗುತ್ತಲೇ ಇದೆ. ಅಂತೆಯೇ ಮಾಧ್ಯಮ ಕ್ಷೇತ್ರವೂ ಈ ಸವಾಲುಗಳನ್ನು ದಿಟ್ಟವಾಗಿ ಸ್ವೀಕರಿಸಿ ಜನಸಾಮಾನ್ಯರಿಗೆ ನೈಜ ಸುದ್ದಿಯನ್ನು ತಲುಪಿಸುವಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಎಚ್.ಎಸ್.ಆರ್ ಲೇಔಟಿನಲ್ಲಿ ನೂತನ ಟ್ರಯಾಜ್ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನಸಾಮಾನ್ಯರ, ಸರ್ಕಾರದ ನಡುವೆ ಕೊಂಡಿಯಂತೆ ತನ್ನ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದೆ. ಮಾಧ್ಯಮ ಕ್ಷೇತ್ರ ಸಕ್ರಿಯವಾಗಿ ಕಾರ್ಯ ನಿರ್ವಹಿಸದೇ ಇದ್ದಲ್ಲಿ ನಮ್ಮ ನಾಗರಿಕರು ಇಷ್ಟು ಸಬಲರಾಗಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಗಮನಿಸಿಯೇ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತ ಮಿತ್ರರನ್ನು ಕೋವಿಡ್ ಫ್ರಂಟ್ ಲೈನ್ ವಾರಿಯರ್ ಗಳಾಗಿ ಸರ್ಕಾರ ಗುರುತಿಸಿದೆ ಎಂದರು.
ಇದನ್ನೂ ಓದಿ:ಮಹಿಳಾಪರ ಬಜೆಟ್ ಎನ್ನುವುದು ಬಾಯಿಮಾತಿಗಷ್ಟೇ ಸೀಮಿತವೇ?: ಸಿದ್ದರಾಮಯ್ಯ
ಈ ಆರೈಕೆ ಕೇಂದ್ರದಲ್ಲಿ ಒಟ್ಟು ಎಂಬತ್ತು ಸೋಂಕಿತರಿಗೆ ಒಮ್ಮೆಗೇ ಚಿಕಿತ್ಸೆ ನೀಡುವ ಸೌಕರ್ಯವಿದೆ. ಆಮ್ಲಜನಕ ಸಾಂದ್ರಕದ (Oxygen concentrator) ವ್ಯವಸ್ಥೆ ಇರುವ ಕಾರಣ, ಮನೆಯಲ್ಲಿ ಸ್ವಯಂ ನಿರ್ವಹಿಸಿಕೊಳ್ಳಲು ಅಥವಾ ಆಸ್ಪತ್ರೆಗೆ ನೇರ ದಾಖಲಾಗಲು ಸಾಧ್ಯವಾಗದ ಸೋಂಕಿತರಿಗೆ ಪ್ರಥಮ ಚಿಕಿತ್ಸೆಯ ಮಾದರಿಯಲ್ಲಿ ಈ ಕೇಂದ್ರ ಅತ್ಯುತ್ತಮ ಆರೈಕೆಯನ್ನು ಒದಗಿಸುತ್ತದೆ. ಸೋಂಕಿತರ ವೈದ್ಯಕೀಯ ಶುಶ್ರೂಶೆಗೆ ನುರಿತ ವೈದ್ಯಕೀಯ ಸಿಬ್ಬಂದಿ ಸದಾಕಾಲ ಲಭ್ಯವಿರಲಿದ್ದು, ದಾಖಲಾಗುವವರಿಗೆ ಉಚಿತ ಆಹಾರ, ಔಷಧೋಪಚಾರಗಳನ್ನು ನೀಡಲಾಗುತ್ತದೆ. ಸೋಂಕು ನಿಯಂತ್ರಣಕ್ಕೆ ಬಾರದ ವ್ಯಕ್ತಿಗಳನ್ನು ಇಲ್ಲಿಂದಲೇ ಆಸ್ಪತ್ರೆಗೆ ನೇರ ದಾಖಲಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ನಾಗರಿಕರು ಈ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUDA case; ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಕರೆದ ಲೋಕಾಯುಕ್ತ ಪೊಲೀಸರು
Waqf Notice: ʼವಕ್ಫ್ ಬೋರ್ಡ್‌ಗೆ ಆಸ್ತಿ ನೋಂದಣಿ ತಕ್ಷಣ ಸ್ಥಗಿತಗೊಳಿಸಲು ಸಿಎಸ್‌ಗೆ ಸೂಚಿಸಿʼ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.