ರಾಜ್ಯದಲ್ಲಿ ದಮನಿತ ಮಹಿಳೆಯರ ಸಮೀಕ್ಷೆ
Team Udayavani, Mar 9, 2019, 2:28 AM IST
ಬೆಂಗಳೂರು: “ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ಕರ್ನಾಟಕ ಸರ್ಕಾರವು ದಮನಿತ ಮಹಿಳೆಯರ ಸಮೀಕ್ಷೆ ನಡೆಸಿದ್ದು, ಅವರನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಮುಖ್ಯವಾಹಿನಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದಿಟಛಿ ಇಲಾಖೆ ಸಚಿವೆ ಡಾ.ಜಯಮಾಲ ರಾಮಚಂದ್ರ ತಿಳಿಸಿದರು.
ಅಂತಾರಾಷ್ಟ್ರೀಯ ಮಹಿಳಾ ದಿನ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ “ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಸಮಾಜದಲ್ಲಿ ಸಾಕಷ್ಟು ದಮನಿತ ಮಹಿಳೆಯರಿದ್ದು, ಅವರಿಗೆ ಪುನರ್ವಸತಿ ಕಲ್ಪಿಸುವ ಅಗತ್ಯವಿದೆ. 2011ರಲ್ಲಿ ವಿಶ್ವಸಂಸ್ಥೆ ಹಾಗೂ ಸುಪ್ರೀಂಕೋರ್ಟ್ ಎಲ್ಲ ರಾಜ್ಯಗಳಿಗೂ ದಮನಿತ ಮಹಿಳೆಯರ ಸಮೀಕ್ಷೆಗೆ ತಿಳಿಸಿತ್ತಾದರೂ ಯಾವ ರಾಜ್ಯವೂ ಈ ಬಗ್ಗೆ ಗಮನ ಹರಿಸಲಿಲ್ಲ. ಆದರೆ, ಮಹಿಳೆ ಪರ ಚಿಂತನೆ ಇಟ್ಟುಕೊಂಡ ರಾಜ್ಯ ಸರ್ಕಾರ ಕಾನೂನು ಸೇವೆಗಳ ಪ್ರಾಧಿಕಾರ ಸಹಕಾರದೊಂದಿಗೆ 30 ಜಿಲ್ಲೆ 176 ತಾಲೂಕಿನ 11,100 ಮಾದರಿಗಳನ್ನು ಸಮೀಕ್ಷೆ ನಡೆಸಿದೆ. ಜತೆಗೆ ಅವರನ್ನು ಮುಖ್ಯವಾಹಿನಿಗೆ ತರಲು ಬಜೆಟ್‌ನಲ್ಲಿ 11.5 ಕೋಟಿ ರೂ.ಅನುದಾನ ನೀಡಿದೆ ಎಂದರು.
ಸರ್ಕಾರದ ವತಿಯಿಂದ ಈ ಮಹಿಳಾ ದಿನ ಗೌರವವು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಸ್ತ್ರೀ ಶಕ್ತಿ
ಸಂಘದ ಸದಸ್ಯೆಯರಿಗೆ ಸಲ್ಲಬೇಕಿದೆ ಎಂದರು.
ಮಹಿಳೆಯರ ಸಮಸ್ಯೆಗಳಿಗೆ ಒಂದೇ ಸೂರಿನಡಿ ಪೊಲೀಸ್ ನೆರವು, ಕಾನೂನು ಸಲಹೆ, ವೈದ್ಯಕೀಯ ಸೇವೆಗಳು ಶೀಘ್ರವಾಗಿ ಒದಗಿಸುವ ನಿಟ್ಟಿನಲ್ಲಿ 27/7 ಕಾರ್ಯನಿರ್ವಹಿಸುವ 181 ಸಹಾಯವಾಣಿ ಈಗಾಗಲೇ ಲಭ್ಯವಿದ್ದು, ಮಹಿಳೆಯರು ಈ ಸೇವೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ “ಅಂತರಾಳ -14′ ಕಿರುಹೊತ್ತಿಗೆ ಹಾಗೂ ಕರ್ನಾಟಕ ಮಹಿಳಾ ಆಯೋಗದ ವತಿಯಿಂದ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಯಿತು. ಮಹಿಳಾಆಯೋಗ ಅಧ್ಯ ಕ್ಷೆ ನಾಗಲಕ್ಷ್ಮೀ ಬಾಯಿ, ಕಾನೂನು ಸೇವೆಗಳ ಪ್ರಾಧಿಕಾರದ ಸಜೀವ್ ಕುಮಾರ್ ಸೇರಿ ಇಲಾಖೆಗಳ ಮುಖ್ಯಸ್ಥರು ಇದ್ದರು.
ನಾಡಗೀತೆ ಒಂದು ನಿಮಿಷಕ್ಕೆ ಇಳಿಸಿ:ಸಾಹಿತ್ಯ ವಿಭಾಗದಲ್ಲಿ ಪ್ರಶ ಸ್ತಿ ಸ್ವೀಕರಿಸಿ ಮಾತನಾಡಿದ ಕಮಲಾ ಹಂಪನಾ,
ವಿದೇಶಗಳಲ್ಲಿ ಅಲ್ಲಿನ ರಾಷ್ಟ್ರಗೀತೆಗಳನ್ನು 1 ನಿಮಿಷ ಮೀರಿ ಹಾಡುವುದಿಲ್ಲ. ಆದರೆ, ನಮ್ಮ ನಾಡಗೀತೆಯು
ದೀರ್ಘಾವಧಿಯಲ್ಲಿದ್ದು, ಅದನ್ನು ಒಂದು ನಿಮಿಷಕ್ಕೆ ಇಳಿಸವ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಈ ಕುರಿತು
ಸರ್ಕಾರ ಕ್ರಮವಹಿಸಬೇಕು ಎಂದರು.
26 ಮಂದಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ
ವಿವಿಧ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ 6 ಸಂಸ್ಥೆ ಸೇರಿ 26 ಮಂದಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಂಸ್ಥೆಗಳು: ಬೆಂಗಳೂರಿನ ವಿದ್ಯಾರಣ್ಯಪುರದ ಮಹಿಳಾ ದಕ್ಷತಾ ಸಮಿತಿ, ಹರಿಶ್ಚಂದ್ರ ಘಾಟ್ ಹತ್ತಿರದ ಸ್ವಾತಿ ಮಹಿಳಾ ಸಂಘ, ಮೈಸೂರಿನ ಶಕ್ತಿಧಾಮ, ಹೊಸಪೇಟೆಯ ಸಖೀ, ಗದಗದ ಮಹಾಲಕ್ಷ್ಮೀ ಮಹಿಳಾ ವಿವಿದೋದ್ದೇಶಗಳ ತರಬೇತಿ ಕಲಾಕೇಂದ್ರ ಹಾಗೂ ಧಾರವಾಡದ ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ, ಮಹಿಳಾ ಅಭಿವೃದಿಟಛಿ ವಿಭಾಗ: ದು.ಸರಸ್ವತಿ (ಬೆಂಗಳೂರು), ಮಾಯಾ ಶರ್ಮಾ (ಬೆಂಗಳೂರು), ಸೌಮ್ಯ (ಮೈಸೂರು), ಜಾನಕಮ್ಮ (ಪಿರಿಯಾಪಟ್ಟಣ), ಕೆ.ನೀಲಾ (ಕಲಬುರ್ಗಿ), ಮೀನಾಕ್ಷಿ (ಬೆಳಗಾವಿ), ಡಾ.ಎಚ್.ಎಸ್.ಅನುಪಮಾ (ಹೊನ್ನಾವರ).
ಕಲಾಕ್ಷೇತ್ರ: ಹಿರಿಯ ಕಲಾವಿದೆ ಬಿ.ಸರೋಜಾದೇವಿ, ಕೃಪಾ ಫಡೆR (ಮೈಸೂರು), ಡಾ.ಸುಭದ್ರಮ್ಮ ಮನ್ಸೂರ್ (ಬಳ್ಳಾರಿ), ಮಂಜಮ್ಮ ಜೋಗತಿ (ಹೊಸಪೇಟೆ), ಸಂಗಮ್ಮ ಕಡಕೋಳ (ಬೆಳಗಾವಿ).
ಸಾಹಿತ್ಯ ಕೇತ್ರ: ಸಾಹಿತಿ ಕಮಲಾ ಹಂಪನಾ, ಡಾ.ಗಾಯಶ್ರೀ ನಾವಡ (ದಕ್ಷಿಣ ಕನ್ನಡ) , ಡಾ.ವಿನಯಾ ಒಕ್ಕುಂದ (ಧಾರವಾಡ)
ಕ್ರೀಡಾ ಕ್ಷೇತ್ರ: ಸಬೀಯಾ, ಮಮತಾ ಪೂಜಾರಿ (ಬೆಂಗಳೂರು)
ಶಿಕ್ಷಣ ಕ್ಷೇತ್ರ: ಶಶಿಕಲಾ ಗುರುಪುರ (ದಕ್ಷಿಣ ಕನ್ನಡ)
ವೀರ ಮಹಿಳೆ: ವನಜಾ ಕೋಂ ಪೂವ ಪೂಜಾರಿ (ಉಡುಪಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Belagavi: ಕಾಂಗ್ರೆಸ್ ಶಕ್ತಿ ಏನೆಂದು ನಮಗಿಂತ ಚೆನ್ನಾಗಿ ಬಿಜೆಪಿಯವರಿಗೆ ಗೊತ್ತಿದೆ: ಡಿಕೆಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
World Rapid Chess: ಕಡೆಗೂ ಅರ್ಜುನ್ ಎರಿಗೈಸಿಗೆ ಅಮೆರಿಕ ವೀಸಾ
Women’s ODI: ಹರ್ಲೀನ್ ಶತಕ; ವಿಂಡೀಸ್ ವಿರುದ್ಧ ಭಾರತಕ್ಕೆ 2-0 ಸರಣಿ ಜಯ
Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.