ಮಧ್ಯಂತರ ಅಧ್ಯಕ್ಷರಾಗಿ ಎಸ್.ವಿ.ರಂಗನಾಥ್ ಆಯ್ಕೆ
Team Udayavani, Aug 1, 2019, 3:06 AM IST
ಬೆಂಗಳೂರು: ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಸಾವು ಖಚಿತವಾದ ಬಳಿಕ ನಗರದ ವಿಠuಲ್ ಮಲ್ಯ ರಸ್ತೆಯಲ್ಲಿರುವ ಕಂಪನಿಯ ಕೇಂದ್ರ ಕಚೇರಿಯಲ್ಲಿ ಮಂಡಳಿ ನಿರ್ದೇಶಕರ ಸಭೆ ನಡೆಸಿ, ಕಂಪನಿ ಹಿತದೃಷ್ಟಿಯಿಂದ ಹತ್ತು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಮಂಗಳವಾರ ಕರೆದಿದ್ದ ತುರ್ತು ಸಭೆಯನ್ನು ಜರ್ಮನಿ ಮತ್ತು ಮುಂಬೈ ಮೂಲದ ನಿರ್ದೇಶಕರು ಬಾರದ ಕಾರಣ ಬುಧವಾರಕ್ಕೆ ಮುಂದೂಡಲಾ ಗಿತ್ತು. ಆರು ನಿರ್ದೇಶಕರನ್ನು ಒಳಗೊಂಡಿದ್ದ ಕೆಫೆ ಕಾಫಿ ಡೇನ ನಿರ್ದೇಶಕ ಮಂಡಳಿ, ಮಾಳವಿಕ ಸಿದ್ದಾರ್ಥ್ ಅವರ ಅನುಪಸ್ಥಿತಿ ಯಲ್ಲಿ ನಾಲ್ವರು ನಿರ್ದೇಶಕರ ನೇತೃತ್ವದಲ್ಲಿ ನಡೆಯಿತು.
ಸಿದ್ಧಾರ್ಥ್ ಸಾವಿನ ಬಳಿಕ ನಡೆದ ಮೊದಲ ಸಭೆಯಲ್ಲಿ ಮೊದಲಿಗೆ ಸಿದ್ದಾರ್ಥ್ ಸಾವಿಗೆ ಸಂತಾಪ ಸೂಚಿಸಲಾಯಿತು. ಬಳಿಕ, ಷೇರು ವಿನಿಮಯ ಸೇರಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ನಿರ್ದೇಶಕರು ಕೈಗೊಂಡಿದ್ದಾರೆ. ಕಂಪನಿಯ ಹಿತದೃಷ್ಟಿಯಿಂದ ಹಲವಾರು ಹೊಸ ನೇಮಕಾತಿಗಳನ್ನು ಕೂಡ ಮಾಡಲಾಯಿತು. ನಿರ್ದೇಶಕರ ಎಲ್ಲಾ ತೀರ್ಮಾನಗಳಿಗೆ ಮಾಳವಿಕ ಸಮ್ಮತಿ ಸೂಚಿಸಿದ್ದಾರೆ.
ಮಾಜಿ ಐಎಎಸ್ ಅಧಿಕಾರಿ ಹಾಗೂ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ಮತ್ತು ನಿತಿನ್ ಬಾಗ¾ನೆ ಅವರನ್ನು ಮುಖ್ಯ ನಿರ್ವಹಣಾಧಿಕಾರಿ (ಸಿಒಒ) ಹಾಗೂ ರಾಮ್ ಮೋಹನ್ ಅವರನ್ನು ಮುಖ್ಯ ಹಣಕಾಸು ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಸಭೆಯ ಪ್ರಮುಖ ನಿರ್ಧಾರಗಳು
-ಮಾಳವಿಕ ಸಿದ್ಧಾರ್ಥ್, ಮ್ಯಾನೇಜ್ಮೆಂಟ್‌ಗೆ ತಮ್ಮ ಸಂಪೂರ್ಣ ಬೆಂಬಲ.
-ಸಿಬ್ಬಂದಿ, ಹೂಡಿಕೆದಾರ ಮತ್ತು ಗ್ರಾಹಕರ ಹಿತ ಕಾಯಬೇಕು.
-ದಿನನಿತ್ಯದ ವ್ಯವಹಾರಗಳಿಗಾಗಿ ಮಧ್ಯಂತರ ಅಧ್ಯಕ್ಷರಾಗಿ ಎಸ್.ವಿ.ರಂಗನಾಥ್ ನೇಮಕ.
-ಮುಖ್ಯ ನಿರ್ವಹಣಾ ಅಧಿಕಾರಿಯಾಗಿ ನಿತಿನ್ ಬಾಗ್ಮನೆ ನೇಮಕ. ಮೂವರ ಕಾರ್ಯಕಾರಿ ಸಮಿತಿ ನೇಮಕ.
-ಸಿದ್ಧಾರ್ಥ್ ಅವರ ಕೊನೆಯ ಪತ್ರದ ತನಿಖೆಗೆ ಚಿಂತನೆ. ಆಗಸ್ಟ್ 8ಕ್ಕೆ ಆಡಿಟರ್ ಒಳಗೊಂಡ ಸಭೆ.
-ಕಾನೂನು ಸಲಹೆಗೆ ಮುಂಬೈ ಮೂಲದ ಸಿವಿಲ್ ಅಮರ್ ಚಂದ್ ಮಂಗಳ್ ದಾಸ್ ಕಂಪನಿ ನೇಮಕ.
-ಆಗಸ್ಟ್ 8ಕ್ಕೆ ಆಡಿಟರ್ಸ್ ಜತೆ ನಿರ್ದೇಶಕರ ಸಭೆ ನಡೆಸಲು ತೀರ್ಮಾನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.