ಸ್ವಚ್ಛ ಸರ್ವೇಕ್ಷಣ್‌ : ರಾಜ್ಯದ ಏಳು ನಗರಗಳಿಗೆ ಮನ್ನಣೆ


Team Udayavani, Nov 21, 2021, 7:15 AM IST

ಸ್ವಚ್ಛ ಸರ್ವೇಕ್ಷಣ್‌ : ರಾಜ್ಯದ ಏಳು ನಗರಗಳಿಗೆ ಮನ್ನಣೆ

ಹೊಸದಿಲ್ಲಿ: ಕೇಂದ್ರ ಸರಕಾರದ ವಾರ್ಷಿಕ ಸ್ವಚ್ಛತ ಸಮೀಕ್ಷೆಯಾದ “ಸ್ವಚ್ಛ ಸರ್ವೇಕ್ಷಣ್‌ ಪಟ್ಟಿ’ಯಲ್ಲಿ ಪ್ರಸಕ್ತ ವರ್ಷ ರಾಜ್ಯದ 7 ನಗರಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯ ಕಿರೀಟವನ್ನು ತಮ್ಮದಾಗಿಸಿಕೊಂಡಿವೆ.

ಮೈಸೂರಿಗೆ 4 ವಿಭಾಗಗಳಲ್ಲಿ ಪ್ರಶಸ್ತಿ ಲಭಿಸಿದರೆ ಬೆಂಗಳೂರು ನಗರ, ಹುಬ್ಬಳ್ಳಿ-ಧಾರವಾಡ, ಮುಧೋಳ, ಕುಮಟಾ, ಕೆ.ಆರ್‌. ನಗರ, ಹೊಸದುರ್ಗನಗರ ಕೂಡ ಉತ್ತಮ ಸಾಧನೆ ಮಾಡಿ ಪ್ರಶಸ್ತಿಯನ್ನು ದಕ್ಕಿಸಿಕೊಂಡಿವೆ. ಸತತ 5ನೇ ಬಾರಿ ಇಂದೋರ್‌ ದೇಶದಲ್ಲೇ ಅತ್ಯಂತ ಸ್ವಚ್ಛ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ.

ದಿಲ್ಲಿಯಲ್ಲಿ ಶನಿವಾರ ನಡೆದ “ಸ್ವಚ್ಛ ಅಮೃತ ಮಹೋತ್ಸವ’ದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ರಾಜ್ಯಕ್ಕೆ ಖುಷಿ:

ಪಟ್ಟಿಯಲ್ಲಿ 40 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಬೆಂಗಳೂರು “ವೇಗವಾಗಿ ಬೆಳೆಯುತ್ತಿರುವ ಮೆಗಾ ಸಿಟಿ’ ಎಂಬ ಸ್ಥಾನ ಗಳಿಸಿದೆ.

ಮೈಸೂರಿಗೆ ಹಿರಿಮೆ :

  • ಸ್ವಚ್ಛ ನಗರಿ 12ನೇ ಸ್ಥಾನ (1 ಲಕ್ಷ ಮೇಲ್ಪಟ್ಟ ಜನಸಂಖ್ಯೆಯ ನಗರ)
  • ಸ್ವಚ್ಛ ನಗರಿ 7ನೇ ಸ್ಥಾನ (1 ಲಕ್ಷ-10 ಲಕ್ಷದೊಳಗಿನ ಜನಸಂಖ್ಯೆಯ ನಗರ)
  • ಅತ್ಯುತ್ತಮ ಸ್ವಯಂ-ಸುಸ್ಥಿರ ನಗರ
  • ತ್ಯಾಜ್ಯ ಮುಕ್ತ ನಗರಗಳ ಪೈಕಿ ಫೈವ್‌ ಸ್ಟಾರ್‌

ರಾಜ್ಯದ ಇತರ ನಗರಗಳು :

  • ಬೆಂಗಳೂರು: ವೇಗವಾಗಿ ಬೆಳೆಯುತ್ತಿರುವ ಮೆಗಾ ಸಿಟಿ
  • ಹುಬ್ಬಳ್ಳಿ-ಧಾರವಾಡ: ವೇಗವಾಗಿ ಬೆಳೆಯುತ್ತಿರುವ ಮಧ್ಯಮ ನಗರ
  • ಮುಧೋಳ: ದಕ್ಷಿಣ ವಲಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರ (50,000-1 ಲಕ್ಷ ಜನಸಂಖ್ಯೆ)
  • ಹೊಸದುರ್ಗ: ದಕ್ಷಿಣ ವಲಯದ ಸ್ವಚ್ಛ ನಗರಿ (25,000-50,000 ಜನಸಂಖ್ಯೆ)
  • ಕುಮಟಾ: ಅತ್ಯುತ್ತಮ ಸ್ವಯಂ-ಸುಸ್ಥಿರ ನಗರ
  • ಕೆ.ಆರ್‌. ನಗರ- ದಕ್ಷಿಣ ವಲಯದಲ್ಲಿ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ಬಂದ ಅತ್ಯುತ್ತಮ ನಗರ

“ವೇಗವಾಗಿ ಬೆಳೆಯುತ್ತಿರುವ ಮಧ್ಯಮ ನಗರ’ ಎಂಬ ಹೆಗ್ಗಳಿ ಕೆಗೆ ಹುಬ್ಬಳ್ಳಿ-ಧಾರವಾಡ ಪಾತ್ರವಾಗಿದೆ.  ಒಂದು ಲಕ್ಷಕ್ಕಿಂತ ಅಧಿಕ ಜನಸಂಖ್ಯೆಯಿರುವ ನಗರಗಳ ಪಟ್ಟಿಯಲ್ಲಿ ಮೈಸೂರು 12ನೇ ಸ್ಥಾನಕ್ಕಿಳಿದಿದೆ. ಈ ಹಿಂದಿನ ವರ್ಷಗಳಲ್ಲಿ ಮೈಸೂರು ಸ್ವತ್ಛ ನಗರಗಳ ಟಾಪ್‌ 5ರೊಳಗೆ ಸ್ಥಾನ ಪಡೆ ಯುತ್ತ ಬಂದಿತ್ತು. ಆದರೆ ಒಂದು ಲಕ್ಷದಿಂದ 10 ಲಕ್ಷ ಜನಸಂಖ್ಯೆ

ಯಿರುವ ನಗರಗಳ ಪೈಕಿ ಮೈಸೂರಿಗೆ 7ನೇ ಸ್ಥಾನ ಸಿಕ್ಕಿದರೆ, ಹುಬ್ಬಳ್ಳಿ-ಧಾರವಾಡಕ್ಕೆ 25ನೇ ಸ್ಥಾನ, ತುಮಕೂರಿಗೆ 50ನೇ ಸ್ಥಾನ ಸಿಕ್ಕಿದೆ. ವಿಶೇಷವೆಂದರೆ “ಮಧ್ಯಮ ಗಾತ್ರದ ಅತ್ಯುತ್ತಮ ಸ್ವಯಂ-ಸುಸ್ಥಿರ ನಗರ’ ಎಂಬ ಹೆಗ್ಗಳಿಕೆಯನ್ನೂ ಮೈಸೂರು ಗಳಿಸಿದ್ದು, ತ್ಯಾಜ್ಯ-ಮುಕ್ತ ನಗರ ವಿಭಾಗದಲ್ಲಿ 5 ಸ್ಟಾರ್‌ಗಳನ್ನು ಪಡೆದಿದೆ.

ಇದೇ ವೇಳೆ 100ಕ್ಕಿಂತ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಿರುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ 8ನೇ ಸ್ಥಾನ ದೊರೆತಿದೆ.

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.