Central Govt; ಸ್ವದೇಶಿ ದರ್ಶನ್‌ -ಪ್ರಸಾದ್‌ ಯೋಜನೆಗಳಿಗೆ ಗ್ರಹಣ

ಕೇಂದ್ರದಿಂದ ಅನುಮೋದನೆ ಸಿಕ್ಕಿದೆ, ಹಣ ಬಂದಿಲ್ಲ

Team Udayavani, Sep 11, 2023, 7:30 AM IST

Central Govt; ಸ್ವದೇಶಿ ದರ್ಶನ್‌ -ಪ್ರಸಾದ್‌ ಯೋಜನೆಗಳಿಗೆ ಗ್ರಹಣ

ಬೆಂಗಳೂರು: ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಪ್ರಮುಖ ಉತ್ತೇಜಕವಾಗಿ ಪ್ರವಾಸೋದ್ಯಮ ಬೆಳೆಸುವ “ಸ್ವದೇಶಿ ದರ್ಶನ್‌’ ಹಾಗೂ ಧಾರ್ಮಿಕ ಯಾತ್ರಾ ಸ್ಥಳಗಳನ್ನು ಉನ್ನತೀಕರಿಸುವ “ಪ್ರಸಾದ್‌’ ಯೋಜನೆಗೆ ರಾಜ್ಯದಲ್ಲಿ ಗ್ರಹಣ ಹಿಡಿದಿದೆ.

ಕೇಂದ್ರ ಸರಕಾರದ ಪುರಸ್ಕೃತ ಯೋಜನೆಗಳಾದ ಸ್ವದೇಶಿ “ದರ್ಶನ್‌’ ಮತ್ತು “ಪ್ರಸಾದ್‌’ಗೆ ಈವರೆಗೆ ಅನುದಾನ ಬಿಡುಗಡೆ ಆಗದಿರುವುದೇ ಇವು ನನೆಗುದಿಗೆ ಬೀಳಲು ಕಾರಣ.

ಸ್ವದೇಶ ದರ್ಶನ್‌ ಯೋಜನೆಯಡಿ ಎರಡು ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕೇಂದ್ರ ಸರಕಾರ 2022ರ ನವೆಂಬರ್‌ನಲ್ಲೇ ಅನುಮೋದನೆ ನೀಡಿದೆ. ಆದರೆ ಅದಕ್ಕೆ ಬೇಕಾದ ಹಣ ಬಿಡುಗಡೆ ಮಾಡಿಲ್ಲ. ಪ್ರಸಾದ್‌ ಯೋಜನೆಯಡಿ ಮೂರು ಧಾರ್ಮಿಕ ಯಾತ್ರಾ ಸ್ಥಳಗಳ ಅಭಿವೃದ್ಧಿಗೆ ಕೇಂದ್ರ ಸರಕಾರ 2022ರ ಸೆಪ್ಟಂಬರ್‌ನಲ್ಲಿ ಅನುಮೋದನೆ ನೀಡಿದೆ. ಇದಕ್ಕೂ ಈವರೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆ ಮೂಲಗಳು ತಿಳಿಸಿವೆ.

“ಪ್ರಸಾದ್‌’ ಯೋಜನೆಯಡಿ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ದೇವಿ ಸನ್ನಿಧಾನ ವನ್ನು 45.70 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಪ್ರವಾಸೋ ದ್ಯಮ ಸಚಿವಾಲ ಯದಿಂದ 2023ರ ಜೂ. 14 ರಂದು ಆಡಳಿತಾತ್ಮಕ ಅನು ಮೋದನೆ ನೀಡಲಾಗಿದ್ದರೂ ಕೇಂದ್ರದಿಂದ ಅನುದಾನ ಬಿಡುಗಡೆ ಆಗಿಲ್ಲ.

ಉಡುಪಿಯ ಕುಂಜಾರುಗಿರಿ
ಪ್ರಸಾದ್‌ ಯೋಜನೆ 2.0 ಅಡಿ ಉಡುಪಿ ಜಿಲ್ಲೆ ಕುಂಜಾರುಗಿರಿ ಮಧ್ವವನ, ಬೀದರ್‌ ಜಿಲ್ಲೆಯ ಪಾಪನಾಶ ದೇವಸ್ಥಾನ, ಅನಂತಶಯನ ದೇವಸ್ಥಾನ, ನರಸಿಂಹ ಗುಹಾಮತರ ದೇವಾ ಲಯ, ಜಲಸಾಂಗ್ವಿ ದೇವಸ್ಥಾನ, ಗುರುನಾನಕ್‌ ಝೀರಾ ಹಾಗೂ ಬೆಳಗಾವಿ ಜಿಲ್ಲೆ ಸವದತ್ತಿ ಯಲ್ಲಮ್ಮ ದೇವಸ್ಥಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರಲ್ಲಿ ಕುಂಜಾರುಗಿರಿ ಮಧ್ವವನ, ಪಾಪನಾಶ ದೇವಸ್ಥಾನ, ಸವದತ್ತಿ ಯಲ್ಲಮ್ಮ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಲು 2022ರ ಸೆ.21ರಂದು ತಾತ್ವಿಕ ಅನುಮೋದನೆ ನೀಡಲಾಗಿದೆ. ಆದರೆ ಕೇಂದ್ರದಿಂದ ಅನುದಾನ ಬಂದಿಲ್ಲ.

“ಸ್ವದೇಶ್‌ ದರ್ಶನ್‌ 2.0′ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಒಟ್ಟು 8 ಯೋಜನೆಗಳನ್ನು ಗುರುತಿಸಿದ್ದು, ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ “ಸ್ಟೇಟ್‌ ಸ್ಟಿಯರಿಂಗ್‌ ಕಮಿಟಿ’ ಸಭೆಯಲ್ಲಿ 5 ಪ್ರವಾಸಿ ತಾಣಗಳನ್ನು ಪರಿಗಣಿಸಲಾಗಿದೆ. 2022ರ ಅ.18ರಂದು ಹಂಪಿ ಸ್ಮಾರಕ (ವಿಜಯನಗರ ಜಿಲ್ಲೆ), ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ (ಮೈಸೂರು), ಮಳಖೇಡ ಕೋಟೆ, ಕಲಬುರಗಿ ದೇವಭಾಗ್‌ ಹಾಗೂ ಕಾಳಿ ನದಿ ಹಿನ್ನೀರು ಪ್ರದೇಶಾಭಿವೃದ್ಧಿ, ಬೀದರ್‌ ಜಿಲ್ಲೆಯ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ 5 ತಾಣಗಳಲ್ಲಿ ಹಂಪಿ ಸ್ಮಾರಕ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಈ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ. ಆದರೆ ಕೇಂದ್ರದಿಂದ ಅನುದಾನ ಬಿಡುಗಡೆ ಆಗಿಲ್ಲ.

ಯೋಜನೆಯ ಉದ್ದೇಶಗಳು
ಸ್ವದೇಶಿ ದರ್ಶನ್‌ ಯೋಜನೆ: ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಉತ್ತೇಕವಾಗಿ ಪ್ರವಾಸೋದ್ಯಮವನ್ನು ಬೆಳೆಸುವುದು. ಯೋಜಿತ ಮತ್ತು ಆದ್ಯತೆ ರೀತಿಯಲ್ಲಿ ಪ್ರವಾಸಿ ಸಾಮರ್ಥಯವನ್ನು ಹೊಂದಿರುವ ಸರ್ಕ್ಯೂಟ್‌ಗಳನ್ನು ಅಭಿವೃದ್ಧಿಪಡಿಸುವುದು. ದೇಶದಲ್ಲಿ ಜೀವನೋ ಪಾಯವನ್ನು ಸೃಷ್ಟಿಸಲು ದೇಶದ ಸಾಂಸ್ಕೃತಿಕ ಮತ್ತು ಪರಂಪರೆಯ ಮೌಲ್ಯವನ್ನು ಉತ್ತೇಜಿಸುವುದು. ಅಭಿವೃದ್ಧಿ ಶೀಲ ಪ್ರಪಂಚದಿಂದ ಸುಸ್ಥಿರ ರೀತಿಯಲ್ಲಿ ಪ್ರವಾಸಿ ಆಕರ್ಷಣೆಯನ್ನು ಹೆಚ್ಚಿಸುವುದು ಸರ್ಕ್ಯೂಟ್/ಗಮ್ಯ ಸ್ಥಾನಗಳಲ್ಲಿ ವರ್ಗ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು. ಸಮುದಾಯ ಆಧಾರಿತ ಅಭಿವೃದ್ಧಿ ಮತ್ತು ಬಡವರ ಪರವಾದ ಪ್ರವಾಸೋದ್ಯಮ ವಿಧಾನ ಅನುಸರಿಸುವುದು.

ಪ್ರಸಾದ್‌ ಯೋಜನೆ: ಯಾತ್ರಾ ಸ್ಥಳಗಳ ಉನ್ನತೀಕರಣ, ಧಾರ್ಮಿಕ ಯಾತ್ರ ಸ್ಥಳಗಳ ಪ್ರವಾಸವನ್ನು ಯೋಜನಾ ಬದ್ಧವಾಗಿ ಸಂಯೋಜಿಸಿ ಸುಸ್ಥಿತರವಾಗಿ ಅಭಿವೃದ್ಧಿಗೊಳಿಸು ವುದು. ಧಾರ್ಮಿಕ ಯಾತ್ರಾ ಪ್ರವಾಸೋದ್ಯಮವನ್ನು ನೇರವಾಗಿ ಹಾಗೂ ವಿವಿಧ ಉದ್ದೇಶಗಳ ಪರಿಣಾಮದಿಂದ ಉದ್ಯೋಗ ಸೃಷ್ಟಿಸುವುದು. ಧಾರ್ಮಿಕ ಯಾತ್ರ ಸ್ಥಳಗಳನ್ನು ಎಲ್ಲ ವರ್ಗಗಳಿಗೂ ಹಾಗೂ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸುವುದು. ಪ್ರವಾಸಿಗರನ್ನು ಆಕರ್ಷಿಸಲು ಅತ್ಯುನ್ನತ ವಿಶ್ವದರ್ಜೆಯ ವಿವಿಧ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು. ಸ್ಥಳೀಯ ಸಮೂಹಗಳಿಗೆ ಪ್ರವಾಸೋದ್ಯಮದ ಬಗ್ಗೆ ಅರಿವು ಮೂಡಿಸುವುದು. ಆ ಮೂಲಕ ಜೀವನಮಟ್ಟ ಸುಧಾರಿಸುವುದು.

-ರಫೀಕ್‌ ಅಹ್ಮದ್‌

 

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.