ಪ್ರತ್ಯೇಕ ಧರ್ಮ ಹೋರಾಟಕ್ಕಾಗಿ ಸ್ವಾಮೀಜಿಗಳಿಗೆ ಹಣ: ಶಾಮನೂರು
Team Udayavani, Oct 25, 2017, 7:34 AM IST
ಹರಿಹರ: “ಹಣ, ಕಾರು ನೀಡುವ ಮೂಲಕ ಕೆಲವು ಗುರುಗಳನ್ನು ಸೆಳೆದು ವೀರಶೈವ ಲಿಂಗಾಯತ ಸಮಾಜದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸಲಾಗುತ್ತಿದೆ’ ಎಂದು ಗಂಭೀರವಾಗಿ ಆರೋಪಿಸಿದ ವೀರಶೈವ ಮಹಾಸಭಾದ ಅಧ್ಯಕ್ಷ, ಶಾಸಕ ಡಾ| ಶಾಮನೂರು ಶಿವಶಂಕರಪ್ಪ, “ಯಾರೂ ಸಹ ಆಮಿಷಗಳಿಗೆ ಒಳಗಾಗಿ ಸಮಾಜವನ್ನು ಬಲಿಕೊಡಬಾರದು’ ಎಂದು ಮನವಿ ಮಾಡಿದ್ದಾರೆ.
ವೀರಶೈವ ಲಿಂಗಾಯತ ಧರ್ಮದ ಸಮಾಜ ಸಂಘಟನೆಗಾಗಿ ನಗರದ ಎಸ್‌ಜೆವಿಪಿ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಗುರುವಿರಕ್ತ ಮಠಾಧಿಧೀಶರು, ವಿದ್ವಾಂಸರು, ಕಾನೂನು ತಜ್ಞರು ಹಾಗೂ ಸಮಾಜದ ಗಣ್ಯರ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕೆಲವರು ಕೇವಲ ತಮ್ಮ ಸ್ವಾರ್ಥಕ್ಕಾಗಿ, ಆಮಿಷಗಳನ್ನೊಡ್ಡಿ ತಮ್ಮ ಗುರಿ ಸಾಧಿಸಲು ಹೊರಟಿದ್ದಾರೆ. ಇತ್ತೀಚೆಗೆ ಕೂಡಲ ಸಂಗಮದ ಬಸವಮೃತ್ಯುಂಜಯ ಶ್ರೀಗಳಿಗೆ 55 ಲಕ್ಷ ರೂ. ಹಾಗೂ ಕಾರು ಕೊಡಲಾಗಿದೆ. ಸರಕಾರದಿಂದ 2.50 ಕೋಟಿ ರೂ.ಅನುದಾನದ ಭರವಸೆಯೂ ಸಿಕ್ಕಿದೆ ಎಂದು ತಿಳಿದು ಬಂದಿದೆ ಎಂದು ಗಂಭೀರ ಆರೋಪ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Darshan: ದರ್ಶನ್ ಜಾಮೀನು ರದ್ದತಿಗೆ ಸುಪ್ರೀಂ ಮೊರೆ ಹೋಗಲು ಸಿದ್ಧತೆ
MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!
Ration Card: ಬಡವರಿಗೆ ಬಿಪಿಎಲ್ ಕಾರ್ಡ್ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ
Session: ವಕ್ಫ್ ಜೊತೆ ಬಿಪಿಎಲ್ ಹೋರಾಟಕ್ಕೆ ಬಿಜೆಪಿ ಸಜ್ಜು
Operation Fear: ಕಾಂಗ್ರೆಸ್ ಶಾಸಕರ ಮೇಲೆ ನಿಗಾ ವಹಿಸಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್ ಎನ್‌ಕೌಂಟರ್ ಬಗ್ಗೆ ಡಿಐಜಿ ಹೇಳಿದ್ದೇನು ?
Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ
Udupi: ವಿಸಿಲ್ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್ ನಿರ್ವಹಣೆ!
Paddana-Tulu folk songs: ಮರೆಯಾಗದಿರಲಿ ಪಾಡ್ದನನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ
Padubidri: ನಿಧಾನವಾಗಿ ಚಲಿಸಿ, ಹೆದ್ದಾರಿ ಕಾಮಗಾರಿ ನಡೆಯುತ್ತಿದೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.