ಭೂಗರ್ಭದಲ್ಲಿ 3 ದಿನ ಧ್ಯಾನಸ್ಥರಾಗಿದ್ದ ಸ್ವಾಮೀಜಿ!
Team Udayavani, Jan 28, 2019, 1:44 AM IST
ಸೇಡಂ(ಕಲಬುರಗಿ): ಲೋಕ ಕಲ್ಯಾಣಕ್ಕಾಗಿ ಸತತ ಮೂರು ದಿನಗಳ ಕಾಲ ಭೂಗರ್ಭ ಪ್ರವೇಶಿಸಿದ್ದ ಊಡಗಿ ರಸ್ತೆಯಲ್ಲಿನ ವಿಶ್ವಲಿಂಗ ವಿಷ್ಣು ಆಶ್ರಮದ ಶ್ರೀಮಂತ ತಾತನವರು ಶನಿವಾರ ಹೊರ ಬಂದರು. ಜ.23ರಂದು ತಾಲೂಕಿನ ಕಲಕಂಭ ಗ್ರಾಮದ ಗ್ರಾಮ ದೇವತೆ ದೇವಾಲಯದ ಬಳಿ ಗುಂಡಿ ತೋಡಿ ಜ.26ರವರೆಗೆ ಮೂರು ದಿನಗಳ ಕಾಲ ಅನ್ನ, ನೀರು, ಗಾಳಿ ತ್ಯಜಿಸಿ ಶ್ರೀಗಳು ಅನುಷ್ಠಾನ ಕೈಗೊಂಡಿದ್ದರು.
ಮೊದಲ ದಿನ ಭೂಗರ್ಭ ಪ್ರವೇಶಿಸಿದಾಗ ಕಲ್ಲು ಬಂಡೆ ಮತ್ತು ಮಣ್ಣಿನಿಂದ ಸಂಪೂರ್ಣವಾಗಿ ಗುಂಡಿಯನ್ನು ಭಕ್ತರೇ ಮುಚ್ಚಿದ್ದರು. ನಂತರ ಭಜನೆ, ಪೂಜೆ ಕೈಗೊಂಡಿದ್ದರು. ಶನಿವಾರ ಶ್ರೀಮಂತ ತಾತನವರು ತಮ್ಮ ಅನುಷ್ಠಾನ ಮಂಗಲಗೊಳಿಸಿದರು. ಭೂಗರ್ಭ ಪ್ರವೇಶಿಸುವ ಮುನ್ನ ಅನೇಕರು ಸ್ವಾಮೀಜಿ ದೇಹಾರೋಗ್ಯದಲ್ಲಿ ಏರುಪೇರಾಗುವ ಆತಂಕ ವ್ಯಕ್ತಪಡಿಸಿದ್ದರು. ಆದರೆ ಆರೋಗ್ಯವಂತರಾಗಿಯೇ ಸ್ವಾಮೀಜಿ ಹೊರಬಂದಿದ್ದು, ನೆರೆದವರಲ್ಲಿ ಅಚ್ಚರಿ ಉಂಟು ಮಾಡಿದೆ. ಸ್ವಾಮೀಜಿ ಭೂಗರ್ಭದಿಂದ ಹೊರಬಂದ ನಂತರ ಭಕ್ತರು ಆನೆ ಮೇಲೆ ಮೆರವಣಿಗೆ ಮಾಡಿದರು. ಇದೇ ವೇಳೆ ಶ್ರೀಮಂತ ತಾತನವರನ್ನು ಸತ್ಕರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.