ಶ್ರೀಗಳಿಗೆ ಈ ಫೋಟೊ ತುಂಬಾ ಇಷ್ಟವಾಗಿತ್ತು’
Team Udayavani, Jan 23, 2019, 1:00 AM IST
ಬೆಂಗಳೂರು: ಗಲ್ಲಕ್ಕೆ ಕೈ ಕೊಟ್ಟು, ಮುಗ್ಧವಾಗಿ ನಗುತ್ತಿರುವ ಶ್ರೀ ಸಿದ್ಧಗಂಗಾ ಸ್ವಾಮೀಜಿಯವರ ಫೋಟೊವನ್ನು ನೀವೆಲ್ಲಾ ನೋಡಿರುತ್ತೀರಿ. ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿರುವ, ಸ್ವಾಮೀಜಿ ಅವರ ವಿಕಿಪೀಡಿಯ ಪುಟದಲ್ಲಿರುವ, ಅನೇಕರ ಮನೆಯ ಗೋಡೆಯನ್ನು ಅಲಂಕರಿಸಿರುವ ಶ್ರೀಗಳ ಈ ಫೋಟೊವನ್ನು ತೆಗೆದವರು ಹೆಸರಾಂತ ಛಾಯಾಗ್ರಾಹಕ ಬಿ.ಆರ್.ಶಂಕರ್. ಅವರು, ಕವಿ ಬಿ.ಆರ್.ಲಕ್ಷ್ಮಣ್ ರಾವ್ ಅವರ ತಮ್ಮ. ಬಹುಜನಪ್ರಿಯವಾದ ಆ ಫೋಟೊ ತೆಗೆದ ಸಂದರ್ಭವನ್ನು ಶಂಕರ್ ಅವರು ‘ಉದಯವಾಣಿ’ ಯೊಂದಿಗೆ ಹಂಚಿಕೊಂಡಿದ್ದಾರೆ.
‘ಆ ಫೋಟೊ ತೆಗೆದಿದ್ದು 2004ರಲ್ಲಿ. ನಾನು ಆಗಷ್ಟೇ, ‘ಶಂಕರ್ ಪೋಟ್ರ್ರೇಟ್ ಪೆವಿಲಿಯನ್’ ಎಂಬ ಫೋಟೊ ಗ್ಯಾಲರಿ ಆರಂಭಿಸಿದ್ದೆ. ಗ್ಯಾಲರಿಯಲ್ಲಿ ಸಿದ್ಧಗಂಗಾ ಸ್ವಾಮೀಜಿಗಳ ಫೋಟೊವನ್ನು ಪ್ರದರ್ಶಿಸಬೇಕೆಂದು ಆಸೆಪಟ್ಟು, ಶ್ರೀಗಳ ಫೋಟೊ ತೆಗೆಯಲು ಮಠಕ್ಕೆ ಹೋಗಿದ್ದೆ. ಆಗ ಅವರಿಗೆ 98 ವರ್ಷ. ದೇಹ ಕೂಡ ಬಾಗಿತ್ತು. ಆದರೂ, ಉತ್ಸಾಹದಿಂದಲೇ ಫೋಟೊ ತೆಗೆಯಲು ಸಹಕರಿಸಿದರು. ಮಠದಲ್ಲಿ ಅವರು ಕುಳಿತುಕೊಳ್ಳುವ ಜಾಗದಲ್ಲಿಯೇ ಕುರ್ಚಿ, ಲೈಟ್ ಎಲ್ಲ ಸೆಟ್ ಮಾಡಿ, ಆ ಫೋಟೊ ತೆಗೆಯಲು ಸುಮಾರು ಒಂದು ಗಂಟೆ ತೆಗೆದುಕೊಂಡೆ. ಶ್ರೀಗಳನ್ನು ಬೇರೆ ಬೇರೆ ಆ್ಯಂಗಲ್‌ಗಳಲ್ಲಿ ಕೂರಿಸಿ, ಬೇಕಾದಷ್ಟು ಫೋಟೊ ತೆಗೆದೆ. ಕೊನೆಗೆ, ಅವರ ಕೈಯನ್ನು ಕುತ್ತಿಗೆಗೆ ಆಧಾರವಾಗಿ ಕೊಟ್ಟು ಲೋಯರ್ ಆ್ಯಂಗಲ್‌ನಿಂದ ತೆಗೆದ ಫೋಟೊ ಅದು. ಶ್ರೀಗಳಿಗೆ ಆ ಫೋಟೊ ತುಂಬಾ ಇಷ್ಟವಾಗಿತ್ತು. ಫೋಟೊ ನೋಡಿದ ಅವರು, ನನ್ನ ಹೆಗಲ ಮೇಲೆ ಕೈ ಹಾಕಿ, ‘ಭಾರೀ ಚೆನ್ನಾಗಿ ತೆಗೆದಿದ್ದೀಯಪ್ಪಾ’ ಎಂದು ಪ್ರಶಂಸಿಸಿ, ತಮ್ಮ ಮ್ಯಾನೇಜರ್‌ಗೆ ಹೇಳಿ ಆ ಫೋಟೊವನ್ನು ಮಠದ ಸಂಸ್ಥೆಗಳಲ್ಲಿ ಫ್ರೇಮ್ ಹಾಕಿಸಿ, ಇಟ್ಟಿದ್ದರು. ಆ ಫೋಟೊ ಅಷ್ಟೊಂದು ಜನಪ್ರಿಯ ಆಗುತ್ತೆ ಎಂದು ಗೊತ್ತಿರಲಿಲ್ಲ. ಇಲ್ಲಿಯವರೆಗೆ ನಾನೇ ಆ ಫೋಟೊದ ಸಾವಿರಾರು ದೊಡ್ಡ ಪೋಟ್ರ್ರೇಟ್‌ಗಳನ್ನು ಮಾಡಿಕೊಟ್ಟಿದ್ದೇನೆ. ವಿದೇಶಗಳಲ್ಲಿಯೂ ಹಲವಾರು ಕಡೆಗಳಲ್ಲಿ ಈ ಪೋಟ್ರ್ರೇಟ್ ಇದೆ. ಜೀವಮಾನದಲ್ಲಿ ಮಹಾತ್ಮರ ಅಂಥದ್ದೊಂದು ಫೋಟೊ ತೆಗೆಯುವ ಅವಕಾಶ ಸಿಕ್ಕಿದ್ದಕ್ಕೆ ಬಹಳ ತೃಪ್ತಿ, ಹೆಮ್ಮೆ ಇದೆ ಎನ್ನುತ್ತಾರೆ ಶಂಕರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್ ಜಾರಕಿಹೊಳಿ
Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್ ಟೀಕೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.