ಕನ್ನಡದ ಮೇಲೆ ಅಭಿಮಾನವಿರಲಿ: ಚಾರುಕೀರ್ತಿ ಶ್ರೀ
Team Udayavani, Jun 27, 2018, 6:00 AM IST
ಚನ್ನರಾಯಪಟ್ಟಣ: ಹಳಗನ್ನಡವನ್ನು ಸಾಹಿತ್ಯ ಅಭಿರುಚಿಯಲ್ಲಿಯೇ ಅಧ್ಯಯನ ಮಾಡಬೇ ಕೆಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು. ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಅಖೀಲ ಭಾರತ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನದ
ಸಮಾರೋಪ ಭಾಷಣದಲ್ಲಿ ಅವರು ಆಶೀರ್ವಚನ ನೀಡಿದರು. ಕನ್ನಡ ಭಾಷೆ ಬಹಳ ಹಳೆಯದಾಗಿದ್ದು, 4ನೇ ಶತಮಾನಕ್ಕೂ ಮುಂಚಿತವಾಗಿ ಲಿಪಿ ಇರಬಹುದೆಂದು ಚಿಂತಕರು ಸಮ್ಮೇಳನದಲ್ಲಿ ತಿಳಿಸಿದ್ದಾರೆ. ಕನ್ನಡ ಭಾಷೆ ಬಹಳ ಸಮೃದ್ಧವಾಗಿದ್ದು, ಭಾಷೆಯ ಮೇಲೆ ಎಲ್ಲರಿಗೂ ಅಭಿಮಾನ ಹೆಚ್ಚಾಗಿರಬೇಕು ಎಂದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಷ.ಶೆಟ್ಟರ್, ಹಿಂದಿನ ಕಾಲದ ಕವಿಗಳಿಗಿದ್ದ ಸ್ವಾತಂತ್ರ್ಯ ಈ ಕಾಲದ ಕವಿಗಳಿಗಿಲ್ಲ. ಆಗಿನ ಕವಿಗಳಿಗೆ ಸೆನ್ಸಾರ್ಶಿಪ್ ಇರಲಿಲ್ಲ. ಈಗ ಏನಾದರೂ ಬರೆದರೆ ಕಲ್ಲು ಇಲ್ಲವೆ ಗನ್ನಿನಿಂದ ಕೊಲ್ಲುತ್ತಾರೆ ಎಂಬ ಭಯದಲ್ಲಿದ್ದೇವೆ. ಹಳಗನ್ನಡದಲ್ಲಿ ನಿರ್ಭೀತಿ ಯಿಂದ ತಮ್ಮ ವಿಚಾರವನ್ನು ಅಂದಿನ ಕವಿಗಳು ಮಂಡಿಸಿದ್ದಾರೆ. ಅಂತಹ ಹಳಗನ್ನಡ ಓದಲು ಈಗ
ಯಾರಿಗೂ ಅಡ್ಡಿ ಇಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾ ನದ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ 150 ಪುಸ್ತಕಗಳನ್ನು ಅಂತರ್ಜಾಲ
ದಲ್ಲಿ ಸೇರಿಸಲಾಗುತ್ತದೆ. ಇಂದಿನ ವಿಶ್ವ ವಿದ್ಯಾನಿಲಯಗಳೂ ಹಳಗನ್ನಡದ ಕಾರ್ಯಾಗಾರ ಮಾಡಿದರೆ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗ ನೀಡುವ ಭರವಸೆ ನೀಡಿದರು.
ಉಪನ್ಯಾಸಕ ಬರಾಳು ಶಿವರಾಮು ರಚಿಸಿರುವ ರಂಗ ವೈಭವ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸಾಹಿತಿ ದೊಡ್ಡರಂಗೇಗೌಡ, ಎಸ್.ಎನ್.ಅಶೋಕ್ ಕುಮಾರ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಕನ್ನಡ ಸಾಹಿತ್ಯ ಪರಿಷತ್ತಿನ
ಗೌರವ ಕಾರ್ಯದರ್ಶಿ ರಾಜಶೇಖರ ಹತಗುಂದಿ, ಕಸಾಪ ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ತಾಲೂಕು ಅಧ್ಯಕ್ಷ ಪ್ರಕಾಶ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ನಡುವೆ ಭಾವನಾತ್ಮಕ ಸಂಬಂಧ ಬೆಳೆಯುವುದು ಕನ್ನಡ ಸಾಹಿತ್ಯದಲ್ಲಿ ಮಾತ್ರ. ಕನ್ನಡದಲ್ಲಿ ಬೋಧನೆ ಮಾಡುವಾಗ ಗುರು-ಶಿಷ್ಯರಲ್ಲಿ ಆತ್ಮೀಯತೆ ಬೆಳೆಯುತ್ತದೆ. ಕನ್ನಡ ಸಾಹಿತ್ಯದ ಪರಿಜ್ಞಾನವಿಲ್ಲದಿದ್ದವರು, ಸಂಸ್ಕೃತಿ, ಸಾಹಿತ್ಯವಿಲ್ಲದವರು ಕನ್ನಡದ ಅತ್ಯುನ್ನತ ಪದವಿಗೇರಿದರೆ ಅನರ್ಥವಾಗುತ್ತದೆ.
● ಸಿದ್ದಲಿಂಗಯ್ಯ ಖ್ಯಾತ ಕವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.