ನಮಗ್ಯಾಕೆ ಟಿಕೆಟ್ ಕೊಡಲ್ಲ? ಗಂಡಸ್ತನ ಇಲ್ವಾ? ಮಾನೆ ವಿರುದ್ಧ ತಹಶಿಲ್ದಾರ ವಾಗ್ದಾಳಿ
Team Udayavani, Sep 29, 2021, 11:35 AM IST
ಬೆಂಗಳೂರು : ನಮಗ್ಯಾಕೆ ಟಿಕೆಟ್ ಕೊಡಲ್ಲ? ನಮಗೆ ಯೋಗ್ಯತೆ ಇಲ್ವಾ? ಗಂಡಸ್ತನ ಇಲ್ವಾ? ನಮಗೆ ಅರ್ಹತೆ ಇಲ್ವಾ? ಎಂದು 2018ರಲ್ಲಿ ಹಾನಗಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಶ್ರೀನಿವಾಸ್ ಮಾನೆ ವಿರುದ್ಧ ಮನೋಹರ್ ತಹಶಿಲ್ದಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮತ್ತೆ ಹಾನಗಲ್ ಕಾಂಗ್ರೆಸ್ ಟಿಕೆಟ್ ಕದನ ತಾರಕಕ್ಕೇರಿದ್ದು, ನಾಯಕರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮಾನೆಗೆ ಟಿಕೆಟ್ ಕೊಡಬಾರದು ಎಂದು ತಹಶಿಲ್ದಾರ ಆಕ್ರೋಶ ಹೊರ ಹಾಕಿದ್ದರು. ಮಾನೆಗೆ ಟಿಕೆಟ್ ಕೊಟ್ಟರೆ ಚುನಾವಣೆಗೆ ಕೆಲಸ ಮಾಡಲ್ಲ ಎಂದು ಅಸಮಧಾನ ಹೊರ ಹಾಕಿದ್ದರು.
ಮಾನೆ ಹಾನಗಲ್ ನವರಲ್ಲ, ಹೊರಗಿನವರು, ಸ್ಥಳೀಯರಿಗೆ ಯಾರಿಗೆ ಟಿಕೆಟ್ ಕೊಟ್ರು ಕೆಲಸ ಮಾಡ್ತೀವಿ , ಆದರೆ ಮಾನೆಗೆ ಟಿಕೆಟ್ ಕೊಟ್ಟರೆ ಕೆಲಸ ಮಾಡಲ್ಲ. ಮಾನೆ ಹಿಂದೆ ಕಾಣದ ಕೈಗಳು ಕೆಲಸ ಮಾಡ್ತಿವೆ, ಆದರೆ ಆ ಹೆಸರು ನಾನು ಹೇಳಲ್ಲ ಎಂದಿದ್ದಾರೆ.
ನಾನೇ ವಿನ್ನಿಂಗ್ ಕ್ಯಾಂಡಿಡೇಟ್, ನನಗೆ ಟಿಕೆಟ್ ಕೊಡಬೇಕು, ಇದನ್ನ ಸಿದ್ದರಾಮಯ್ಯ, ಡಿಕೆಶಿಗೂ ಹೇಳ್ತೀನಿ ಎಂದು ಮಾಜಿ ಸಚಿವ ಮನೋಹರ್ ತಹಶಿಲ್ದಾರ್ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.