ರೌಡಿಶೀಟರ್ ಪಟ್ಟಿ ಬಗ್ಗೆ ಕಾವೇರಿದ ಚರ್ಚೆ
Team Udayavani, Feb 7, 2018, 7:20 AM IST
ವಿಧಾನಸಭೆ: ರೌಡಿ ಶೀಟರ್ ಪಟ್ಟಿ ಬಗ್ಗೆ ವಿಧಾನ ಸಭೆಯಲ್ಲಿ ಕಾವೇರಿದ ಚರ್ಚೆ ನಡೆದು ಪ್ರತಿಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣ ವಾಯಿತು. ಚರ್ಚೆ ತಾರಕಕ್ಕೇರಿದಾಗ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ರೌಡಿಶೀಟರ್‌ಗಳ ಪಟ್ಟಿಯನ್ನು ಶಾಸಕರಿಗೆ ಒದಗಿಸಲಾಗುವುದು ಎಂದರು.
ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಯು.ಬಿ. ಬಣಕಾರ ಪರವಾಗಿ ಬಿಜೆಪಿ ಸಚೇತಕ ಸುನೀಲ್ ಕುಮಾರ್ ರೌಡಿಶೀಟರ್ ಪಟ್ಟಿಗೆ ಸೇರಿಸಲು ಇರುವ ಮಾನದಂಡಗಳೇನು ಎಂದು ಗೃಹ ಸಚಿವರನ್ನು ಪ್ರಶ್ನಿಸಿದರು. ಬಿಜೆಪಿ ಶಾಸಕರಾದ ಸಿ.ಟಿ.ರವಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ಮಾಜಿ ಗೃಹಸಚಿವ ಆರ್.ಅಶೋಕ ಸೇರಿ ಹಲವರು ಜನಪ್ರತಿಧಿಗಳಿಗೆ ರೌಡಿಶೀಟರ್ ಪಟ್ಟಿ ನೀಡದಿರುವ ಸರ್ಕಾರದ ಕ್ರಮವನ್ನು ಟೀಕಿಸಿದರು. ಈ ಹಂತದಲ್ಲಿ ಸಭಾಧ್ಯಕ್ಷ ಕೋಳಿವಾಡ ಅವರು ಸಹ ತಮ್ಮ ಕ್ಷೇತ್ರದಲ್ಲೂ ಅನಗತ್ಯವಾಗಿ ಅಮಾಯಕರನ್ನು ರೌಡಿಪಟ್ಟಿಗೆ
ಸೇರಿಸಲಾಗಿದೆ ಎಂದು ಸರ್ಕಾರದ ಗಮನ ಸೆಳೆದರು. ಗೃಹ ಸಚಿವ ರಾಮಲಿಂಗಾರೆಡ್ಡಿ ರೌಡಿಶೀಟರ್‌ಗಳ ಪಟ್ಟಿಗೆ ಸೇರಿಸಲು ಇರುವ ಮಾನದಂಡಗಳ ಬಗ್ಗೆ ಸದನಕ್ಕೆ ಮಾಹಿತಿ ನೀಡಿ ಶಾಸಕರಿಗೆ ರೌಡಿಶೀಟರ್‌ಗಳ ಪಟ್ಟಿ ನೀಡಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದರು. ಇದರಿಂದ ಸಿಟ್ಟಿಗೆದ್ದು ಬಿಜೆಪಿ ಶಾಸಕರು ಸರ್ಕಾರದ ಮೇಲೆ ಮುಗಿಬಿದ್ದಾಗ ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.
ವಿಶ್ವೇಶ್ವರ ಹೆಗಡೆ ಕಾಗೇರಿ, ಸುನೀಲ್‌ಕುಮಾರ್ ತಮ್ಮ ಕ್ಷೇತ್ರಗಳಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರನ್ನು ರೌಡಿ ಪಟ್ಟಿಗೆ ರಾಜಕೀಯ ಕಾರಣಗಳಿಗೆ ಸೇರಿಸಿ ಕಿರುಕುಳ ನೀಡಲಾ ಗುತ್ತಿದೆ. ಸರ್ಕಾರ ಪೊಲೀಸ್ ಇಲಾ ಖೆಯನ್ನು ಈ ವಿಚಾರದಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು. ಚರ್ಚೆ ತಾರಕಕ್ಕೇರಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಧ್ಯ ಪ್ರವೇಶಿಸಿ ಶಾಸಕರಿಗೆ ರೌಡಿ ಪಟ್ಟಿಯನ್ನ ಒದಗಿಸಲಾಗುವುದು. ರೌಡಿ ಪಟ್ಟಿಗೆ ಹೆಸರು ಸೇರಿಸುವಾಗ ರಾಜಕೀಯ ವಾಗಿ ರೌಡಿ ಶೀಟರ್ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿ ದರು. ಅಮಾಯಕರ ಹೆಸರನ್ನು ಸೇರಿಸಿದ್ದರೆ ಅವರ ಹೆಸರನ್ನು ಕೈಬಿಡಲಾಗುವುದೆಂದು ಭರವಸೆ ನೀಡಿದರು. ಒಂದು ಹಂತದಲ್ಲಿ ಸಿಎಂ ಅವರು ರೌಡಿ ಪಟ್ಟಿಯಲ್ಲಿರುವವರೆಲ್ಲಾ ಬಿಜೆಪಿಯವರೇ? ಎಂದು ಕಾಲೆಳೆದಾಗ
ಬಿಜೆಪಿ ಶಾಸಕರು ತೀವ್ರ ಪ್ರತಿರೋಧ ತೋರಿದರು.
ಶೆಟ್ಟರ್, ಸಚಿವ ಖಾದರ್ ವಾಗ್ವಾದ
ರೌಡಿಶೀಟರ್ ಪಟ್ಟಿ ಚರ್ಚೆವೇಳೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ಸಚಿವ ಯು.ಟಿ.ಖಾದರ್ ಜತೆ ರೌಡಿ ಪಟ್ಟಿಯಲ್ಲಿದ್ದವರ ಫೋಟೊ ಇರುವುದನ್ನು ಪ್ರಸ್ತಾಪಿಸಿದರು. ಇದರಿಂದ ಸಿಟ್ಟಿಗೆದ್ದ ಸಚಿವ ಖಾದರ್ ಪ್ರಧಾನಿ ಜೊತೆ ರೌಡಿಶೀಟರ್ ಇರುವ ಫೋಟೊ ಸಹ ತಮ್ಮ ಬಳಿ ಇದೆಯೆಂದು ಹೇಳಿದಾಗ ಸದನದಲ್ಲಿ ಮತ್ತೆ ಕೋಲಾಹಲ ಉಂಟಾಯಿತು. ನಂತರ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಪ್ರಧಾನಿ ಬಗ್ಗೆ ಬಳಸಿದ ಪದಗಳನ್ನು ಕಡತದಿಂದ ತೆಗೆಸಿ ಚರ್ಚೆಗೆ ನಾಂದಿ ಹಾಡಿದರು.
ಮಾರ್ಷಲ್ ಕರೆದ ಸ್ಪೀಕರ್
ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ನಡುವೆ ರೌಡಿಶೀಟರ್ ವಿಷಯದಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದ್ದಾಗ ಜೆಡಿಎಸ್ ಬಂಡಾಯ ಶಾಸಕ ಜಮೀರ್
ಅಹ್ಮದ್ ರೌಡಿ ಪಟ್ಟಿ ಬಿಜೆಪಿ ಶಾಸಕರಿಗೆ ಯಾಕೆ ಬೇಕೆಂದು ಪ್ರಶ್ನಿಸಿ ಮಾತನಾಡಿದರು. ಆಗ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದಾಗ ಕೋಲಾಹಲದ ವಾತಾವರಣ ಉಂಟಾಯಿತು. ಸ್ಪೀಕರ್ ಅವರು ಜಮೀರ್‌ಗೆ ಕುಳಿತುಕೊಳ್ಳಲು ತಿಳಿಸಿದರು. ಸಭಾಧ್ಯಕ್ಷರ ಸೂಚನೆ ಗಮನಿಸದೇ ಜಮೀರ್ ಮಾತು ಮುಂದು ವರಿಸಿದಾಗ ಸಿಟ್ಟಿಗೆದ್ದ ಸ್ಪೀಕರ್, ಮಾರ್ಷಲ್ ಅವರನ್ನು ಕರೆದು ಜಮೀರ್‌ಗೆ ಕೂರಿಸುವಂತೆ ಹೇಳಿದ್ದನ್ನು ಗಮನಿಸಿದ ಜಮೀರ್ ಮಾತು ನಿಲ್ಲಿಸಿ ತಣ್ಣಗೆ ಆಸೀನರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Namma Metro; ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ
Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ
Namma Metro; ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.