ತಾ. ಪಂಚಾಯತ್‌ಗೆ ಸರ್ಜರಿ; ಜನಸಂಖ್ಯೆ ಆಧಾರದಲ್ಲಿ ಸದಸ್ಯರ ಆಯ್ಕೆ ಮಾಡಲು ಸರಕಾರ ಚಿಂತನೆ
ಗ್ರಾಮ ಸ್ವರಾಜ್ ಕಾಯ್ದೆ ತಿದ್ದುಪಡಿ ಮಸೂದೆ ಸೋಮವಾರ ಮಂಡನೆ
Team Udayavani, Mar 21, 2022, 7:00 AM IST
ಬೆಂಗಳೂರು: ತಾಲೂಕು ಪಂಚಾಯತ್‌ಗಳಿಗೆ ಜನಸಂಖ್ಯೆ ಆಧಾರದಲ್ಲಿ ಸದಸ್ಯರ ಆಯ್ಕೆ ಮಾಡಲು ಪೂರಕವಾಗಿ ಸರಕಾರ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ (ತಿದ್ದುಪಡಿ) ಮಸೂದೆ 2022 ಅನ್ನು ಸೋಮವಾರ ವಿಧಾನಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮಂಡಿಸಲಿದ್ದಾರೆ. ಸರಕಾರಿ ನೌಕರಿಯಿಂದ ವಜಾಗೊಂಡಿರುವವರಿಗೆ ಪಂಚಾ ಯತ್ ಚುನಾವಣೆಗಳಿಗೆ ಸ್ಪರ್ಧಿಸಲು ನಿಷೇಧ ಹೇರುವ ಪ್ರಸ್ತಾವವೂ ಮಸೂದೆಯಲ್ಲಿದೆ.
ಈಗಿರುವ ಕಾಯ್ದೆಯಲ್ಲಿ ತಾಲೂಕು ಪಂಚಾಯತ್‌ಗಳಲ್ಲಿ ಕಡಿಮೆ ಜನಸಂಖ್ಯೆ ಇದ್ದರೂ ಕನಿಷ್ಠ 11 ಸದಸ್ಯರನ್ನು ಆಯ್ಕೆ ಮಾಡಲು ಅವಕಾಶವಿದೆ. ಆದರೆ ಹೊಸದಾಗಿ ರಚನೆ ಮಾಡಿರುವ ಕೆಲವು ತಾಲೂಕು ಗಳಲ್ಲಿ 15 ಸಾವಿರ ಜನಸಂಖ್ಯೆ ಇರುವ ತಾ.ಪಂ.ಗಳಿಗೂ ಕನಿಷ್ಠ 11 ಸದಸ್ಯರನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಜನಸಂಖ್ಯೆ ಕಡಿಮೆ ಇದ್ದರೂ ಹೆಚ್ಚಿನ ಸದಸ್ಯರನ್ನು ಹೊಂದುವುದರಿಂದ ಸರಕಾರಕ್ಕೆ ಅನಗತ್ಯ ಖರ್ಚು ಹೆಚ್ಚುತ್ತಿತ್ತು.
ಆಯೋಗದ ಸಲಹೆ
ಈಗಿರುವ ಕಾನೂನಿನಲ್ಲಿ 12,500ರಿಂದ 15,000 ಜನಸಂಖ್ಯೆಗೆ ಒಬ್ಬ ಸದಸ್ಯನನ್ನು ಆಯ್ಕೆ ಮಾಡ ಬೇಕಿದ್ದು, ಕಡಿಮೆ ಜನಸಂಖ್ಯೆ ಇರುವ ತಾಲೂಕುಗಳಲ್ಲಿ ಕನಿಷ್ಠ 11 ಸದಸ್ಯರ ಆಯ್ಕೆ ಕಷ್ಟ ವಾಗಲಿದೆ. ಹೀಗಾಗಿ ಈ ಆಯ್ಕೆ ಪದ್ಧತಿಯು ಸ್ಪಷ್ಟವಾಗಿಲ್ಲ ಎಂದು ರಾಜ್ಯ ಚುನಾವಣ ಆಯೋಗ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ಸರಕಾರ ನೇಮಿಸಿರುವ ಸೀಮಾ ನಿರ್ಣಯ ಆಯೋಗವೂ ತಿದ್ದುಪಡಿಗೆ ಸಲಹೆ ನೀಡಿತ್ತು.
ಎಷ್ಟು ಜನರಿಗೆ ಎಷ್ಟು ಸದಸ್ಯರು?
ಈಗಿನ ತಿದ್ದುಪಡಿ ಪ್ರಕಾರ, ತಾಲೂಕಿನ ಜನ ಸಂಖ್ಯೆ 2 ಲಕ್ಷಕ್ಕಿಂತ ಹೆಚ್ಚಿದ್ದರೆ, ಕನಿಷ್ಠ 12 ಸಾವಿರ ಜನಸಂಖ್ಯೆಗೆ ಒಬ್ಬ ಸದಸ್ಯನನ್ನು ಆಯ್ಕೆ ಮಾಡಲು ಅವಕಾಶವಿದೆ. ಜನಸಂಖ್ಯೆ 1 ಲಕ್ಷಕ್ಕಿಂತ ಹೆಚ್ಚು ಹಾಗೂ 2 ಲಕ್ಷಕ್ಕಿಂತ ಕಡಿಮೆ ಇದ್ದರೆ, ಅಂತಹ ತಾಲೂಕು ಪಂಚಾಯತ್‌ಗಳಿಗೆ ಕನಿಷ್ಠ 10 ಸಾವಿರ ಜನಸಂಖ್ಯೆಗೆ ಒಬ್ಬ ಸದಸ್ಯರನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗುತ್ತದೆ. ಈ ತಾಲೂಕು ಪಂಚಾಯತ್‌ಗಳಲ್ಲಿ ಕನಿಷ್ಠ 11 ಸದಸ್ಯರಿರುವಂತೆ ನೋಡಿಕೊಳ್ಳಲು ತಿದ್ದುಪಡಿ ಮಾಡಲಾಗುತ್ತಿದೆ.
ತಾಲೂಕು ಪಂಚಾಯತ್ ಜನಸಂಖ್ಯೆ 50 ಸಾವಿರದಿಂದ 1 ಲಕ್ಷದೊಳಗಿದ್ದರೆ, ಅಲ್ಲಿ ಕನಿಷ್ಠ 9 ಸದಸ್ಯರ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ. ಜನಸಂಖ್ಯೆ 50 ಸಾವಿರಕ್ಕಿಂತ ಕಡಿಮೆಯಿದ್ದಲ್ಲಿ ಕನಿಷ್ಠ 7 ಸದಸ್ಯರನ್ನು ಆಯ್ಕೆ ಮಾಡಲು ತಿದ್ದುಪಡಿ ತರಲಾಗುತ್ತಿದೆ.
ವಜಾಗೊಂಡ ನೌಕರರಿಗಿಲ್ಲ ಅವಕಾಶ
ರಾಜ್ಯ ಹಾಗೂ ಕೇಂದ್ರ ಸರಕಾರಿ ಸೇವೆಯಿಂದ ವಜಾಗೊಂಡಿರುವ, ಕಡ್ಡಾಯ ನಿವೃತ್ತಿಗೊಳಪಟ್ಟ ಹಾಗೂ ಸೇವೆಯಿಂದ ತೆಗೆದು ಹಾಕಿರುವ ಸರಕಾರಿ ನೌಕರರು ಇನ್ನು ಮುಂದೆ ಗ್ರಾಮ, ತಾಲೂಕು ಹಾಗೂ ಜಿ. ಪಂ. ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ. ಅದೇ ರೀತಿ ಸಹಕಾರ ಸಂಘಗಳ ಅಧ್ಯಕ್ಷರು, ಸದಸ್ಯರು ಮತ್ತು ನೌಕರರು ವಜಾಗೊಂಡಿದ್ದರೆ ಅಥವಾ ಅವರನ್ನು ತೆಗೆದು ಹಾಕಿದ್ದರೆ ಅವರಿಗೂ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಸಿಗದಂತೆ ತಿದ್ದುಪಡಿ ತರಲಾಗು ವುದು. ಸರಕಾರಿ ನೌಕರಿಯಲ್ಲಿದ್ದಾಗ ದುರ್ನಡತೆ ಹಾಗೂ ಭ್ರಷ್ಟಾಚಾರ ಆರೋಪದಿಂದ ವಜಾಗೊಂಡವರು ಆಯ್ಕೆಯಾದರೆ ಪಂಚಾಯತ್ ಮಟ್ಟದಲ್ಲಿಯೂ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ ಎನ್ನುವ ಕಾರಣಕ್ಕೆ ಕಾನೂನು ಸಚಿವ ಮಾಧುಸ್ವಾಮಿ ಸಲಹೆ ಮೇರೆಗೆ ಈ ತಿದ್ದುಪಡಿಗೆ ಸರಕಾರ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬದಲಾವಣೆ ಹೇಗೆ?
50 ಸಾವಿರಕ್ಕಿಂತ ಕಡಿಮೆ ಜನರಿರುವ ತಾ.ಪಂ.ಗಳಲ್ಲಿ ಸದಸ್ಯರ ಸಂಖ್ಯೆ ಕನಿಷ್ಠ 11ರಿಂದ 7ಕ್ಕೆ ಇಳಿಯಲಿದೆ. ಉದಾಹರಣೆಗೆ ಧಾರವಾಡದ ಅಳ್ನಾವರ ತಾ.ಪಂ. ಜನಸಂಖ್ಯೆ 50 ಸಾವಿರಕ್ಕಿಂತ ಕಡಿಮೆ ಇದ್ದು, ಅಲ್ಲಿನ ಸದಸ್ಯರ ಸಂಖ್ಯೆ 11ರಿಂದ 7ಕ್ಕೆ ಇಳಿಯಲಿದೆ. 2 ಲಕ್ಷಕ್ಕಿಂತ ಹೆಚ್ಚು ಜನರಿರುವಲ್ಲಿ 12 ಸಾವಿರ ಮಂದಿಗೆ ಒಬ್ಬರನ್ನು ಆರಿಸಬಹುದು. ಅಲ್ಲಿ ಕನಿಷ್ಠ 16ರಿಂದ ಗರಿಷ್ಠ 35 ಸದಸ್ಯರ ಆಯ್ಕೆಗೆ ಅವಕಾಶ ಸಿಗಲಿದೆ. ಉದಾಹರಣೆಗೆ ಬೆಳಗಾವಿ ತಾಲೂಕಿನಲ್ಲಿ 4 ಲಕ್ಷ ಜನರಿದ್ದು, ಅಲ್ಲಿನ ಸದಸ್ಯರ ಸಂಖ್ಯೆ 32ರಿಂದ 35 ಆಗಲಿದೆ.
ಉಸ್ತುವಾರಿ ಸಚಿವರೇ ಅಧ್ಯಕ್ಷರು
ಜಿಲ್ಲಾ ಹಂತದಲ್ಲಿರುವ
ಜಿಲ್ಲಾ ಯೋಜನಾ ಸಮಿತಿಗೆ ಇನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನೇ ಅಧ್ಯಕ್ಷರನ್ನಾಗಿ ನೇಮಿಸಲು ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಇದುವರೆಗೂ ಜಿ.ಪಂ. ಅಧ್ಯಕ್ಷರನ್ನು ಜಿಲ್ಲಾ ಯೋಜನಾ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತಿತ್ತು. ಆದರೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಮೀಸ ಲಾತಿ ಆಧಾರದಲ್ಲಿ ಆಯ್ಕೆ ಯಾಗುವುದರಿಂದ ಬಹುತೇಕ ರಿಗೆ ಈ ಸಮಿತಿಯ ಜವಾ ಬ್ದಾರಿ ಮತ್ತು ಕಾರ್ಯ ಚಟು ವಟಿಕೆಗಳ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ ಜಿಲ್ಲಾ ಯೋಜನಾ ಸಮಿತಿಯ ಸಭೆಗಳೇ ನಡೆಯುತ್ತಿರಲಿಲ್ಲ. ಈ ಕಾರಣಕ್ಕೆ ಜಿಲ್ಲಾ ಉಸ್ತು ವಾರಿ ಸಚಿವರನ್ನು ಅಧ್ಯಕ್ಷರನ್ನಾಗಿ ನೇಮಿಸಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನು ಸಹ ಅಧ್ಯಕ್ಷರನ್ನಾಗಿ ಮಾಡ ಲಾಗುತ್ತಿದೆ ಹಾಗೂ ಜಿಲ್ಲಾ ಕೇಂದ್ರ ಸ್ಥಾನದ ಮೇಯರ್ ಅಥವಾ ನಗರ ಸಭೆ ಅಧ್ಯಕ್ಷರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲು ಸರಕಾರ ಕಾಯ್ದೆಗೆ ತಿದ್ದುಪಡಿ ಮಾಡುತ್ತಿದೆ.
- ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.