ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರು
Team Udayavani, Sep 5, 2019, 5:25 AM IST
ತ್ರಿವೇಣಿ
ವಿಟ್ಲ: ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿರುವ ತ್ರಿವೇಣಿ ಅವರು 2008ರಲ್ಲಿ ಏಮಾಜೆ ಸ.ಕಿ.ಪ್ರಾ. ಶಾಲೆಗೆ ಸಹಶಿಕ್ಷಕಿಯಾಗಿ ನೇಮಕ ಗೊಂಡಿದ್ದರು.
ಇವರು ಹಳೆವಿದ್ಯಾರ್ಥಿಗಳ ಸಹಕಾರದೊಂದಿಗೆ ಉಚಿತ ವಾಹನದ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳ ಸಂಖ್ಯಾವೃದ್ಧಿಗೆ ಕಾರಣಕರ್ತರಾಗಿದ್ದಾರೆ. ದಾನಿಗಳ ಮೂಲಕ ಕಂಪ್ಯೂಟರ್ ಖರೀದಿಸಿ, 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ, ವಿವಿಧ ಸಂಘಸಂಸ್ಥೆಗಳು, ದಾನಿಗಳಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ, ನೋಟ್ ಪುಸ್ತಕ, ಕ್ರೀಡಾ ಸಾಮಗ್ರಿ ಇತ್ಯಾದಿ ಒದಗಿಸಿದ್ದಲ್ಲದೇ ಪೀಠೊಪಕರಣಗಳು, 1.50 ಲಕ್ಷ ರೂ. ವೆಚ್ಚದ ಸಾಮಗ್ರಿಗಳ ಕೊಡುಗೆ ಶಾಲಾ ಪ್ರಾರಂಭೋತ್ಸವದಲ್ಲಿ ಹಸ್ತಾಂತರ, ನರೇಗಾ ಯೋಜನೆಯ 6 ಲಕ್ಷ ರೂ. ವೆಚ್ಚದ ಸುಸಜ್ಜಿತ ಆವರಣಗೋಡೆ, ಕೃಷಿ ಸಮಿತಿ ರಚಿಸಿ 1.71 ಲಕ್ಷ ರೂ. ದಾನಿಗಳಿಂದ ಸಂಗ್ರಹಿಸಿ ಶಾಲಾ ಆವರಣದಲ್ಲಿ 100ಕ್ಕೂ ಹೆಚ್ಚು ತೆಂಗಿನ ಗಿಡಗಳನ್ನು ನೆಟ್ಟು, ಅಕ್ಷರ ಕೈತೋಟ ನಿರ್ಮಿಸಿದ್ದಾರೆ. ಪ್ರತಿಭಾ ಪುರಸ್ಕಾರ, ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳನ್ನು ದಾಖಲಿಸಲು ಶ್ರಮ ವಹಿಸಿದ್ದಾರೆ. ಜಿ.ಪಂ. ವತಿಯಿಂದ ಕೃಷಿ ನೀರಾವರಿ ವ್ಯವಸ್ಥೆ, ತಾ.ಪಂ. ವತಿಯಿಂದ ರಂಗಮಂದಿರ ಇತ್ಯಾದಿ ಅಭಿವೃದ್ಧಿ ಕಾರ್ಯ ಮೂಲಕ ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ದೊಡ್ಡ ಕೆಂಪಯ್ಯ
ಬಂಟ್ವಾಳ: ಅನಂತಾಡಿ ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ದೊಡ್ಡ ಕೆಂಪಯ್ಯ ಪ್ರಸ್ತುತ ವರ್ಷದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿ ದ್ದಾರೆ. ಇವರು ಕಳೆದ 18 ವರ್ಷಗಳಿಂದ ಶಿಕ್ಷಕ ವೃತ್ತಿ ಸೇವೆ ನಡೆಸುತ್ತಿದ್ದು, ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾ| ವಡ್ಡರಹಳ್ಳಿ ಗ್ರಾಮದವರು.
ಪುತ್ತೂರು ಬೆಳ್ಳಿಪ್ಪಾಡಿ ಸ.ಹಿ.ಪ್ರಾ. ಶಾಲೆಗೆ ಶಿಕ್ಷಕರಾಗಿ ಪ್ರಥಮ ಸೇರ್ಪಡೆ, ಕರ್ವೆಲು ಹಿ.ಪ್ರಾ. ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ, ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಬಿಆರ್‌ಪಿಯಾಗಿ, ಪ್ರಸ್ತುತ ಅನಂತಾಡಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಶಾಲೆಯನ್ನು ನಾಡ ದೇಗುಲವಾಗಿ ರೂಪಿಸಿದ್ದಾರೆ.
ನಲಿಕಲಿ ಶಿಕ್ಷಣ ಅನುಷ್ಠಾನ, ಶಾಲೆಯ ಶತಮಾನೋತ್ಸವ ರೂವಾರಿಯಾಗಿ ಸರ್ವರ ಸಹಕಾರದಲ್ಲಿ ರೂ. 40 ಲಕ್ಷಕ್ಕೂ ಹೆಚ್ಚು ಅನುದಾನ ಶಾಲೆಗೆ ಬರುವಂತೆ ಮಾಡಿದ್ದರು. ಅದರಲ್ಲಿ ರಂಗಮಂದಿರ, ಆಟದ ಮೈದಾನ, ಪ್ರವೇಶ ದ್ವಾರ, ಕೊಠಡಿಗೆ ಟೈಲ್ಸ್, ಧ್ವಜಸ್ತಂಭ, ಬಾಲವನ, ಪೀಠೊಪಕರಣ, ಗ್ರಾಮೀಣ ಕ್ರೀಡಾ ಅನ್ವೇಷಣೆ ಶಿಬಿರ, ಹೈಟೆಕ್ ಶೌಚಾಲಯ ನಿರ್ಮಾಣವಾಗಿದೆ. ಪ್ರೊಜೆಕ್ಟರ್ ಮೂಲಕ ಬೋಧನೆ, ಕಾಡು ಸಂರಕ್ಷಣೆ ಅರಿವು ಪ್ರವಾಸ, ಜಲ ಮರು ಪೂರಣ ಯೋಜನೆ, ಲೈಬ್ರೆರಿ, ಯಕ್ಷಗಾನ ಚಿತ್ರಕಲೆ ಅಳವಡಿಸಿದ್ದರು. ಇವರ ಸಾಧನೆಗೆ ಯೇನಪೊಯ ಶಿಕ್ಷಕ ಪ್ರಶಸ್ತಿ ಸಂದಿದೆ.
ಸರಕಾರಿ ಶಾಲೆ ಉಳಿಯಬೇಕು. ಕನ್ನಡ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಸಿಗುವಂತಾಗಬೇಕು ಎಂಬ ಆಶಯ ಇವರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್.ಯಡಿಯೂರಪ್ಪ
Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.