ಲವ್ ರಿಜೆಕ್ಟ್;ಯುವತಿ ಎದುರೇ 5ನೇ ಮಹಡಿಯಿಂದ ಹಾರಿ ಟೆಕ್ಕಿ ಆತ್ಮಹತ್ಯೆ
Team Udayavani, Dec 1, 2018, 11:51 AM IST
ಬೆಂಗಳೂರು: ಸಹುದ್ಯೋಗಿ ಯುವತಿಯೊಬ್ಬರು ಪ್ರೀತಿ ಸಲು ಒಪ್ಪದ್ದಕ್ಕೆ ಮನನೊಂದ ಟೆಕ್ಕಿಯೊಬ್ಬ 5 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಎಚ್ಎಸ್ಆರ್ ಲೇಔಟ್ನ ಐಟಿ ಕಂಪೆನಿಯೊಂದರಲ್ಲಿ ನಡೆದಿದೆ.
ಹೈದರಾಬಾದ್ ಮೂಲದ ರೋಷನ್(23)ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು, ಸಹುದ್ಯೋಗಿಯ ಬೆನ್ನು ಬಿದ್ದು ಪ್ರೀತಿಸುವಂತೆ ಕಾಟ ಕೊಡುತ್ತಿದ್ದ ಎನ್ನಲಾಗಿದೆ. ಪ್ರೀತಿ ಒಪ್ಪದೇ ಇದ್ದ ಕಾರಣಕ್ಕೆ ಆಕೆಯ ಎದುರೇ 5 ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ್ದಾನೆ.
ರೋಷನ್ನ ಕಾಟ ತಾಳಲಾರದೆ ಯುವತಿ ಕೆಲಸವನ್ನೂ ಬಿಟ್ಟು ಬೇರೆ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದಳು ಎಂದು ತಿಳಿದು ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಎಚ್ಎಸ್ಆರ್ ಲೇಔಟ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು , ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.