ಮೊಟ್ಟೆ ಕೊಡಲೇಬೇಕೆಂದರೆ… ಮಿಡ್ ಡೇ ಮೀಲ್ ವಿಚಾರವಾಗಿ ಸಲಹೆ ನೀಡಿದ ತೇಜಸ್ವಿನಿ ಅನಂತ್ ಕುಮಾರ್
Team Udayavani, Aug 2, 2022, 4:40 PM IST
ಬೆಂಗಳೂರು: ಶಾಲಾ ಮಕ್ಕಳ ಮಧ್ಯಾಹ್ನದ ಊಟಕ್ಕೆ ಮೊಟ್ಟೆ ನೀಡುವ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿದ್ದು, ಈ ನಡುವೆ ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತ್ ಕುಮಾರ್ ಅವರು ಸರ್ಕಾರಕ್ಕೆ ಕೆಲವು ಸಲಹೆ ನೀಡಿದ್ದಾರೆ. ಅಲ್ಲದೆ ಸರ್ಕಾರ ಮಕ್ಕಳಿಗೆ ಮೊಟ್ಟೆ ಕೊಡಬೇಕೆಂದು ಬಯಸಿದರೆ ಮನೆಗೆ ಒದಗಿಸುವ ವ್ಯವಸ್ಥೆ ಮಾಡಲಿ ಎಂದಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಸುಮಾರು 20 ವರ್ಷಗಳಿಂದ ಮಧ್ಯಾಹ್ನದ ಊಟದ ಕ್ಷೇತ್ರದಲ್ಲಿ ನೂರಾರು ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡಿದ್ದೇನೆ. ಪ್ರಸ್ತುತ ಅದಮ್ಯ ಚೇತನದ ಮೂಲಕ ನಾಲ್ಕು ಅಡುಗೆ ಮನೆಗಳಿಂದ ಪ್ರತಿದಿನ ಎರಡು ಲಕ್ಷ ಮಕ್ಕಳಿಗೆ ಆಹಾರವನ್ನು ಬಡಿಸುತ್ತಿದ್ದೇನೆ. ನಾನು ಕೆಲವು ವಿಷಯಗಳನ್ನು ಕಲಿತಿದ್ದೇನೆ ಎಂದು ಸಲಹೆಗಳನ್ನು ಹಂಚಿಕೊಂಡಿದ್ದಾರೆ.
ನಮ್ಮ ಅಸಮಾನ ಸಮಾಜದಲ್ಲಿ ಮಗುವನ್ನು ಸಮಾನವಾಗಿ ಪರಿಗಣಿಸುವ ಕೆಲವು ಸ್ಥಳಗಳಿವೆ. ಶಾಲೆಯು ಅಂತಹ ಒಂದು ಸ್ಥಳವಾಗಿದೆ. ಮಕ್ಕಳ ಸಾಮಾಜಿಕ ಗುರುತುಗಳು ಅವರ ಶಿಕ್ಷಣದ ಮೇಲೆ ಪರಿಣಾಮ ಬೀರದಂತೆ ಮಾಡಲೆಂದೇ ಶಾಲೆಯಲ್ಲಿ ಸಮವಸ್ತ್ರದ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿಯಲ್ಲಿ, ವಿದ್ಯಾರ್ಥಿಗಳಿಗೆ ನೀಡುವ ಆಹಾರವು ರಾಜಕೀಯ ಪ್ರೇರಿತವಾಗಿರಬಾರದು. ಇದು ಎಲ್ಲಾ ವಿದ್ಯಾರ್ಥಿಗಳು ಸೇವಿಸುವಂತಿರಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಾನು ಮೊಟ್ಟೆ ನೀಡುವುದರ ವಿರೋಧಿಯಲ್ಲ. ಆದರೆ ಮೊಟ್ಟೆಯು ಅಸಮರ್ಪಕ ಪೋಷಣೆಗೆ ಪರಿಹಾರ ಎಂದು ನಾವು ಭಾವಿಸಿದರೆ ಅದು ದೊಡ್ಡ ತಪ್ಪು. ಆ ಸಮಸ್ಯೆಯನ್ನು ಪರಿಹರಿಸಲು ನಾವು ಇನ್ನೂ ಹೆಚ್ಚು ಕೆಲಸ ಮಾಡಬೇಕು. ಸ್ಥಳೀಯವಾಗಿ ಸಿಗುವ ರಾಗಿ, ಸ್ಥಳೀಯ ಹಣ್ಣುಗಳು, ತರಕಾರಿಗಳು, ಬೀಜಗಳು ಮತ್ತು ಎಣ್ಣೆಗಳನ್ನು ನೀಡುವ ಮೂಲಕ ಮಕ್ಕಳಿಗೆ ಫ್ಯಾಟ್, ಪ್ರೋಟೀನ್, ವಿಟಮಿನ್ ಗಳು ಮತ್ತು ಕಾರ್ಬೋಹೈಡ್ರೇಟ್ ಗಳನ್ನು ಒದಹಗಿಸಬಹುದು ಎಂದಿದ್ದಾರೆ.
ಇದನ್ನೂ ಓದಿ:ರಕ್ಷಿಸುವ ಪ್ರಯತ್ನ ವಿಫಲ; ಗಂಜಿ ಬೇಯಿಸುತ್ತಿದ್ದ ದೊಡ್ಡ ಪಾತ್ರೆಯೊಳಗೆ ಬಿದ್ದು ವ್ಯಕ್ತಿ ಸಾವು
ಗುಣಮಟ್ಟ ನಿಯಂತ್ರಣ ವಿಚಾರದಲ್ಲಿ ಗಮನಿಸಿದರೆ ಮೊಟ್ಟೆಗಳ ಗುಣಮಟ್ಟ ನಿಯಂತ್ರಣ ತುಂಬಾ ಕಷ್ಟ. ಅದಕ್ಕಾಗಿಯೇ ಆಹಾರ ಉದ್ಯಮವು ಮೊಟ್ಟೆಗೆ ಪರ್ಯಾಯಗಳನ್ನು ತಂದಿದೆ. ಮೊಟ್ಟೆಗಳು ಒಳಗಿನಿಂದ ಕೆಟ್ಟದಾಗಿರಬಹುದು ಆದರೆ ದೊಡ್ಡ ಪ್ರಮಾಣದಲ್ಲಿ ಅದನ್ನು ಪರಿಶೀಲಿಸುವುದು ಅಸಾಧ್ಯ. ನಮಗೆ ಪ್ರತಿಯೊಂದು ಮಗುವಿನ ಆರೋಗ್ಯವು ಮುಖ್ಯ ಎಂದು ಅವರು ಸಲಹೆ ನೀಡಿದ್ದಾರೆ.
2. I am not against eggs.
But if we think egg will solve Mal-Nutrition that is very wrong.
We need to do more to solve that problem. Good sources of fats, proteins, vitamins and carbs have to be provided to children from native millets, local fruits, vegetables, nuts and oils
— Tejaswini AnanthKumar (@Tej_AnanthKumar) August 2, 2022
ಕರ್ನಾಟಕವು ಧಾನ್ಯಗಳ ದೊಡ್ಡ ಮತ್ತು ವೈವಿಧ್ಯಮಯ ಉತ್ಪಾದಕರಾಗಿರುವುದರಿಂದ ಸೂಪರ್ ಫುಡ್ ಗಳಾದ ಮೊಳಕೆಯುಕ್ತ ಧಾನ್ಯಗಳನ್ನು ನೀಡಬಹುದು. ಇದು ಪೌಷ್ಟಿಕಾಂಶದ ಪರ ಮಾತ್ರವಲ್ಲ ಕರ್ನಾಟಕದ ರೈತರ ಪರವೂ ಆಗಿದೆ. ಆದಾಗ್ಯೂ, ಸರ್ಕಾರವು ಮೊಟ್ಟೆಗಳನ್ನು ನೀಡಲು ಬಯಸಿದರೆ, ಅವುಗಳನ್ನು ಮನೆಗೆ ಒದಗಿಸುವ ವ್ಯವಸ್ಥೆ ಮಾಡಬೇಕು. ಮೊಟ್ಟೆ ತಿನ್ನದವರಿಗೆ ಇತರ ಹಣ್ಣು ಅಥವಾ ಚಿಕ್ಕಿಯನ್ನು ನೀಡಬೇಕು ಎಂದು ತೇಜಸ್ವಿನಿ ಅನಂತ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.