ರಾಜ್ಯದಲ್ಲಿ ಮತ್ತೆ ಹತ್ತು ಒಮಿಕ್ರಾನ್ ಪ್ರಕರಣಗಳು ಪತ್ತೆ: 76ಕ್ಕೇರಿದ ಸೋಂಕಿತರ ಸಂಖ್ಯೆ
Team Udayavani, Jan 3, 2022, 8:35 AM IST
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕು ಭೀತಿ ಹೆಚ್ಚುತ್ತಿದೆ. ಇದರೊಂದಿಗೆ ಒಮಿಕ್ರಾನ್ ರೂಪಾಂತರಿ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದ್ದು, 76ಕ್ಕೇ ಏರಿಕೆಯಾಗಿದೆ.
ರಾಜ್ಯದಲ್ಲಿಂದು ಹತ್ತು ಹೊಸ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ. ಎಂಟು ಪ್ರಕರಣಗಳು ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾದರೆ, ಎರಡು ಪ್ರಕರಣಗಳು ಧಾರವಾಡದಲ್ಲಿ ಪತ್ತೆಯಾಗಿದೆ. ಬೆಂಗಳೂರಿನ ಎಂಟು ಒಮಿಕ್ರಾನ್ ಪ್ರಕರಣಗಳ ಪೈಕಿ ಐದು ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ರಾಜ್ಯದ ಒಮಿಕ್ರಾನ್ ಸೋಂಕು ಪ್ರಕರಣಗಳ ಸಂಖ್ಯೆ 76ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಇದನ್ನೂ ಓದಿ:ಇಂದಿನಿಂದ ವಿದ್ಯಾರ್ಥಿಗಳಿಗೆ ಲಸಿಕೆ: ದ.ಕ. 1.01 ಲಕ್ಷ ; ಉಡುಪಿ 53,555 ಮಕ್ಕಳಿಗೆ ಗುರಿ
ಹೆಚ್ಚುತ್ತಿದೆ ಕೋವಿಡ್: ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲೂ ಹೆಚ್ಚಾಗುತ್ತಿದೆ. ಭಾನುವಾರ ಸಂಜೆ ಆರೋಗ್ಯ ಇಲಾಖೆ ತನ್ನ ಬುಲೆಟಿನ್‌ನಲ್ಲಿ 1,187 ಕೋವಿಡ್ ಪ್ರಕರಣಗಳು ಮತ್ತು ಆರು ಸಾವು ಸಂಭವಿಸಿರುವ ಬಗ್ಗೆ ತಿಳಿಸಿದೆ. ಒಟ್ಟು ಚೇತರಿಕೆಯ ಸಂಖ್ಯೆಯನ್ನು 29,60,890 ಕ್ಕೆ ಏರಿದ್ದು, ಒಟ್ಟು ಸಕ್ರಿಯ ಪ್ರಕರಣಗಳು 10,292 ಆಗಿದೆ.
ಪ್ರಕರಣಗಳ ಹೆಚ್ಚಳವು ಬೆಂಗಳೂರು ನಗರದದಲ್ಲಿ ದಾಖಲಾಗಿದ್ದು, 923 ಸೋಂಕುಗಳು ಮತ್ತು ಮೂರು ಸಾವು ಸಂಭವಿಸಿದೆ. ದಕ್ಷಿಣ ಕನ್ನಡದಲ್ಲಿ 63, ಉಡುಪಿಯಲ್ಲಿ 54, ಮೈಸೂರಿನಲ್ಲಿ 20, ಬೆಳಗಾವಿ, ತುಮಕೂರು ಮತ್ತು ಕೊಡಗಿನಲ್ಲಿ ತಲಾ 12 ಮತ್ತು ಮಂಡ್ಯದಲ್ಲಿ 10 ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ದಾಖಲಾಗಿವೆ.
ಶೇ.5ಕ್ಕಿಂತ ಸೋಂಕು ಹೆಚ್ಚಾದರೆ ಲಾಕ್‌ಡೌನ್?: ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಾದರೆ, ಆಸ್ಪತ್ರೆಗಳಲ್ಲಿನ ಐಸಿಯು ಹಾಗೂ ಆಕ್ಸಿಜನ್ ಹಾಸಿಗೆಗಳು ಶೇ.40ರಷ್ಟು ಭರ್ತಿಯಾದರೆ ಲಾಕ್‌ಡೌನ್ ಅನಿವಾರ್ಯವಾಗಬಹುದು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಭಾನುವಾರ ಸಲಹೆ ನೀಡಿದೆ.
ಸೋಂಕು ಹೆಚ್ಚಳವಾಗದಂತೆ ತಡೆಯಲು ಹಳದಿ, ಕಿತ್ತಳೆ, ಕೆಂಪು ಬಣ್ಣಗಳ ಕೋಡ್ ಆಧಾರದ ಮೇಲೆ ನಿರ್ಬಂಧ ಹೇರಲು ಸಮಿತಿ ಸಲಹೆ ನೀಡಿದೆ. ಶೇ.1ಕ್ಕಿಂತ ಕಡಿಮೆ ಪಾಸಿಟಿವಿಟಿ ಪತ್ತೆಯಾದರೆ ಯೆಲ್ಲೊ ಅಲರ್ಟ್, ಸೋಂಕು ಶೇ.2ಕ್ಕಿಂತ ಕಡಿಮೆಯಿದ್ದರೆ ಆರೆಂಜ್ ಹಾಗೂ ಶೇ.2ಕ್ಕಿಂತ ಹೆಚ್ಚಿದ್ದರೆ ರೆಡ್ ಅಲರ್ಟ್ ವಿಧಿಸಲು ಸೂಚಿಸಿದೆ. ಯೆಲ್ಲೋ ಅಲರ್ಟ್ ಪ್ರದೇಶದಲ್ಲಿ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.