4ರಂದು ಅಮಿತ್ ಶಾ ಜತೆ ಬಿಜೆಪಿ ಕೋರ್ ಕಮಿಟಿ ಸಭೆ
Team Udayavani, Oct 3, 2017, 8:06 AM IST
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅ.4ರಂದು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಲಿದ್ದು, ಬಿಜೆಪಿಯಲ್ಲಿ ಇನ್ನೂ ಹೊಗೆಯಾಡುತ್ತಿರುವ ಭಿನ್ನಮತದ ಬಗ್ಗೆ ಮುಖಂಡರನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿದೆ. ಅಲ್ಲದೆ, ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಖಂಡರಿಗೆ ನೀಡಿರುವ ಟಾಸ್ಕ್ಗಳ ಪರಾಮರ್ಶೆ ಸಹ ಶಾ ನಡೆಸಲಿದ್ದಾರೆ.
ಶಾ ನೀಡಿದ್ದ ಟಾಸ್ಕ್ನ ವರದಿಯನ್ನು ಮುಖಂಡರು ಸಿದ್ಧಪಡಿಸಿದ್ದು, ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಪಕ್ಷ ಸಂಘಟನೆಗಾಗಿ 3 ರೀತಿಯ ಸಮಿತಿಗಳ ರಚನೆ ಮಾಡಿರುವುದು, ಪರಿವರ್ತನಾ ರಥಯಾತ್ರೆಯ ಸಿದ್ಧತೆ, ಬೂತ್ ಮಟ್ಟದ ಸಮಿತಿಯ ಉಸ್ತುವಾರಿಗಳ ನೇಮಕ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ವಿಸ್ತಾರಕರ ನೇಮಕ, ಇತರೆ ಸಮಿತಿಯ ಮಾಹಿತಿಯನ್ನು ಅ.4ರಂದು ನಡೆಯುವ ಕೋರ್ ಸಮಿತಿ ಸಭೆಯಲ್ಲಿ ಮಂಡಿಸಿಲಿದ್ದಾರೆ ಎಂಬುದು ತಿಳಿದು ಬಂದಿದೆ. ಕಳೆದ 2 ತಿಂಗಳ ಪಕ್ಷ ಸಂಘಟನೆ ವರದಿ, ವಿಸ್ತಾರಕರ ಕಾರ್ಯವೈಖರಿ, ರಾಜ್ಯ ಪ್ರವಾಸದ ನಂತರ ನಡೆದ ಬೆಳವಣಿಗೆ, ಪ್ರವಾಸ ಸಂದರ್ಭದಲ್ಲಿ ನೀಡಿರುವ ಸಲಹೆ, ಸೂಚನೆಯ ಅನುಷ್ಠಾನದ ವಸ್ತುನಿಷ್ಠ ಮಾಹಿತಿ ನೀಡುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಶಾ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಬಿಎಸ್‌ವೈ ವಿರುದ್ಧ ಅಸಮಾಧಾನ?: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಕೆಲವು ನಿರ್ಧಾರಕ್ಕೆ ಸ್ವಪಕ್ಷೀಯರಿಂದಲೇ ಅಸಮಾಧಾನ ವ್ಯಕ್ತವಾಗುತ್ತಿದೆ. ಹೋರಾಟದ ಡೆಡ್ ಲೈನ್ ಮತ್ತು ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ದಾಖಲೆ ಬಿಡುಗಡೆ ವಿಳಂಬ ವಿಚಾರವಾಗಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯ ಪ್ರವಾಸದ ಸಂದರ್ಭದಲ್ಲಿ ಹೋರಾಟದ ಡೈಡ್‌ಲೈನ್ ಪ್ರಸ್ತಾಪಿಸಿದ್ದ ಬಿಎಸ್‌ವೈ ಅವರು ಕೋರ್ ಕಮಿಟಿ ಸಭೆಯಲ್ಲಿ ಇದನ್ನು ಚರ್ಚಿಸಿರಲಿಲ್ಲ. ಗಡವು ನಿಗದಿ ಮಾಡಿದಂತೆ ನಡೆದುಕೊಂಡಿಲ್ಲ. ಇದರಿಂದ ಸಾರ್ವಜನಿಕವಾಗಿ ಪಕ್ಷ ಮತ್ತು ನಾಯಕರು ಮುಜುಗರ ಅನುಭವಿಸುತ್ತಿ¨ªಾರೆ. ನಿರ್ದಿಷ್ಟ ದಾಖಲೆ ಇದ್ದಾಗ ಮಾತ್ರ ಗಡುವು ನಿಗದಿ ಮಾಡಬೇಕೆಂದು ಕೆಲವು ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ.
ಸ್ವಚ್ಛತಾ ದಿವಸ್ ಮರೆತ ಬಿಜೆಪಿ ನಾಯಕರು?
ಕೇಂದ್ರದ ಇಬ್ಬರು ಸಚಿವರನ್ನು ಹೊರತುಪಡಿಸಿ, ರಾಜ್ಯದ ಬಿಜೆಪಿ ನಾಯಕರಿಗೆ ಮೋದಿ ಸರ್ಕಾರದ ಸ್ವಚ್ಛತಾ ದಿವಸ್ ನೆನಪಾಗಲೇ ಇಲ್ಲ. ರಾಜ್ಯಾಧ್ಯಕ್ಷ ಯಡಿಯೂರಪ್ಪ ಬೆಂಗಳೂರಿನಲ್ಲಿ ಇದ್ದರೂ ಸ್ವಚ್ಛತಾ ದಿವಸ್ ಆಚರಿಸಲಿಲ್ಲ. ಹುಬ್ಬಳ್ಳಿಯಲ್ಲಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್, ಶಿವಮೊಗ್ಗದಲ್ಲಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮೊದಲಾದ ನಾಯಕರು ಸ್ವಚ್ಛತಾ ದಿವಸ್ ಆಚರಣೆ ಮಾಡಿಲ್ಲ. ಮೊದಲೆರೆಡು ವರ್ಷ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಪಾಲ್ಗೊಂಡಿದ್ದರು. ಆದರೆ, ಈ ವರ್ಷ ತೆರೆಮರೆಗೆ ಸರಿದಂತಿದೆ. ಸೋಮವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಜನ್ಮದಿನಾಚರಣೆಯಲ್ಲೂ ಬಿಜೆಪಿ ರಾಜ್ಯ ನಾಯಕರು ಇರಲೇ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Rebels Team: ಜನವರಿಯಲ್ಲಿ ಮತ್ತೆ ರೆಬಲ್ಸ್ ಬಿಜೆಪಿ ವಕ್ಫ್ ಪ್ರವಾಸ
Belagavi Congress Session: ಮಹಾ ಜನಾಂದೋಲನ: ಕಾಂಗ್ರೆಸ್ ಪಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.