ಬಿಜೆಪಿ ಮುಂದೆ ಧ್ವನಿ ಕಳೆದುಕೊಂಡ ಭಾರತೀಯ
Team Udayavani, Jul 22, 2017, 8:24 AM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ಮುಂದುವರಿಸಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿಯ ಮುಂದೆ ಪ್ರತಿಯೊಬ್ಬ ಭಾರತೀಯನೂ ತನ್ನ ಧ್ವನಿ ಕಳೆದುಕೊಂಡಿದ್ದಾನೆ ಎಂದು ಕಿಡಿ ಕಾರಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜಯಂತಿ ಅಂಗವಾಗಿ ಜಿಕೆವಿಕೆ ಆವರಣದಲ್ಲಿ ಏರ್ಪಡಿಸಿರುವ
ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಈ ಅವಕಾಶವನ್ನು ಕೇಂದ್ರ ಸರ್ಕಾರ, ಬಿಜೆಪಿ ಮತ್ತು ಆರ್ ಎಸ್‌ಎಸ್ ಮೇಲಿನ ಆರೋಪಗಳಿಗೆ ಬಳಸಿಕೊಂಡರು. ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶದ ಜನರನ್ನು ದೋಚುತ್ತಿವೆ. ಜನರ ಮತ ಮತ್ತು ಅಧಿಕಾರಗಳನ್ನು ದೋಚುವ ಈ ಪ್ರಯತ್ನದಿಂದಾಗಿ ಪ್ರತಿ ಭಾರತೀಯ ಪ್ರಜೆಯೂ ತನ್ನ ದನಿ ಳೆದುಕೊಂಡಿದ್ದಾನೆ.
ದೇಶದ ಜನರ ಧ್ವನಿ ಕಿತ್ತುಕೊಳ್ಳುವುದೇ ಬಿಜೆಪಿಯ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ವಾಗ್ಧಾಳಿ ನಡೆಸಿದರು. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಆದರೆ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ರೈತರ ಬಗ್ಗೆ ಗಮನ ಹರಿಸುತ್ತಿಲ್ಲ. ಸಾಲ ಮನ್ನಾ ಮಾಡಬೇಕು ಎಂಬ ರೈತರ ಕೂಗಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಕನ್ನಡದಲ್ಲಿ ಮಾತು ಆರಂಭಿಸಿದ ರಾಹುಲ್: “ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ರಾಹುಲ್ ಗಾಂಧಿ, ಅಧಿಕಾರ ಮತ್ತು ಸತ್ಯ ಒಂದೇ ಅಲ್ಲ. ಎರಡೂ ಬೇರೆ, ಬೇರೆ. ಸತ್ಯದ ಮೇಲೆ ನಂಬಿಕೆ ಇಟ್ಟಿದ್ದ ಗಾಂಧೀಜಿ, ಅಂಬೇಡ್ಕರ್, ಜವಹರಲಾಲ್ ನೆಹರೂ ಮುಂತಾದವರು ಸತ್ಯದ ಬಳಿಕ ಅಧಿಕಾರ ಎಂದು ಹೇಳುತ್ತಿದ್ದರು. ಆದರೆ, ಇದು ಪರಿಸ್ಥಿತಿ ಬದಲಾಗಿದೆ.
ಅಧಿಕಾರ ಮೊದಲು, ಸತ್ಯ ನಂತರ ಎನ್ನುವಂತಾಗಿದೆ ಎಂದು ವಿಷಾದಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಮ್ಮ ಸರ್ಕಾರದ ನಾಲ್ಕು ವರ್ಷದ ಕಾರ್ಯಕ್ರಮಗಳನ್ನು ಸಾಮಾಜಿಕ ನ್ಯಾಯದ ಆಧಾರದಲ್ಲಿ ರೂಪಿಸಿದ್ದೇವೆ. ಗುಣಮಟ್ಟ ಶಿಕ್ಷಣವನ್ನು ದುರ್ಬಲ ವರ್ಗದವರಿಗೆ ತಲುಪಿಸಲು ಪರಿಣಾಮಕಾರಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ರೈತರ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ರಾಜ್ಯದ ರೈತ ಕಲ್ಯಾಣ, ಉದ್ಯೋಗ ಸೃಷ್ಟಿಯ ಕಾರ್ಯಕ್ರಮಗಳು ಮಾದರಿ ಅನಿಸಿಕೊಂಡಿದ್ದು, ಇವೆಲ್ಲವನ್ನೂ ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂದರು. ಇದೇ ವೇಳೆ ರಾಹುಲ್ ಗಾಂಧಿ ಅವರು ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳು ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ಇರುವ ಕಲ್ಯಾಣ ಆಪ್ ಬಿಡುಗಡೆ ಮಾಡಿದರು. ಅಲ್ಲದೆ, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ಕಾರ್ಯ ಚಟುವಟಿಕೆ, ಭದ್ರತೆ, ನಿರ್ವಹಣೆಗಳ ಮೇಲೆ ನಿಯಂತ್ರಣ ಕೊಠಡಿಯಿಂದಲೇ ನಿಗಾ ಇಡುವ ಸುರಕ್ಷಾ ನೇತ್ರ 24×7 ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಾಮಾಜಿಕ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್-3, ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್, ನೋಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷಡಾ.ಜಿ.ಪರಮೇಶ್ವರ್, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ನ್ಯಾಷನಲ… ಲಾ ಕಾಲೇಜಿನ ಕುಲಪತಿ ಜಾಫೆಟ… ಮತ್ತಿತರರಿದ್ದರು.
ಅಚಾತುರ್ಯದಿಂದ ಮುಜುಗರ
ಬೆಂಗಳೂರು: ಅಂಬೇಡ್ಕರ್ ಅವರ 126ನೇ ಜಯಂತಿ ಅಂಗವಾಗಿ ಜಿಕೆವಿಕೆ ಆವರಣದಲ್ಲಿ ಹಮ್ಮಿಕೊಂಡಿರುವ ಮೂರುದಿನಗಳ ಅಂತಾರಾಷ್ಟ್ರೀಯ ಸಮಾವೇಶದ ಉದ್ಘಾಟನಾ ಕಾರ್ಯಕ್ರಮ ಹತ್ತು ಹಲವು ಎಡವಟ್ಟುಗಳಿಗೆ ಕಾರಣವಾಗಿ ಗಣ್ಯರು ಮುಜುಗರಕ್ಕೆ ಒಳಗಾದ ಪ್ರಸಂಗಕ್ಕೆ ಸಾಕ್ಷಿಯಾಯಿತು.
ಸಮಾವೇಶದ ಸ್ವಾಗತ ಕಾರ್ಯಕ್ರಮದಿಂದಲೇ ಇಂತಹ ಪ್ರಸಂಗಗಳು ನಡೆಯಿತು. ಗಣ್ಯರನ್ನು ಸ್ವಾಗತಿಸುವಾಗ ನಿರೂಪಕಿ ಒಬ್ಬ ಗಣ್ಯರ ಹೆಸರು ಹೇಳುತ್ತಿದ್ದರೆ, ಅಲ್ಲಿದ್ದವರು ಇನ್ಯಾರಿಗೋ ಹೂಗುತ್ಛ ನೀಡಿ ಸ್ವಾಗತ ಕೋರುತ್ತಿದ್ದರು. ಸಭಿಕರು ಚಪ್ಪಾಳೆ ಹೊಡೆದು ಅವರಲ್ಲ, ಇವರಿಗೆ ಹೂಗುತ್ಛ ನೀಡಿ ಎಂದು ಕೂಗುತ್ತಿದ್ದರು. ಗಣ್ಯರಿಗೆ ಹೂಗುತ್ಛ ನೀಡಲು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದ ಸಚಿವರಾದ ಎಚ್.ಸಿ.ಮಹದೇವಪ್ಪ ಹಾಗೂ ಎಚ್. ಆಂಜನೇಯ ಪೈಪೋಟಿ ನಡೆಸಿದರು. ಇದರಿಂದ ಮುಜುಗರಕ್ಕೆ ಒಳಗಾದ ನಿರೂಪಕಿ, ನಾನು ಸ್ಕ್ರಿಫ್ಟ್ನಲ್ಲಿ ಕೊಟ್ಟಂತೆ ಸರಿಯಾಗಿಯೇ ಹೆಸರು ಹೇಳುತ್ತಿದ್ದೇನೆ. ಹೂಗುತ್ಛ ನೀಡುವವರು ತಪ್ಪು ಮಾಡಿದರೆ ನಾನೇನು ಮಾಡಲಿ ಎಂದು ಮೈಕ್‌ನಲ್ಲೇ ಹೇಳಿದ್ದರಿಂದ ಮುಜುಗರಕ್ಕೆ ಒಳಗಾಗುವ ಸರದಿ ವೇದಿಕೆ ಮೇಲಿದ್ದ ಗಣ್ಯರದ್ದಾಗಿತ್ತು. ಈ ಪ್ರಕರಣ ಮುಗಿದು ಉದ್ಘಾಟನೆಗೆ ದೀಪ ಬೆಳಗುವ ಸಂದರ್ಭದಲ್ಲೂ ಅಂತಹದ್ದೇ ಪ್ರಸಂಗ ಎದುರಾಯಿತು. ದೀಪ ಬೆಳಗಲು ಕ್ಯಾಂಡಲ್ ಅಥವಾ ಬೆಂಕಿ ಪೊಟ್ಟಣ ಇಟ್ಟಿರಲಿಲ್ಲ. ದೀಪ ಬೆಳಗಲು ಗಣ್ಯರು ಬಂದಾಗಲಷ್ಟೇ ಈ ವಿಷಯ ಗೊತ್ತಾಗಿ ಸಚಿವ ಆಂಜನೇಯ ಬೆಂಕಿಪೊಟ್ಟಣಕ್ಕೆ ಹುಡುಕಾಡುವಂತಾಯಿತು. ಈ ಸಂದರ್ಭದಲ್ಲಿ ಅಸಮಾಧಾನಗೊಂಡ ಸಚಿವ ಕೃಷ್ಣ ಭೈರೇಗೌಡ ಆಯೋಜಕರ ಮೇಲೆ ಗರಂ ಆದರು.
ನಗೆಗಡಲಲ್ಲಿ ತೇಲಿದ ಸಭಾಂಗಣ: ಅಂತಾರಾಷ್ಟ್ರೀಯ ಸಾಮಾಜಿಕ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್-3
ಭಾಷಣ ಮಾಡುವಾಗ ಸಭಾಂಗಣ ನಗೆಗಡಲಲ್ಲಿ ತೇಲಿತು. ಆಂಗ್ಲ ಭಾಷಿಕರಾದ ಅವರು ಗಣ್ಯರ ಹೆಸರು ಹೇಳುವಾಗ ಬಳಸಿದ ಪದಗಳು, ಹೆಸರು ಹೇಳಲು ತಡವರಿಸುತ್ತಿದ್ದುದು ನೆರೆದಿದ್ದವರಲ್ಲಿ ನಗೆ ಚಿಮ್ಮಲು ಕಾರಣವಾಯಿತು.
ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಿದ್ದಂತೆ ಬೇಕೇ ಬೇಕು ನ್ಯಾಯ ಬೇಕು ಎಂದು ಕೂಗುತ್ತಾ ವೇದಿಕೆ ಏರಿದ
ಪ್ರತಿಭಟನಾಕಾರನೊಬ್ಬ, ಪೊಲೀಸ್ ವರದಿ ಜಾರಿಯಾಗಬೇಕು ಎಂದು ಒತ್ತಾಯಿಸಲಾರಂಭಿಸಿದ. ಇದರಿಂದ ವೇದಿಕೆಯಲ್ಲಿದ್ದ ಗಣ್ಯರು ಇರುಸು-ಮುರುಸಿಗೊಳಗಾದರು. ನಂತರ ಪೊಲೀಸರು ಪ್ರತಿಭಟನಾಕಾರನನ್ನು ಬಂಧಿಸಿ ಕರೆದೊಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.