ಅಧಿಕಾರಿಗಳ ಯಡವಟ್ಟು, ಉಪನ್ಯಾಸಕರ ಜೇಬಿಗೆ ಕುತ್ತು
Team Udayavani, Sep 24, 2017, 7:39 AM IST
ಬೆಂಗಳೂರು: ಪದವಿ ಕಾಲೇಜಿನ ಉಪನ್ಯಾಸಕರಿಗೆ ಯುಜಿಸಿ ಹಿಂಬಾಕಿಯ ಜತೆಗೆ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ನೀಡಿರುವುದನ್ನು 4 ಕಂತುಗಳಲ್ಲಿ ವಸೂಲಿ ಮಾಡುವಂತೆ ಕಾಲೇಜು ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶಕ್ಕೆ ಕಾಲೇಜಿನ ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಪನ್ಯಾಸಕರ ಅರಿಯರ್ ವಸೂಲಾತಿ ಸಂಬಂಧ ಇಲಾಖೆಯಿಂದ ಮೂರ್‍ನಾಲ್ಕು ಆದೇಶ ಹೊರಡಿಸಲಾಗಿದೆ. ಯುಜಿಸಿ ಹಿಂಬಾಕಿಯ ಸಂದರ್ಭದಲ್ಲಿ ಹೆಚ್ಚುವರಿ ಹಿಂಬಾಕಿ ವೇತನ ಪಡೆದಿರುವುದನ್ನು ವಾಪಸ್ ಪಡೆಯುವಂತೆ ಸೆ.12ರಂದು ಸುತ್ತೋಲೆ ಹೊರಡಿಸಿದ್ದರು. ಇದರ ವಿರುದ್ಧ ಪ್ರಾಧ್ಯಾಪಕರು ಪ್ರತಿಭಟನೆ ನಡೆಸಿದ್ದರಿಂದ ಹೆಚ್ಚುವರಿ ಹಿಂಬಾಕಿ ವೇತನದ ಬದಲಿಗೆ ತುಟ್ಟಿಭತ್ಯೆಯ ಹಿಂಬಾಕಿಯನ್ನು ವಸೂಲಿ ಮಾಡುವಂತೆ ಹೊಸ ಆದೇಶ ನೀಡಿದೆ. 2006ರ ಜನವರಿ 1ರಿಂದ 2009ರ ಡಿ.23ರ ಅವಧಿಯ ಸ್ಥಾನೀಕರಣ ಹಿಂಬಾಕಿ ಮೊತ್ತವನ್ನು ಪಾವತಿಸುವ ಸಂದರ್ಭದಲ್ಲಿ ಮೂಲ ವೇತನದ ಲೆಕ್ಕಚಾರದ ಬದಲಿಗೆ ತುಟ್ಟಿಭತ್ಯೆ, ಮನೆ ಬಾಡಿಗೆ
ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ಜತೆಗೆ ಇತರೆ ಭತ್ಯೆಗಳನ್ನು ಸೇರಿಸಿ ಲೆಕ್ಕಚಾರ ಮಾಡಲಾಗಿತ್ತು. ಹೀಗಾಗಿ ಸುಮಾರು 5 ಸಾವಿರ ಉಪನ್ಯಾಸಕರು ಸ್ಥಾನೀಕರಣ ಹಿಂಬಾಕಿಯ ಜತೆಗೆ ಇತರೆ ಭತ್ಯೆಯನ್ನು ಪಡೆದಿದ್ದರು. ಇದೀಗ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ, ತುಟ್ಟಿ ಭತ್ಯೆಯನ್ನು ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದೆ. ಇಲಾಖೆಯ ಈ ನಿರ್ಣಯದ ವಿರುದ್ಧ ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಮಾಡಿರುವ ಯಡವಟ್ಟಿನಿಂದ ಉಪನ್ಯಾಸಕರು ಕನಿಷ್ಠ 20 ಸಾವಿರದಿಂದ 1 ಲಕ್ಷದ ವರೆಗಿನ ತುಟ್ಟಿಭತ್ಯೆಯನ್ನು ವಾಪಾಸ್ ನೀಡಬೇಕಾದ ಪರಿಸ್ಥಿತಿ ಬಂದಿದೆ. ಒಮ್ಮೆ ಖಾತೆಗೆ ಜಮಾ ಮಾಡಿದ ಹಣವನ್ನು ವಾಪಾಸ್ ಪಡೆಯುವ ಪದ್ಧತಿ ಇಲ್ಲ. ಹೀಗಾಗಿ ಇಲಾಖೆಯ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ರಾಜ್ಯ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ವೇತನ ಬಡ್ತಿ ವಸೂಲಿಗೆ ಸೂಚನೆ
ಯುಜಿಸಿಯಿಂದ 2009ರಲ್ಲಿ ಹೊರಡಿಸಿರುವ ಪಿಎಚ್.ಡಿ ನಿಯಮಕ್ಕೆ ಅನುಸಾರವಾಗಿ 2009ರ ಜು.11ರ ನಂತರ ಪಿಎಚ್.ಡಿಗೆ ನೋಂದಣಿ ಮಾಡಿ, ಯುಜಿಸಿ ನಿಯಮವನ್ನು ಪಾಲಿಸದೇ ಪದವಿ ಪಡೆದಿರುವ ಅನುದಾನಿತ ಕಾಲೇಜಿನ ಬೋಧಕರಿಗೆ ಮುಂಗಡ ವೇತನ ಬಡ್ತಿಯನ್ನು ನೀಡಲಾಗಿದೆ. ಆಯಾ ಕಾಲೇಜುಗಳಲ್ಲಿ ಇದನ್ನು ಪರಿಶೀಲಿಸಿ, ಮುಂಗಡ ಬಡ್ತಿಯನ್ನು ವಾಪಾಸ್ ಪಡೆದು ಸೆ.28ರೊಳಗೆ ವರದಿ ಸಲ್ಲಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.