ಸಿ ಫೋರ್ ಸಮೀಕ್ಷೆ ಕಾಂಗ್ರೆಸ್ ಆಯೋಜಿತ
Team Udayavani, Aug 22, 2017, 8:00 AM IST
ಬೆಂಗಳೂರು: ರಾಜ್ಯದಲ್ಲಿ ತಕ್ಷಣ ಚುನಾವಣೆ ನಡೆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಸಿ ಫೋರ್ ಎಂಬ ಖಾಸಗಿ ಸಂಸ್ಥೆಯ ಸಮೀಕ್ಷೆ ಕಾಂಗ್ರೆಸ್ ಪ್ರಾಯೋಜಿತ ಸಮೀಕ್ಷೆಯಾಗಿದ್ದು, ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ದಿನೇಶ್ ಅಮಿನ್ ಮಟ್ಟು ಅವರು ಕೆಪಿಸಿಸಿ ಕಚೇರಿಯಲ್ಲಿ ಕುಳಿತು ಇದನ್ನು ಸಿದಟಛಿಪಡಿಸಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಜತೆಗೆ ಸಿ ವೋಟರ್ ಸಮೀಕ್ಷೆ ಕಾಂಗ್ರೆಸ್ ಪ್ರೇರಿತವಲ್ಲ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ತಳ್ಳಿಹಾಕಿರುವ ಬಿಜೆಪಿ ಮುಖಂಡರು, ಹಾಗಿದ್ದರೆ ತಕ್ಷಣವೇ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವಂತೆ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿ ಗಾರರೊಂದಿಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ನಿಯಮಬಾಹಿರ
ಕೆಲಸಗಳನ್ನು ಜನರ ಮನಸ್ಸಿನಿಂದ ಮರೆಸಲು ಸಿ ವೋಟರ್ಸ್ ಸಮೀಕ್ಷೆಯನ್ನು ಹೊರಹಾಕಲಾಗಿದೆ. ಇದು ಕೆಂಪಯ್ಯ
ಮತ್ತು ದಿನೇಶ್ ಅಮಿನ್‌ಮಟ್ಟು ಅವರು ಕಾಂಗ್ರೆಸ್ ಕಚೇರಿಯಲ್ಲಿ ಕುಳಿತು ಮಾಡಿದ ಸಮೀಕ್ಷೆ. ಹೈಕಮಾಂಡ್ ಮೆಚ್ಚಿಸಲು
ನಡೆಸಿದ ಬೋಗಸ್ ಸಮೀಕ್ಷೆ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸಚಿವ ಅನಂತಕುಮಾರ್ ಪ್ರತಿಕ್ರಿಯಿಸಿ, ಸಮೀಕ್ಷಾ ವರದಿ ಮುಖ್ಯಮಂತ್ರಿಗಳ ಕಚೇರಿಯಿಂದಲೇ ಬಹಿರಂಗವಾಗಿರುವುದರಿಂದ ಅದು ಮುಖ್ಯಮಂತ್ರಿಗಳ ಪ್ರಾಯೋಜಿತ ಸಮೀಕ್ಷೆ ಎಂಬುದು ಸ್ಪಷ್ಟವಾಗುತ್ತದೆ. ನಿಜವಾದ ಸಮೀಕ್ಷೆ 2018 ಮಾರ್ಚ್, ಏಪ್ರಿಲ್ ತಿಂಗಳಲ್ಲಿ ನಡೆಯಲಿದ್ದು, ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು. ಜಗದೀಶ ಶೆಟ್ಟರ್ ಮಾತನಾಡಿ, ಇದು ಮುಖ್ಯಮಂತ್ರಿಗಳ ಮಾಧ್ಯಮ ವಲಯದಿಂದ ಬಂದಿರುವ ಕಾಂಗ್ರೆಸ್ ಪ್ರಾಯೋಜಿತ ಸಮೀಕ್ಷೆಯಾಗಿದ್ದು, ಇಂತಹ ಸಮೀಕ್ಷೆಗಳ ಬಗ್ಗೆ ಬಿಜೆಪಿ ತಲೆಕೆಡಿಸಿಕೊಳ್ಳುವುದಿಲ್ಲ
ಎಂದರು. ವಿಷಯಾಂತರ ಮಾಡಲು ಕಾಂಗ್ರೆಸ್ ಸಿ ವೋಟರ್ ಸಮೀಕ್ಷೆ ನಡೆಸಿದ್ದು, ಅಧಿಕಾರಕ್ಕೆ ಬರುವ ವಿಶ್ವಾಸ ಇದ್ದರೆ ತಕ್ಷಣ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗಿ ಎಂದು ಶಾಸಕ ಸಿ.ಟಿ.ರವಿ ಸವಾಲು ಹಾಕಿದರು.
ಸಿ ವೋಟರ್ ಸಮೀಕ್ಷೆ ಸುಳ್ಳು
ಬಾಗಲಕೋಟೆ: ಮುಂಬರುವ ವಿಧಾನಸಭೆ ಚುನಾವಣೆ ಕುರಿತು ನಡೆದ ಸಿ ವೋಟರ್ ಸಮೀಕ್ಷೆ ಸಂಪೂರ್ಣ ಸುಳ್ಳು. ಸಿ ವೋಟರ್ ಸಮೀಕ್ಷೆ ನಡೆಸುವ ಸಂಸ್ಥೆಯನ್ನೇ ಬುಟ್ಟಿಗೆ ಹಾಕಿ ಈ ಸಮೀಕ್ಷೆ ನಡೆಸಲಾಗಿದೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆರೋಪಿಸಿದರು. ಅಧಿಕಾರದಲ್ಲಿ ಇರೋರು ತಮ್ಮ ಪ್ರಭಾವ ಬಳಸಿ, ಸಿ ವೋಟರ್ ಸಮೀಕ್ಷೆ ನಡೆಸಿದ್ದಾರೆ. ಈ ಸಮೀಕ್ಷೆ ಸುಳ್ಳಾಗಲಿದೆ. ಒಂದು ವೇಳೆ ಸತ್ಯವಾದರೆ ನಾನು ರಾಜಕೀಯವನ್ನೇ ತೊರೆಯುತ್ತೇನೆ ಎಂದು ಸವಾಲು ಹಾಕಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.