ವರ್ಗಕ್ಕೆ ಲಂಚ: ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ
Team Udayavani, Feb 10, 2017, 3:45 AM IST
ವಿಧಾನಸಭೆ: ವರ್ಗಾವಣೆಗೆ ಲಂಚ ಪಡೆದಿರುವ ಬಗ್ಗೆ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಮಾಡಿರುವ ಆರೋಪ
ಸದನದಲ್ಲಿ ಪ್ರತಿಧ್ವನಿಸಿ, ಆರೋಪ ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿ ಹೊಂದಲು ಸಿದ್ಧ ಎಂದು ಹೇಳಿದ ಮಾಜಿ ಸಚಿವ ಪರಮೇಶ್ವರ್ ನಾಯಕ್, ಸುಳ್ಳು ಎಂದಾದರೆ ನೀವು ರಾಜೀನಾಮೆ ನೀಡುತ್ತೀರಾ ಎಂದು ಜಗದೀಶ್ ಶೆಟ್ಟರ್ಗೆ ಸವಾಲು ಹಾಕಿದರು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತ ನಾಡುತ್ತಿದ್ದ ಶೆಟ್ಟರ್, ಅನುಪಮಾ ಶೆಣೈ
ವರ್ಗಾವಣೆಗೆ ಪರಮೇಶ್ವರ್ ನಾಯಕ್ 40 ಲಕ್ಷ ರೂ. ಲಂಚ ಪಡೆದಿದ್ದರು ಅಂತ ಆರೋಪಿಸಿದ್ದಾರೆ. ಇದು ಗಂಭೀರ
ವಿಷಯ ಈ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದರು.
ಆದರೆ, ಆ ಸಂದರ್ಭದಲ್ಲಿ ಸದನದಲ್ಲಿ ಪರಮೇಶ್ವರ್ ನಾಯಕ್ ಹಾಜರಿರಲಿಲ್ಲ. ನಂತರ ಆಗಮಿಸಿದ ಅವರು, ಜಗದೀಶ್
ಶೆಟ್ಟರ್ ಮಾಡಿರುವ ಆರೋಪಕ್ಕೆ ವಿವರಣೆ ನೀಡಲು ಅವಕಾಶ ನೀಡುವಂತೆ ಎದ್ದು ನಿಂತು, ಅನುಪಮಾ ಶೆಣೈ ತಮ್ಮ ತಪ್ಪಿನಿಂದ ಅಧಿಕಾರ ಕಳೆದುಕೊಂಡು ದಿನಕ್ಕೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರ ಎಂದು ಹೇಳಿದರು.
ವರ್ಗಾವಣೆಗೆ ನಾನು ಲಂಚ ಪಡೆದಿದ್ದೇನೆ ಎನ್ನುವುದಕ್ಕೆ ಅವರ ಬಳಿ ದಾಖಲೆಗಳಿದ್ದರೆ ಬಹಿರಂಗ ಪಡಿಸಲಿ, ಆ ಬಗ್ಗೆ ಎಸಿಬಿ ಅಥವಾ ಸಿಬಿಐನಿಂದಲೂ ತನಿಖೆ ನಡೆಸಿದರೂ ನಾನು ಎದುರಿಸಲು ಸಿದ್ಧ. ದಾಖಲೆ ಬಿಡುಗಡೆ ಮಾಡಿದರೆ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.