ಬಯಲು ಶೌಚ ನಿರ್ಮೂಲನೆಗೆ ಉ.ಕರ್ನಾಟಕವೇ ಸವಾಲು
Team Udayavani, Oct 4, 2017, 7:10 AM IST
ಹುಬ್ಬಳ್ಳಿ: 2018ರ ಮಾರ್ಚ್ ಒಳಗಾಗಿ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತವಾಗಿಸುವ ಸಂಕಲ್ಪ ರಾಜ್ಯ ಸರಕಾರ ಹಾಗೂ ಗ್ರಾಮೀಣಾಭಿವೃದಿಟಛಿ ಇಲಾಖೆಯದ್ದು. ಆದರೆ ಈ ಗುರಿಗೆ ಉತ್ತರ ಕರ್ನಾಟಕ ಸವಾಲಾಗಿ ಗೋಚರಿಸುತ್ತಿದೆ.
ಮೂರ್‍ನಾಲ್ಕು ವರ್ಷಗಳಿಂದ ಶೌಚಾಲಯ ನಿರ್ಮಾಣ ಹಾಗೂ ಜಾಗೃತಿ ಅಭಿಯಾನಕ್ಕೆ ಗ್ರಾಮೀಣಾಭಿವೃದಿಟಛಿ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಆದರೆ, ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಶೌಚಾಲಯ ನಿರ್ಮಾಣ ಸರಾಸರಿ ಶೇ.56.15 ಆಗಿದೆ. ಹೈದ್ರಾಬಾದ್ ಕರ್ನಾಟಕದ ಶೇ.46ರಷ್ಟಿದೆ. ಕೊಪ್ಪಳ ಜಿಲ್ಲೆಯ ಸಾಧನೆ ಬದಿಗಿಟ್ಟು ನೋಡಿದರೆ ಹೈಕ ಭಾಗದ ಐದು ಜಿಲ್ಲೆಗಳ ಸರಾಸರಿ ಶೇ.37.4ರಷ್ಟು ಮಾತ್ರ. ಹೈ.ಕ. ಭಾಗದ ಆರು ಜಿಲ್ಲೆಗಳಲ್ಲಿ ನಾಲ್ಕು ಜಿಲ್ಲೆಗಳು ಶೇ.27ರಿಂದ ಶೇ.36ರಷ್ಟು ಶೌಚಾಲಯ ನಿರ್ಮಾಣ ಫಲಿತಾಂಶ ನೀಡಿದ್ದರೆ, ಉಳಿದೆರಡು ಜಿಲ್ಲೆಗಳು ಸಮಾಧಾನಕರ ಫಲಿತಾಂಶ ನೀಡಿವೆ.
ಬೀದರ್ ಜಿಲ್ಲೆಯಲ್ಲಿ ಶೇ.31ರಷ್ಟು ಶೌಚಾಲಯ ನಿರ್ಮಾಣವಾಗಿದ್ದು, ಶೇ.69ರಷ್ಟು ಆಗಬೇಕಿದೆ. ಕಲಬುರಗಿಯಲ್ಲಿ ಶೇ.39 ಆಗಿದ್ದು, ಶೇ.61ರಷ್ಟು ಆಗಬೇಕಿದೆ. ರಾಯಚೂರು ಜಿಲ್ಲೆಯಲ್ಲಿ ಶೇ.36ರಷ್ಟು ಆಗಿದ್ದರೆ, ಶೇ.64ರಷ್ಟು ಆಗಬೇಕಿದೆ. ಬಳ್ಳಾರಿ ಜಿಲ್ಲೆಯಲ್ಲಿ ಶೇ.54ರಷ್ಟು ಆಗಿದ್ದರೆ, ಶೇ.46ರಷ್ಟು ಆಗಬೇಕಿದೆ.
ಕೊಪ್ಪಳ ಜಿಲ್ಲೆ ಶೇ.89ರಷ್ಟು ಸಾಧನೆ ಹಾಗೂ ಜಾಗೃತಿ ಅಭಿಯಾನದಲ್ಲಿ ಮುಂಚೂಣಿಯಲ್ಲಿದೆ. ಈ ಮೂಲಕ ರಾಜ್ಯ ಹಾಗೂ ದೇಶದ ಗಮನ ಸೆಳೆದಿದ್ದರೆ, ಇದೇ ಭಾಗದ ಯಾದಗರಿ ಜಿಲ್ಲೆಯಲ್ಲಿ ಕೇವಲ ಶೇ.27 ಶೌಚಾಲಯ ನಿರ್ಮಾಣವಾಗಿದ್ದು, ಶೇ.73ರಷ್ಟು ಇನ್ನೂ ಆಗಬೇಕಾಗಿದೆ. ಇದು ರಾಜ್ಯದಲ್ಲಿಯೇ ಕೊನೆ ಸ್ಥಾನದೊಂದಿಗೆ ಗಮನ ಸೆಳೆದಿದೆ.
ವಿಜಯಪುರ, ಬೆಳಗಾವಿ ನೀರಸ: ಹೈ.ಕ. ಭಾಗಕ್ಕೆ ಹೋಲಿಸಿದರೆ ಮುಂಬೈ ಕರ್ನಾಟಕ ಶೌಚಾಲಯ ನಿರ್ಮಾಣದಲ್ಲಿ ಕೊಂಚ ಉತ್ತಮ ಸ್ಥಿತಿಯಲ್ಲಿದೆ. ಆದರೂ ವಿಜಯಪುರ ಜಿಲ್ಲೆ ಯಾದಗಿರಿ ಜಿಲ್ಲೆಗೆ ಸವಾಲೊಡ್ಡುವ ಸ್ಥಿತಿಯಲ್ಲಿದೆ. ಅದೇ ರೀತಿ ಅತಿ ದೊಡ್ಡ ಜಿಲ್ಲೆ ಎಂಬ ಖ್ಯಾತಿ ಪಡೆದ ಬೆಳಗಾವಿ ಶೌಚಾಲಯ ನಿರ್ಮಾಣದಲ್ಲಿ ನೀರಸ ಸಾಧನೆ ತೋರಿದೆ.
ವಿಜಯಪುರ ಜಿಲ್ಲೆಯಲ್ಲಿ ಶೇ.29ರಷ್ಟು ಮಾತ್ರ ಶೌಚಾಲಯ ನಿರ್ಮಾಣವಾಗಿದ್ದು, ಶೇ.71ರಷ್ಟು ಆಗಬೇಕಿದೆ. ಬೆಳಗಾವಿ ಜಿಲ್ಲೆಯಲ್ಲಿ ಶೇ.37ರಷ್ಟು ಆಗಿದ್ದು, ಶೇ.63ರಷ್ಟು ಆಗಬೇಕಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಶೇ.43ರಷ್ಟಾಗಿದ್ದು, ಶೇ.57ರಷ್ಟು ಆಗಬೇಕಿದೆ. ಗದಗ ಜಿಲ್ಲೆಯಲ್ಲಿ ಶೇ.89ರಷ್ಟು ಆಗಿದ್ದು, ಕೇವಲ ಶೇ.11ರಷ್ಟು ಆಗಬೇಕಿದೆ. ಧಾರವಾಡ ಜಿಲ್ಲೆಯಲ್ಲಿ ಶೇ.84ರಷ್ಟು ಆಗಿದ್ದು, ಶೇ.16ರಷ್ಟು ಆಗಬೇಕಿದೆ. ಹಾವೇರಿ ಜಿಲ್ಲೆಯಲ್ಲಿ ಶೇ.74ರಷ್ಟು ಆಗಿದ್ದು, ಶೇ.26ರಷ್ಟು ಆಗಬೇಕಿದೆ. ಉತ್ತರ ಕನ್ನಡ ಜಿಲ್ಲೆ ಶೇ.98ರಷ್ಟು ಸಾಧನೆಯೊಂದಿಗೆ ಉತ್ತರ ಕರ್ನಾಟಕದಲ್ಲೇ ಮೊದಲ ಸ್ಥಾನದಲ್ಲಿದೆ. ಇಲ್ಲಿ ಶೇ.2ರಷ್ಟು ಶೌಚಾಲಯ ನಿರ್ಮಾಣ ಮಾತ್ರ ಬಾಕಿ ಇದೆ.
ತೊಲಗಬೇಕಿದೆ ಮಾನಸಿಕ ದಾರಿದ್ರé: ಉತ್ತರ ಕರ್ನಾಟಕದಲ್ಲಿ ಜಾಗೃತಿ ಕೊರತೆಯೋ, ಮಂಡಿವಂತಿಕೆಯೋ, ತಪ್ಪು ಕಲ್ಪನೆಯೋ ಗೊತ್ತಿಲ್ಲ. ಶೌಚಾಲಯ ನಿರ್ಮಾಣ ಮಾತ್ರ ಕಡಿಮೆ ಇದೆ. ಇಂದಿಗೂ ಉತ್ತರ ಕರ್ನಾಟಕದ ಹಲವು ಪಟ್ಟಣ
ಹಾಗೂ ಅರೆ ಪಟ್ಟಣಗಳಲ್ಲಿಯೂ ಬಹಿರ್ದೆಸೆಗೆ ರಸ್ತೆಗಳೇ ಆಸರೆ ಎನ್ನುವಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.