ಆಗಸ್ಟ್‌ನಲ್ಲಿ “ಮಕ್ಕಳ ಸ್ನೇಹಿ’ ಕೋರ್ಟ್‌ಗಳ ಕಾರ್ಯಾರಂಭ
Team Udayavani, Jul 17, 2017, 3:40 AM IST
ಬೆಂಗಳೂರು: ಪೋಕೊÕà ಕಾಯ್ದೆಯಡಿ ದಾಖಲಾದ ಪ್ರಕರಣಗಳ ವಿಚಾರಣೆಗೆ “ಪ್ಲೇ ಹೋಮ್’ ಮಾದರಿಯಲ್ಲಿ ರೂಪಿಸಲಾಗಿರುವ ಎರಡು ವಿಶೇಷ ಕೋರ್ಟ್‌ಗಳು ಆಗಸ್ಟ್ ಮೊದಲ ವಾರದಲ್ಲಿ ಕಾರ್ಯಾರಂಭ ಮಾಡಲಿವೆ. ಈ ಮೂಲಕ ದೆಹಲಿ, ಗೋವಾ, ತೆಲಂಗಾಣದ ಬಳಿಕ ಪೋಕೊÕà ಪ್ರಕರಣಗಳ ವಿಚಾರಣೆಗೆ “ಮಕ್ಕಳ ಸ್ನೇಹಿ’ ಕೋರ್ಟ್‌ಗಳನ್ನು ಸ್ಥಾಪಿಸಿದ ಹೆಗ್ಗಳಿಕೆಗೆ ರಾಜ್ಯಸರ್ಕಾರ ಪಾತ್ರವಾಗಲಿದೆ. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನ ಐದನೇ ಮಹಡಿಯಲ್ಲಿ ರೂಪುಗೊಂಡಿರುವ ಈ ವಿಶೇಷ ಕೋರ್ಟ್‌ಗಳ ಕಾರ್ಯಶೈಲಿ ಸಂಪೂರ್ಣ ವಿಭಿನ್ನವಾಗಿರಲಿದೆ.
ಮಕ್ಕಳಿಗೆ ಆಪ್ತವೆನಿಸುವ “ಪ್ಲೇ ಹೋಮ್‌ಗಳ’ ಮಾದರಿಯಲ್ಲಿ ಅವು ಕಾರ್ಯನಿರ್ವಹಿಸಲಿವೆ.
ದೌರ್ಜನ್ಯಕ್ಕೆ ಒಳಗಾಗಿ ಈಗಾಗಲೇ ಮಾನಸಿಕವಾಗಿ ಕುಗ್ಗಿರುವ ಸಂತ್ರಸ್ತ ಮಕ್ಕಳ ಮನಸ್ಸಿಗೆ ಕೋರ್ಟ್‌ನ ವಿಚಾರಣೆ ಮತ್ತಷ್ಟು ದುಷ್ಪರಿಣಾಮ ಬೀರದಂತೆ ನೋಡಿಕೊಳ್ಳುವ ಸಲುವಾಗಿ ಮಕ್ಕಳ ಸ್ನೇಹಿ ಕೋರ್ಟ್‌ಗಳನ್ನು ರೂಪಿಸಲಾಗಿದೆ. ವಿಚಾರಣೆಗೆ ಬರುವ ಸಂತ್ರಸ್ತ ಮಕ್ಕಳು ಹಾಗೂ ಪೋಷಕರಿಗೆ ಪ್ರತ್ಯೇಕ ಕೊಠಡಿ, ಆಪ್ತವೆನಿಸುವ ವಾತಾವರಣ ರೂಪಿಸಲು ಗೋಡೆಗಳ ಮೇಲೆ ಚಿತ್ರಪಟಗಳು, ಆಟವಾಡಲು ಆಟಿಕೆ ವಸ್ತುಗಳು, ಹಸಿವಾದರೆ ತಿಂಡಿ, ಸಿಹಿ ತಿನಿಸುಗಳು, ಹಾಲು ಕೊಡುವ ಕ್ಯಾಂಟೀನ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.
ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ ಎಂಬ ಸಂಗತಿ ಮಕ್ಕಳ ಗಮನಕ್ಕೆ ಬಾರದ ಹಾಗೆ ವಕೀಲರು ಹಾಗೂ ನ್ಯಾಯಾಧೀಶರು ನಡೆದುಕೊಳ್ಳಲಿದ್ದಾರೆ. ನ್ಯಾಯಾಧೀಶರು ಮನೆಯ ಹಿರಿಯ ಸದಸ್ಯರಂತೆ ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿದ್ದಾರೆ. ಅಲ್ಲದೆ, ದೌರ್ಜನ್ಯ ಎಸಗಿದ ಆರೋಪಿಗಳು ಯಾವುದೇ ಕಾರಣಕ್ಕೂ ಸಂತ್ರಸ್ತ ಮಕ್ಕಳ ಕಣ್ಣಿಗೆ ಬೀಳದಂತೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಆರೋಪಿಗಳಿಗೆ ಪ್ರತ್ಯೇಕವಾದ ಏಕಮುಖ ಗಾಜಿನ ಕಟಕಟೆ ನಿರ್ಮಿಸಲಾಗಿದ್ದು, ಮಕ್ಕಳಿಗೆ ಆರೋಪಿ ಕಾಣಿಸುವುದಿಲ್ಲ. ಈ ಕೋರ್ಟ್ ಗಳಿಗೆ ಬರಲು ಸಂತ್ರಸ್ತ ಮಕ್ಕಳು ಹಾಗೂ ಪೋಷಕರಿಗೆ ಪ್ರತ್ಯೇಕ ಲಿಫ್ಟ್ ಹಾಗೂ ಆರೋಪಿಗಳು, ಪೊಲೀಸರಿಗೆ ಮತ್ತೂಂದು ಲಿಫ್ಟ್ ವ್ಯವಸ್ಥೆ ಮಾಡಲಾಗಿದ್ದು, ಇವುಗಳಲ್ಲಿ ವಕೀಲರು ಹಾಗೂ ಇತರೆ ಸಾರ್ವಜನಿಕರ ಓಡಾಟಕ್ಕೆ ಅವಕಾಶವಿರುವುದಿಲ್ಲ. ವಿಚಾರಣೆ ವೇಳೆ ಮಕ್ಕಳಿಗೆ
ಕೋರ್ಟ್ ಎಂಬ ಸಂಗತಿ ಬಾರದ ಹಾಗೆ ನೋಡಿ ಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಟಿ ಸಿವಿಲ್ ಕೋರ್ಟ್‌ನ 5ನೇ ಮಹಡಿಯಲ್ಲಿರುವ 51, 54, 55ನೇ ಕೋರ್ಟ್ ಹಾಲ್‌ಗಳಲ್ಲಿ ಪೋಕೊÕà ಪ್ರಕರಣಗಳ ವಿಚಾರಣೆ ನಡೆಸಲಾಗುತ್ತಿದೆ. ಇದೀಗ ಹೊಸದಾಗಿ ರೂಪುಗೊಂಡಿರುವ ಮಕ್ಕಳ ಸ್ನೇಹಿ ಎರಡು ಕೋರ್ಟ್‌ಗಳಲ್ಲಿ ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದ 750ಕ್ಕೂ ಅಧಿಕ ಹಾಗೂ ಬೆಂ.ಗ್ರಾಮಾಂತರದ 250ಕ್ಕೂ ಹೆಚ್ಚು ಪ್ರಕರಣಗಳ
ವಿಚಾರಣೆ ನಡೆಯಲಿದೆ. ಇದರಿಂದ ಪ್ರಕರಣಗಳ ಇತ್ಯರ್ಥ ಚುರುಕುಗೊಳ್ಳಲಿದ್ದು, ಆರೋಪಿಗಳಿಗೆ ಶಿಕ್ಷೆಯಾಗಲಿದೆ ಎಂದು ಕೋರ್ಟ್ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
– ಮಂಜುನಾಥ್ ಲಘುಮೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!
Incentive: ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಪ್ರೋತ್ಸಾಹಧನ ದ್ವಿಗುಣ: ಸಚಿವ ಮಹದೇವಪ್ಪ
Mining Case: ಶಿಕ್ಷೆ ರದ್ದು ಕೋರಿ ಶಾಸಕ ಸೈಲ್ ಸೇರಿ ನಾಲ್ವರು ಹೈಕೋರ್ಟ್‌ಗೆ
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.