ಐಐಟಿ ಶಾಶ್ವತ ಕ್ಯಾಂಪಸ್ ನಿರ್ಮಾಣ ಕಾರ್ಯ ಆಮೆಗತಿ
Team Udayavani, Mar 22, 2017, 9:52 AM IST
ಧಾರವಾಡ: ವಿದ್ಯಾಕಾಶಿ ಧಾರವಾಡಕ್ಕೆ ಮುಕುಟಪ್ರಾಯವಾಗಿ ಕಳೆದ ವರ್ಷದಿಂದ ಆರಂಭಗೊಂಡಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಶಾಶ್ವತ ಕಟ್ಟಡ ನಿರ್ಮಾಣ ಕಾರ್ಯ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದು, ಪೂರ್ಣ ಕಟ್ಟಡ ತಲೆ ಎತ್ತಲು ಇನ್ನೂ 5 ವರ್ಷಗಳು ಬೇಕಂತೆ.
ಹೀಗಂತ ಹೇಳುತ್ತಿರುವುದು ಸ್ವತಃ ಐಐಟಿ ಅಧಿಕಾರಿಗಳೇ. ಕಳೆದ ವರ್ಷ ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿಯೇ 1411 ಕೋಟಿ ರೂ.ಗಳನ್ನು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಡಿ ಧಾರವಾಡ ಐಐಟಿಗೆ ಕಾಯ್ದಿರಿಸಿತ್ತು. ಅಂದು ಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗೆ ಸರ್ವೇ ಕಾರ್ಯ ಮುಗಿದು ಕಾಂಪೌಂಡ್ ಗೋಡೆ ತಲೆ ಎತ್ತಬೇಕಿತ್ತು. ಆದರೆ ಕಾಮಗಾರಿಯಲ್ಲ, ಇನ್ನೂ ಐಐಟಿ ತನಗೆ ಸರ್ಕಾರ ನೀಡಿದ ಜಾಗವನ್ನು ಸರ್ವೇ ಮಾಡಿಕೊಳ್ಳುತ್ತಿದೆಯಷ್ಟೆ. ಆಕರ್ಷಕವಾದ ಐಐಟಿ ಮುಖ್ಯ ಕಟ್ಟಡ, ದೈತ್ಯ ಕ್ರೀಡಾಂಗಣ ಮತ್ತು ಕ್ರೀಡಾ ಸಂಕೀರ್ಣ, ವಿದ್ಯಾರ್ಥಿ ನಿಲಯ, ಕ್ಲಾಸ್‌ರೂಮ್‌ಗಳು, ಹೈಟೆಕ್ ಕಟ್ಟಡಗಳು ತಲೆ ಎತ್ತುವುದಕ್ಕೆ ಇಷ್ಟೊತ್ತಿಗೆ ಚಾಲನೆ ಸಿಗಬೇಕಿತ್ತು. ಆದರೆ ಈವರೆಗೂ ಐಐಟಿಗೆ ನೀಡಿರುವ 500 ಎಕರೆಯಷ್ಟು ಭೂಮಿಯ (ಅರಣ್ಯವೂ ಸೇರಿ) ಸರ್ವೇ ಕಾರ್ಯವೇ ಮುಗಿದಿಲ್ಲ. ಎಲ್ಲವೂ ಆಮೆಗತಿಯಲ್ಲಿ ಸಾಗುತ್ತಿದ್ದು, ಐಐಟಿ ಕ್ಲಾಸ್‌ಗಳು ಹೆಚ್ಚು ಕಡಿಮೆ ಇನ್ನೂ ನಾಲ್ಕೈದು ವರ್ಷಗಳ ಕಾಲ ಇಲ್ಲಿನ ವಾಲಿ ಕಟ್ಟಡದಲ್ಲಿಯೇ ನಡೆಯುವ ಅನಿವಾರ್ಯತೆ ಎದುರಾಗಿದೆ. ಅಷ್ಟೇಯಲ್ಲ, ವಾಲಿ ಸಾಲದಿದ್ದರೆ, ಪಕ್ಕದಲ್ಲಿರುವ ದಕ್ಷಿಣ ಭಾರತ
ಹಿಂದಿ ಪ್ರಚಾರ ಸಭೆ ವ್ಯಾಪ್ತಿಯ ಹೈಟೆಕ್ ಕಟ್ಟಡದಲ್ಲಿ ಐಐಟಿ ತರಗತಿ ನಡೆಸಲು ಚಿಂತನೆ ನಡೆದಿದೆ. 2ನೇ ವರ್ಷಕ್ಕೆ ಸಿದ್ಧತೆ: ಐಐಟಿ ಎರಡನೇ ವರ್ಷಕ್ಕೆ 450 ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದು, ಕಲಿಯುವ ವಿಷಯಗಳ ಸಂಖ್ಯೆಯೂ ಹೆಚ್ಚಾಗಲಿದೆ. ಸದ್ಯಕ್ಕೆ ಮೆÂಕಾನಿಕಲ್, ಆಟೋಮೊಬೈಲ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್ ಮಾತ್ರ ಇಲ್ಲಿ ನಡೆಯುತ್ತಿದ್ದು, ಈ ವರ್ಷ ಇನ್ನಷ್ಟು ತಾಂತ್ರಿಕ
ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಲಿದ್ದಾರೆ. ಸದ್ಯಕ್ಕೆ ರಾಜ್ಯ ಸರ್ಕಾರದಿಂದ 7 ಕೋಟಿ ರೂ.ಗಳು ಎರಡನೇ ವರ್ಷದ ಐಐಟಿ ನಡೆಸಲು ಅಗತ್ಯ ಮೂಲಭೂತ ಸೌಕರ್ಯಕ್ಕೆ ಬಿಡುಗಡೆಯಾಗಿದ್ದು, ಬಿಟ್ಟರೆ ಶಾಶ್ವತ ಕ್ಯಾಂಪಸ್‌ನ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ.
507 ಎಕರೆ ಸರ್ವೇ ಆರಂಭ
ಕೊನೇ ಪಕ್ಷ ಐಐಟಿ ಭೂಮಿಯ ಸರ್ವೇ ಕಾರ್ಯಕ್ಕೆ ಕಳೆದ ವಾರ ಚಾಲನೆ ಸಿಕ್ಕಿದ್ದು ಧಾರವಾಡದ ಶಿಕ್ಷಣ ಪ್ರೇಮಿಗಳಲ್ಲಿ ಕೊಂಚ ಸಮಾಧಾನ ತಂದಿದೆ. 7 ಕಿ.ಮೀ.ನಷ್ಟು ಸುತ್ತಳತೆ ಹೊಂದಿರುವ ಐಐಟಿಯ 500 ಎಕರೆ ಪ್ರದೇಶದಲ್ಲಿ ಪ್ರತಿ 30 ಮೀಟರ್‌ಗೆ ಒಂದರಂತೆ ಭೂಮಾಪನ ಸರ್ವೇ ಕಲ್ಲುಗಳನ್ನು ಸದ್ಯಕ್ಕೆ ನಡೆಸಲಾಗುತ್ತಿದ್ದು, ಧಾರವಾಡ ಮೂಲದ ಖಾಸಗಿ ಕಂಪನಿಯೊಂದು ಈ ಭೂಮಾಪನ ಸಮೀಕ್ಷೆ ಮತ್ತು ಕಾಂಪೌಂಡ್ ಗೋಡೆ ನಿರ್ಮಿಸಲು ಸಜ್ಜಾಗಿದೆ.
ಸಮೀಕ್ಷೆಯೇ ಮುಗಿದಿಲ್ಲ
507 ಎಕರೆ ಭೂಮಿ ಐಐಟಿಗಾಗಿ ಕಾಯ್ದಿರಿಸಲಾಗಿದ್ದು, ಮೊದಲ ವರ್ಷಕ್ಕೆ 180 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಎರಡನೇ ವರ್ಷ 450, ಮೂರನೇ ವರ್ಷ 928 ವಿದ್ಯಾರ್ಥಿಗಳು ಹೀಗೆ ಮುಂದಿನ ಐದು ವರ್ಷಗಳಲ್ಲಿ ಪರಿಪೂರ್ಣ ಕ್ಯಾಂಪಸ್ ನಿರ್ಮಾಣವಾಗಬೇಕಿತ್ತು. ಇದಕ್ಕೆ 1411 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ವೆಚ್ಚ ಮಾಡಲಿದೆ. ಒಂದು ವರ್ಷದ ಅವಧಿಯಲ್ಲಿ ಸರ್ವೇ ಮುಗಿದು ಕಾಂಪೌಂಡ್ ಗೋಡೆ ತಲೆ ಎತ್ತಬೇಕಿತ್ತು. ಆದರೆ ಎರಡನೇ ವರ್ಷಕ್ಕೆ ಐಐಟಿ ಕಾಲಿಡುತ್ತಿದ್ದರೂ ಸಮೀಕ್ಷೆಯೇ ಮುಗಿದಿಲ್ಲ. ಒಟ್ಟಿನಲ್ಲಿ ಐಐಟಿ ಕೇಂದ್ರ ತಲೆ ಎತ್ತಲು ಇನ್ನೂ ಐದು ವರ್ಷಗಳು ಬೇಕು ಎನ್ನುತ್ತಿದ್ದಾರೆ ಇಲ್ಲಿನ ಕಟ್ಟಡ ನಿರ್ವಹಣಾ ವಿಭಾಗದ ಅಧಿಕಾರಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ
Ambedkar Row: ಕಾಂಗ್ರೆಸ್ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ
Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ
Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ
ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್ ವಿರುದ್ಧ ತಿರುಗಿ ಬಿದ್ದ ಸಂತರು
Ambedkar Row: ಕಾಂಗ್ರೆಸ್ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.