ಆರಾಧನಾ ಪ್ರತಿಭೆ ನಾನಾದೆನಾ
Team Udayavani, Jan 5, 2017, 3:45 AM IST
ಅಜ್ಜಿ ಮನೆಯ ಮುದ್ದಿನ ಕೂಸು
ಆರಾಧನಾ ಭಟ್ ಓದುತ್ತಿರುವುದು ಅಜ್ಜಿಮನೆಯಲ್ಲಿ. ಅಪ್ಪ ಅಮ್ಮ ದೂರದ ಮೈಸೂರ್‌ನಲ್ಲಿ ಉದ್ಯೋಗದಲ್ಲಿದ್ದ ಕಾರಣ ಅವಳು ಅಜ್ಜಿಮನೆಯ ಮುದ್ದಿನ ಕೂಸು. ಎರಡು ವರ್ಷದ ಮಗುವಿದ್ದಾಗ ಅಜ್ಜ ಮೊಮ್ಮಗಳನ್ನು ಕೃಷ್ಣ ವೇಷ ಸ್ಪರ್ಧೆಗೆ ಕರೆದೊಯ್ಯುತ್ತಿದ್ದರು. ಆ ಭಾಗದಲ್ಲಿ ಮಂಗಳೂರಿನ ಕಲ್ಕೂರು ಪ್ರತಿಷ್ಠಾನ ಆಯೋಜಿಸುವ ಕೃಷ್ಣ ವೇಷ ಸ್ಪರ್ಧೆ ಬಹಳ ಫೇಮಸ್ಸು. ಈ ಪುಟ್ಟ ಬಾಲೆ ತನ್ನಿಂದ ಭಾರದ ವೇಷ ಹೊತ್ತು ಕೈಯಲ್ಲೊಂದು ಪಿಳ್ಳಂಗೋವಿ ಹಿಡಿದು ಸಣ್ಣ ಅಳುಕೂ ಇಲ್ಲದೇ ಸ್ಟೇಜ್ ಹತ್ತಿದ್ದು ಕಂಡು ಅಜ್ಜನ ಖುಷಿಗೆ ಪಾರವೇ ಇಲ್ಲ. ಆಮೇಲೆ ಬಹುಮಾನವೂ ಬಂತು.
ಅಜ್ಜನ ಮನೆ ಳೆಯ ಮನಸ್ಸಿಗೆ ಸಂಸ್ಕೃತಿ ಸಂಸ್ಕಾರಗಳ ಬುನಾದಿ ಹಾಕಿತ್ತು. ಅಜ್ಜನ ಕೈಹಿಡಿದು ಸುತ್ತಮುತ್ತಲಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೆಲ್ಲ ಎವೆ ಮುಚ್ಚದೆ ನೋಡುತ್ತಿದ್ದ ಬಾಲೆಯ ಕಣ್ಣಲ್ಲಿ ಮುಂದೊಮ್ಮೆ ತಾನೂ ಹೀಗೆ ಸ್ಟೇಜ್ ಮೇಲೆ ಹತ್ತಿ ಮಾತನಾಡುವ, ಅಭಿನಯಿಸುವ, ನೃತ್ಯ ಮಾಡುವ ಕನಸು.
ಮನೆಯಲ್ಲಿ ನಿತ್ಯ ಸಂಜೆ ನಡೆಯುತ್ತಿದ್ದ ಭಜನೆ ಕೇಳುತ್ತಿದ್ದ ಪುಟಾಣಿ ಮಂಗಳೂರಲ್ಲಿ ನಡೆಯುತ್ತಿದ್ದ ಭಜನಾ ಸ್ಪರ್ಧೆಗಳಲ್ಲಿ ಫಸ್ಟ್ ಪ್ರೈಸ್ ಗಿಟ್ಟಿಸಿಕೊಳ್ಳುತ್ತಿದ್ದಳು.
*
ಪ್ರತಿಭಾರಾಧನೆ
ಈ ಹುಡುಗಿಗೆ ಅಪರೂಪದ ಟ್ಯಾಲೆಂಟ್ ಒಂದಿದೆ. ನೀವು ಯಾವುದೇ ಸಬೆjಕ್ಟ್ ಹೇಳಿ, ಅದರ ಬಗ್ಗೆ ಅರ್ಧಗಂಟೆಯವರೆಗೂ ಮಾತನಾಡುವ ಚತುರತೆ ಈಕೆಗಿದೆ. ಅಷ್ಟೊಂದು ಜ್ಞಾನ ಎಲ್ಲಿಂದ ಬಂತು? ಹನ್ನೆರಡರ ಹುಡುಗಿಗೆ ಅಷ್ಟೊಂದು ಜ್ಞಾನ ಹೇಗೆ ಬಂತು ಅಂದರೆ ಆಕೆ ಮನೆಯ ದೊಡ್ಡ ಪುಸ್ತಕ ಕಪಾಟಿನತ್ತ ಬೆಟ್ಟು ಮಾಡುತ್ತಾಳೆ. ಅದರಲ್ಲಿ ಬಾಲ ರಾಮಾಯಣ ಮಹಾಭಾರತದಿಂದ ಸಮಕಾಲೀನ ವಿಷಯಗಳವರೆಗೆ ಸಾವಿರಾರು ಪುಸ್ತಕಗಳು. ಸಮಯ ಇದ್ದಾಗಲೆಲ್ಲ ಪುಸ್ತಕಗಳ ಜೊತೆಗೆ ಸಮಯ ಕಳೆಯುವುದು ಆರಾಧನಾಗೆ ಪ್ರಿಯವಾದ ಹವ್ಯಾಸ.
ಅದರ ಪರಿಣಾಮ ಹೆಚ್ಚಿನ ಶ್ರಮವಿಲ್ಲದೇ ಆಕೆಗೆ ವಿಷಯಗಳ ಹಿಡಿತ ಸಿಗುತ್ತದೆ. ಹೀಗಾಗಿ ಆಕೆ ನಿರರ್ಗಳವಾಗಿ ಕೊಟ್ಟ ವಿಷಯದ ಮೇಲೆ ಮಾತನಾಡುತ್ತ ಹೋಗುತ್ತಾಳೆ. ಪ್ರತಿಭಾ ಕಾರಂಜಿಯಲ್ಲಿ ಆಶು ಭಾಷಣಕ್ಕೆ ನಿಂತರೆ ಇವಳನ್ನು ಸರಿಗಟ್ಟುವವರಿಲ್ಲ. ಬರೀ ಎರಡು ನಿಮಿಷ ಯೋಚನೆ ಮಾಡಿ ಪಟ ಪಟನೆ ಮಾತನಾಡುತ್ತಾಳೆ. ಸ್ಪಷ್ಟ ಭಾಷೆ, ವಿಚಾರ ಮಂಡನೆಗೆ ಮನಸೋಲದ ಜಡ್ಜ್ಗಳಿಲ್ಲ.
ಇದರ ಜೊತೆಗೆ ಆಕೆ ಸ್ವತ್ಛ ಮಾತಿನ ನಿರೂಪಕಿಯೂ ಹೌದು. ಆಳ್ವಾಸ್ ಪ್ರತಿಷ್ಠಾನದ ಮೋಹನ್ ಆಳ್ವ, ವಿವೇಕ್ ಆಳ್ವಾ ಆರಂಭದಿಂದಲೇ ಆಕೆಯ ಪ್ರತಿಭೆ ಗುರುತಿಸಿದ್ದಾರೆ. ನುಡಿಸಿರಿಯಂಥ ನಾಡು ನುಡಿಯ ರಾಷ್ಟ್ರೀಯ ಉತ್ಸವದಲ್ಲಿ ಆಕೆಯ ನಿರೂಪಣೆಗೆ ಅವಕಾಶ ನೀಡಿದ್ದಾರೆ. ವಿರಾಸತ್‌ನಲ್ಲಿ ಡಾ. ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಂಥ ಮಹಾನ್ ಗಾಯಕನ ಕಾರ್ಯಕ್ರಮಕ್ಕೆ ನಿರೂಪಕಿಯಾದದ್ದು ಆರಾಧನಾಗೆ ಹೆಮ್ಮೆ ತಂದಿದೆ. ಈ ನಿರೂಪಣೆಗೆ 300 ರಷ್ಟು ವಿದ್ಯಾರ್ಥಿಗಳ ಸಂದರ್ಶನ ಮಾಡಿದ್ದರು. ಉಳಿದೆಲ್ಲರೂ ಹೈಸ್ಕೂಲ್ ವಿದ್ಯಾರ್ಥಿಗಳಾದರೆ ಈಕೆ ಪ್ರೈಮರಿ ಶಾಲೆಯ ಕಿರಿಯ ವಿದ್ಯಾರ್ಥಿನಿ. ಕೊನೆಗೂ ಆಯ್ಕೆಯಾದದ್ದು ಈ ಎಳೆಯ ಹುಡುಗಿಯೇ.
ರಜೆ ಮತ್ತು ರಂಗಮನೆ
ಸುಳ್ಯದಲ್ಲಿ ಹಿರಿಯ ರಂಗಕರ್ಮಿ ಜೀವನರಾಮ್ ಸುಳ್ಯ ಅವರ “ರಂಗ ಮನೆ’ ಎಂಬ ರಂಗಕೇಂದ್ರವಿದೆ. ಬೇಸಿಗೆ ರಜೆಯಲ್ಲಿ ಅಲ್ಲಿ ರಂಗಪಾಠಗಳನ್ನು ಹೇಳಿಕೊಳ್ಳುತ್ತಾಳೆ. ಜೀವನರಾಮ್ ಸುಳ್ಯ ಅವರೂ ಈ ಪೋರಿ ಬಗ್ಗೆ ಪ್ರಶಂಸೆಯ ಮಾತಾಡುತ್ತಾರೆ. ಇನ್ನುಳಿದಂತೆ ಬಿಡುವಿರದ ಕಾರ್ಯಕ್ರಮಗಳು. ಆರಾಧನಾ ನಿರೂಪಣೆಗೆ ಕರಾವಳಿಯಲ್ಲಿ ಬಹಳ ಜನಪ್ರಿಯತೆ ಇದೆ. ಹೀಗೆ ರಜೆಯಿಡೀ ಕಾರ್ಯಕ್ರಮಗಳಲ್ಲೇ ಕಳೆದುಹೋಗುವುದು ಹೆಚ್ಚು.
ಮಕ್ಕಳಿಗೆ ನಾಟಕ ಪಾಠ
ಆರಾಧನಾ ಶಾಲೆಯಲ್ಲಿದ್ದರೆ ತನ್ನ ತರಗತಿಯ ಅಥವಾ ಕಿರಿಯ ವಿದ್ಯಾರ್ಥಿಗಳಿಗೆ ನಾಟಕದ ಪಾಠ ಹೇಳಿಕೊಡುತ್ತಾಳೆ. ಇಲ್ಲಿ ನಾಟಕಕಾರ್ತಿಯಾಗಿ, ನಿರ್ದೇಶಕಿಯಾಗಿ ಒಮ್ಮೊಮ್ಮೆ ನಟಿಯಾಗಿ ಹಲವು ಬಗೆಯ ನಿರ್ವಹಣೆ ಈಕೆಯದ್ದು. ವಾರಕ್ಕೊಮ್ಮೆ ಹದಿನೈದು ದಿನಗಳಿಗೊಮ್ಮೆ ಈ ರೀತಿಯ ಚಟುವಟಿಕೆಗಳನ್ನು ಶಾಲೆಯಲ್ಲಿ ನಡೆಸುತ್ತಲೇ ಬಂದಿದ್ದಾಳೆ. ಟೀಚರ್ಸ್ ಆರಾಧನಾ ಪ್ರತಿಭೆಯನ್ನು ಪೋಷಿಸುತ್ತಲೇ ಬಂದಿದ್ದಾರೆ.
ಮಾತಿನ ಮಲ್ಲಿಯ ಮಾನವೀಯ ಮುಖ
ಚಿನ್ನಾರಿಯಲ್ಲಿ ಮಾತನಾಡಿದ ಪ್ರತಿಭಾನ್ವಿತ ಮಕ್ಕಳಲ್ಲಿ ಹೆಚ್ಚಿನವರು ತಮ್ಮ ಮಾನವೀಯ ಗುಣಗಳಿಂದಲೂ ಗಮನಸೆಳೆಯುತ್ತಾರೆ. ಆರಾಧನಾಗೆ ಮಾತು ಸ್ವಲ್ಪ ಹೆಚ್ಚು. ಮಾನವೀಯತೆಯೂ ಹೆಚ್ಚು. ಶಾಲೆಯಲ್ಲಾಗಲೀ ಹೊರಗಾಗಲೀ ಅಗತ್ಯವಿರುವವರಿಗೆ ಸಹಾಯ ಮಾಡಲು ಈಕೆ ಸದಾಮುಂದೆ. ಸ್ಕೂಲ್‌ನಲ್ಲೂ ಸಹಪಾಠಿಗಳು ಲಂಚ್‌ಬಾಕ್ಸ್ ಮರೆತು ಬಂದರೆ ಈಕೆ ತನ್ನ ಬುತ್ತಿಯೂಟ ನೀಡುತ್ತಾಳೆ. ಅದನ್ನು ಆಕೆಯ ಶಿಕ್ಷಕರು ಗಮನಿಸಿ ಅಮ್ಮನಿಗೆ ತಿಳಿಸಿದ್ದಾರೆ. ಅಮ್ಮನಿಗೂ ತನ್ನ ಮಗಳ ಬಗ್ಗೆ ಹೆಮ್ಮೆ ಇದೆ.
ಆರಾಧನಾ ಭಟ್
ಓದಿ¤ರೋದು: 7ನೇ ಕ್ಲಾಸ್
ಸ್ಕೂಲ್: ಆಳ್ವಾಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಮೂಡಬಿದ್ರೆ
ತಾಯಿ, ತಂದೆ: ಪದ್ಮಶ್ರೀ ಭಟ್, ಎ. ರಾಜಗಿರಿ
ಸಾಧನೆ: ನಿರೂಪಕಿ, ಆಶು ಭಾಷಣಕಾರ್ತಿಯಾಗಿ ಜನಪ್ರಿಯತೆ, ಬಿಗ್ ಎಫ್ಎಂನ ಜ್ಯೂನಿಯರ್ ನಿರೂಪಕಿ, ಆಳ್ವಾಸ್ ವಿರಾಸತ್‌ನಲ್ಲಿ ಎಸ್.ಪಿ ಬಾಲಸುಬ್ರಹ್ಮಣ್ಯಂ ಕಾರ್ಯಕ್ರಮ ನಿರೂಪಿಸಿದ ಅತ್ಯಂತ ಕಿರಿಯ ನಿರೂಪಕಿ, ಆಳ್ವಾಸ್ ವಿದ್ಯಾರ್ಥಿ ಸಿರಿಯ ನಿರೂಪಕಿಯಾಗಿ ಪ್ರಶಂಸೆ ಗಿಟ್ಟಿಸಿದ ಬಾಲೆ, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಪುರಸ್ಕಾರ, ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ 50ಕ್ಕೂ ಹೆಚ್ಚು ಬಹುಮಾನ, ಸ್ಥಳೀಯ ಸ್ಪಂದನ ಟಿವಿಯಲ್ಲಿ ಕಾರ್ಯಕ್ರಮ ನಿರ್ವಹಣೆ, ಕರಾವಳಿ ಕನ್ನಡ ಚಾನೆಲ್‌ನ ಧಾರ್ಮಿಕ ಕಾರ್ಯಕ್ರಮಗಳ ನಿರ್ವಹಣೆ, ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ಮೊದಲ ಸುತ್ತಿಗೆ ಆಯ್ಕೆಗೊಂಡ ಪ್ರತಿಭೆ ಇತ್ಯಾದಿ.
*
– ಪ್ರಿಯಾ ಕೆರ್ವಾಶೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್ ವಿಕ್ರಂ ಗೌಡ ಆಡಿಯೋ!
CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ
Karnataka Govt.: ಅನರ್ಹ “ಬಿಪಿಎಲ್’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.