ಪ್ರಸಕ್ತ ಸಾಲಿನ ಶೈಕ್ಷಣಿಕ ಮಾರ್ಗಸೂಚಿ ಪ್ರಕಟ
Team Udayavani, Jun 6, 2019, 3:00 AM IST
ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಮಾಡಬೇಕಾದ ಕಾರ್ಯಗಳು, ಸರ್ಕಾರಿ ರಜಾ ದಿನಗಳು ಹಾಗೂ ವಿವಿಧ ಜಯಂತಿಯ ಸಂಪೂರ್ಣ ಮಾಹಿತಿ ಒಳಗೊಂಡ ಮಾರ್ಗಸೂಚಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.
ಜೂನ್: ಆಂದೋಲನ, ಬಾಲ ಕಾರ್ಮಿಕ ವಿರೋಧಿ ದಿನಾಚರಣೆ, ಶಾಲಾಮಟ್ಟದ ಕ್ರೀಡಾಕೂಟ, ವಿಶ್ವಯೋಗ ದಿನಾಚರಣೆ, ಶಾಲಾ ಹಂತದಲ್ಲಿ ಪ್ರತಿಭಾಕಾರಂಜಿ, ಶಾಲಾ ಹಂತದ ನಾಟಕ ಹಾಗೂ ವಿಜ್ಞಾನ ವಸ್ತುಪ್ರದರ್ಶನ ನಡೆಸಲು ತಿಳಿಸಿದೆ.
ಜುಲೈ: ಹೋಬಳಿ ಮಟ್ಟದ ಕ್ರೀಡಾಕೂಟ, ಮೊದಲ ಹಂತದ ಋಣಾತ್ಮಕ ಮೌಲ್ಯಮಾಪನ, ತಾಲೂಕು ಮಟ್ಟದ ಕ್ರೀಡಾಕೂಟ, ತಾಲೂಕು ಹಂತದ ವಿಜ್ಞಾನ ನಾಟಕ ಮತ್ತು ವಸ್ತು ಪ್ರದರ್ಶನ.
ಆಗಸ್ಟ್: ತಾಲೂಕು ಮಟ್ಟದ ಪ್ರತಿಭಾ ಕಾರಂಜಿ, ಸ್ವಾತಂತ್ರ್ಯ ದಿನಾಚರಣೆ, ಜಿಲ್ಲಾಮಟ್ಟದ ಕ್ರೀಡಾಕೂಟ, ರಾಷ್ಟ್ರೀಯ ಕ್ರೀಡಾದಿನ.
ಸೆಪ್ಟೆಂಬರ್: ಶಿಕ್ಷಕರ ದಿನಾಚರಣೆ, ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ, ವಿದ್ಯಾರ್ಥಿಗಳ ಸಂಕಲನಾತ್ಮಕ ಮೌಲ್ಯಮಾಪನ.
ಅಕ್ಟೋಬರ್: ಗಾಂಧಿ ಜಯಂತಿ, ಸಮುದಾಯದತ್ತ ಶಾಲೆ, ವಿದ್ಯಾರ್ಥಿಗಳ ಸಂಕಲನಾತ್ಮಕ ಮೌಲ್ಯಮಾಪನ ನಡೆಯಲಿದೆ. ಅಕ್ಟೋಬರ್ 6ರಿಂದ ಆಕ್ಟೋಬರ್ 20ರವರೆಗೆ ಮಧ್ಯಂತರ ರಜೆ.
ನವೆಂಬರ್: ಕನ್ನಡ ರಾಜ್ಯೋತ್ಸವ, ರಾಜ್ಯಮಟ್ಟದ ಕ್ರೀಡಾಕೂಟ, ರಾಷ್ಟ್ರೀಯ ಕ್ರೀಡಾಕೂಟ, ಮಕ್ಕಳ ದಿನಾಚರಣೆ, ಕನಕದಾಸ ಜಯಂತಿ, ರಾಷ್ಟ್ರೀಯ ಭಾವೈಕ್ಯ ಸಪ್ತಾಹ, ಸಂವಿಧಾನ ದಿನಾಚರಣೆ.
ಡಿಸೆಂಬರ್: ವಿಶ್ವ ಏಡ್ಸ್ ದಿನಾಚರಣೆ, ವಿಶ್ವ ವಿಕಲಚೇತನರ ದಿನಾಚರಣೆ, ಮೂರನೇ ರೂಪಣಾತ್ಮಕ ಮೌಲ್ಯಮಾಪನ, ರಾಷ್ಟ್ರೀಯ ಗಣಿತ ದಿನ, ಅಣುಕು ಸಂಸತ್ ಸ್ಪರ್ಧೆ.
2020ರ ಜನವರಿ: ಸಾವಿತ್ರಿಭಾಯಿ ಪುಲೆ ದಿನಾಚರಣೆ, ಸ್ವಾಮಿ ವಿವೇಕಾನಂದ ಜಯಂತಿ, ರಾಷ್ಟ್ರೀಯ ಮತದಾರರ ದಿನಾಚರಣೆ, ಗಣರಾಜ್ಯ ದಿನಾಚರಣೆ, ಹುತಾತ್ಮರ ದಿನಾಚರಣೆ.
ಫೆಬ್ರವರಿ: ನಾಲ್ಕನೇ ರೂಪಣಾತ್ಮಕ ಮೌಲ್ಯಮಾಪನ, ರಾಷ್ಟ್ರೀಯ ವಿಜ್ಞಾನ ದಿನಾಚರಣೆ.
ಮಾರ್ಚ್: ವಿಶ್ವ ಮಹಿಳಾ ದಿನಾಚರಣೆ.
ಏಪ್ರಿಲ್: ಸಮಗ್ರ ಸಂಕಲನಾತ್ಮಕ ಮೌಲ್ಯಮಾಪನ, ವಿಶ್ವ ಆರೋಗ್ಯ ದಿನಾಚರಣೆ, ಎರಡನೇ ಸಮುದಾಯದತ್ತ ಶಾಲೆ, ಅಂಬೇಡ್ಕರ್ ಜಯಂತಿ ಹಾಗೂ ಏ.12ರಿಂದ ಮೇ 24ರವರೆಗೆ ಬೇಸಿಗೆ ರಜೆ.
ಯಾವ ದಿನಾಂಕದಂದು ಯಾವ ಕಾರ್ಯಕ್ರಮ ನಡೆಸಬೇಕು ಎಂಬಿತ್ಯಾದಿ ಎಲ್ಲ ಮಾಹಿತಿ ಇಲಾಖೆಯ ವೆಬ್‌ಸೈಟ್ http:chooleducation.kar.nic.in ನಲ್ಲಿ ಲಭ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Rebels Team: ಜನವರಿಯಲ್ಲಿ ಮತ್ತೆ ರೆಬಲ್ಸ್ ಬಿಜೆಪಿ ವಕ್ಫ್ ಪ್ರವಾಸ
Belagavi Congress Session: ಮಹಾ ಜನಾಂದೋಲನ: ಕಾಂಗ್ರೆಸ್ ಪಣ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
Poster Dispute: ಭಾರತ ಭೂಶಿರ ವಿರೂಪ: ಬಿಜೆಪಿಯ ಇಂದಿನ ಪ್ರತಿಭಟನೆ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.