ಪ್ರತ್ಯೇಕ ಬೋರ್‌ವೆಲ್ ದುರಂತಕ್ಕೆ ಐವರ ಸಾವು
Team Udayavani, Apr 13, 2017, 10:55 AM IST
– ಕೇಸಿಂಗ್ ಬದಲಿಸುವಾಗ ಮಣ್ಣು ಕುಸಿದು 2 ಬಲಿ
– ಕೊಳವೆ ಬಾವಿ ದುರಸ್ತಿ ವೇಳೆ ಮೂವರ ಮೃತ್ಯು
ಗದಗ/ಯಾದಗಿರಿ: ಗದಗದ ರೋಣ ಮತ್ತು ಯಾದಗಿರಿಯ ಶಹಾಪುರ ತಾಲೂಕಿನಲ್ಲಿ ಬುಧವಾರ ಸಂಭವಿಸಿದ ಪ್ರತ್ಯೇಕ ಕೊಳವೆ ಬಾವಿ ದುರಂತದಲ್ಲಿ ಐವರು ಮೃತಪಟ್ಟಿದ್ದಾರೆ. ರೋಣ ತಾಲೂಕಿನ ಸವಡಿ ಗ್ರಾಮದ ಕೊಳವೆಬಾವಿ ಕೇಸಿಂಗ್ ಪೈಪ್ ಬದಲಿಸುವ ವೇಳೆ ಮಣ್ಣು ಕುಸಿದು ಇಬ್ಬರು ಸಾವನ್ನ ಪ್ಪಿ ದ್ದಾರೆ. ಹಾಗೆಯೇ ಶಹಾಪುರದ ಚಾಮನಾಳದಲ್ಲಿ
ಕೊಳವೆ ಬಾವಿ ದುರಸ್ತಿ ವೇಳೆ ವಿದ್ಯುತ್ ತಗುಲಿ ಮೂವರು ಬಲಿಯಾಗಿದ್ದಾರೆ.
ಸವಡಿಯ ಶಂಕ್ರಪ್ಪ ಮಲ್ಲಪ್ಪ ಬಾಣದ ಎಂಬುವರು ತಮ್ಮ ಜಮೀನಿನಲ್ಲಿ ಎರಡು ತಿಂಗಳ ಹಿಂದೆ ಕೊರೆಸಿದ್ದ ಕೊಳವೆ ಬಾವಿಯ ಕೇಸಿಂಗ್ ಬದಲಿಸಿ, ಮೋಟಾರ್ ಅಳವಡಿ ಸುವ ಕೆಲಸ ನಡೆಸುತ್ತಿದ್ದ ವೇಳೆ ಮಣ್ಣು ಕುಸಿದಿದೆ. ಈ ವೇಳೆ
ಶಂಕ್ರಪ್ಪ ಬಾಣದ (35) ಹಾಗೂ ಬಸವರಾಜ ಸಂಗನ ಬಸಪ್ಪ ಪಟ್ಟಣಶೆಟ್ಟಿ (35) ಮೃತಪಟ್ಟಿದ್ದಾರೆ.
ಶಂಕ್ರಪ್ಪ ಅವರ ತಂದೆ ಮಲ್ಲಪ್ಪ ಬಾಣದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸುದ್ದಿ ಕೇಳಿ, ಶಂಕ್ರಪ್ಪ ಅಜ್ಜ ಸಂಗಪ್ಪ ಶಂಕ್ರಪ್ಪ ಬಾಣದ (70) ಹೃದಯಾ ಘಾತದಿಂದ ಮೃತಪಟ್ಟಿದ್ದಾರೆ. ಬರಗಾಲದ ಮಧ್ಯೆಯೂ ಕೊಳವೆ ಬಾವಿಯಲ್ಲಿ ಐದು ಇಂಚು ನೀರು ಬಂದಿತ್ತು. ಮೋಟಾರ್‌ಗೆ ಕಲ್ಲು ಅಡ್ಡಿ ಮಾಡು ತ್ತಿದ್ದ ಕಾರಣ ಜೆಸಿಬಿ ನೆರವಿನಿಂದ ಕೇಸಿಂಗ್ ಪೈಪ್ ಸುತ್ತಲೂ ಸುಮಾರು 15 ಅಡಿ ಗುಂಡಿ ತೆಗೆದು, ಮಂಗಳವಾರ ಪೈಪ್ ಹೊರತೆಗೆದಿ ದ್ದರು. ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಶಂಕ್ರಪ್ಪ ಮತ್ತು ಅದೇ ಗ್ರಾಮದ ಮೋಟಾರ್ ಮೆಕ್ಯಾನಿಕ್ ಬಸವರಾಜ ಅವರೊಂದಿಗೆ ಜಮೀನಿಗೆ ಬಂದಿದ್ದರು. ಮಲ್ಲಪ್ಪ
ಅವರೂ ಆಗಮಿಸಿ, ಪಂಪಿಂಗ್ ಕಾರ್ಯ ವೀಕ್ಷಿಸಲು ಕೊಳವೆ ಬಾವಿಯ ಇಳಿಜಾರು ಪ್ರದೇಶಕ್ಕೆ ಇಳಿದಿದ್ದರು.
ಮೂರೂವರೆ ಗಂಟೆ ಕಾರ್ಯಾಚರಣೆ
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಅಗ್ನಿಶಾಮಕ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮೂರುವರೆ ತಾಸು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಹುಬ್ಬಳ್ಳಿಯಿಂದ ಒಂದು ರಕ್ಷಣಾ ವಾಹನ, 2 ಅಗ್ನಿಶಾಮಕ ವಾಹನ, 3 ಜೆಸಿಬಿ ಹಾಗೂ ಒಂದು ಹಿಟಾಚಿ ಬಳಸಲಾಯಿತು. ಅಧಿಧಿಕಾರಿ ಗಳನ್ನು ಹೊರತುಪಡಿಸಿ, ಸುಮಾರು 30 ಮಂದಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಗೆ ಕೈಜೋಡಿಸಿದರು. 2.10ರ ಸುಮಾರಿಗೆ ಶಂಕ್ರಪ್ಪ ಬಾಣದ ಹಾಗೂ 2.30ರ ಸುಮಾರಿಗೆ ಬಸವರಾಜ್ ಶವ ಹೊರತೆಗೆಯಲಾಯಿತು. ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.
ವಿದ್ಯುತ್ ತಂತಿ ತಗುಲಿ 3 ಸಾವು
ಶಹಾಪುರ: ಜಮೀನೊಂದರಲ್ಲಿದ್ದ ಕೊಳವೆ ಬಾವಿ ದುರಸ್ತಿ ವೇಳೆಯಲ್ಲಿ ವಿದ್ಯುತ್ ತಂತಿ ತಗುಲಿ ಮೂವರು ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಚಾಮನಾಳ ಗ್ರಾಮದಲ್ಲಿ ನಡೆದಿದೆ. ತಾವುತಾಂಡಾ ನಿವಾಸಿ ಡಾಕು ನಾಯಕ (48), ಉಕ್ಕಿನಾಳ ಗ್ರಾಮ ನಿವಾಸಿ ನಾಗಪ್ಪ ತಳವಾರ (50) ಮತ್ತು ಬಿ.ಎನ್. ತಾಂಡಾ ನಿವಾಸಿ
ಶಾಂತಪ್ಪ ರಾಠೊಡ (45) ಮೃತ ದುರ್ದೈವಿಗಳು. ಜಮೀನೊಂದನ್ನು ನಾಗಪ್ಪ ತಳವಾರ ಎಂಬುವರು ಲೀಸ್ ಪಡೆದುಕೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಆ ಜಮೀನಿನಲ್ಲಿನ ಕೊಳವೆ ಬಾವಿ ದುರಸ್ತಿ ಕಾರ್ಯ ನಡೆಸುತ್ತಿದ್ದಾಗ ಈ ದುರ್ಘಟನೆ ಜರುಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
IPL Auction 2025: ಇಂದು, ನಾಳೆ ಐಪಿಎಲ್ ಬೃಹತ್ ಹರಾಜು
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪಲಾಯನ ಮಾಡಲ್ಲ: ನಿಖಿಲ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.