![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Aug 23, 2021, 6:38 AM IST
ಬೆಂಗಳೂರು: ರಾಜ್ಯ ಸರಕಾರ ಹಾಗೂ ಶಿಕ್ಷಣ ಇಲಾಖೆಯು ಪ್ರೌಢಶಾಲೆಯಿಂದ ಪಿಯು ತರಗತಿವರೆಗೂ ಸೋಮವಾರದಿಂದಲೇ ಭೌತಿಕ ತರಗತಿ ಆರಂಭಿಸಲು ತೀರ್ಮಾನಿಸಿದ್ದರೂ, ಕೆಲವು ಖಾಸಗಿ ಶಾಲೆಗಳು ಆನ್‌ಲೈನ್ ತರಗತಿಗಳನ್ನೇ ಮುಂದುವರಿಸಲು ನಿರ್ಧರಿಸಿವೆ.
ಎಲ್ಲರಿಗೂ ಭೌತಿಕ ತರಗತಿ ನಡೆಸಲು ಅನುಮತಿ ಸಿಗುವ ವರೆಗೆ ಆನ್‌ಲೈನ್ ತರಗತಿಗಳನ್ನೇ ಮುಂದುವರಿಸಲು ಕೆಲವು ಖಾಸಗಿ ಶಾಲಾಡಳಿತ ಮಂಡಳಿ ತೀರ್ಮಾನಿಸಿವೆ. ಮತ್ತೆ ಕೆಲವು ಶಾಲೆಗಳು ವಿದ್ಯಾರ್ಥಿಗಳ ಪೋಷಕರ ಆಶಯದಂತೆ ಭೌತಿಕ ತರಗತಿ ಅಥವಾ ಆನ್‌ಲೈನ್ ತರಗತಿ ನಡೆಸಲು ಮುಂದಾಗಿವೆ.
ಸರಕಾರ ಭೌತಿಕ ತರಗತಿಗಳನ್ನು ಕಡ್ಡಾಯ ಮಾಡಿಲ್ಲ. ಆನ್‌ಲೈನ್ ಮತ್ತು ಭೌತಿಕ ತರಗತಿಗಳನ್ನು ಏಕಕಾಲದಲ್ಲಿ ನಡೆಸುವುದು ಕಷ್ಟವಾದ್ದರಿಂದ ಪೋಷಕರ ಆಶಯದಂತೆ ಆನ್‌ಲೈನ್ ಅಥವಾ ಭೌತಿಕ ತರಗತಿ ನಡೆಸಲಿವೆ ಎಂದು ಖಾಸಗಿ ಶಾಲಾಡಳಿತ ಮಂಡಳಿಯ ಸದಸ್ಯರೊಬ್ಬರು ಮಾಹಿತಿ ನೀಡಿದರು.
ಗ್ರಾಮೀಣ ಭಾಗದಲ್ಲಿ ಭೌತಿಕ ತರಗತಿ :
ಸಿಬಿಎಸ್‌ಇ, ಐಸಿಎಸ್‌ಇ ಸಹಿತ ಬಹುತೇಕ ಎಲ್ಲ ಖಾಸಗಿ ಶಾಲಾಡಳಿತ ಮಂಡಳಿಗಳು ಗ್ರಾಮೀಣ ಭಾಗದ ಪ್ರೌಢಶಾಲೆಗೆ ಭೌತಿಕ ತರಗತಿಗಳನ್ನು ಸೋಮವಾರದಿಂದ ನಡೆಸಲಿವೆ. ಆದರೆ, ನಗರದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗೆ ಒಗ್ಗಿಕೊಂಡಿರುವುದರಿಂದ ಆನ್‌ಲೈನ್ ತರಗತಿಯಲ್ಲೇ ಮುಂದು ವರಿಯಲಿದ್ದಾರೆ. ಅನೇಕ ಪೋಷಕರು ಕೂಡ ನಗರ ಪ್ರದೇಶಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ ಎಂದು ಖಾಸಗಿ ಶಾಲಾಡಳಿತ ಮಂಡಳಿ ಸದಸ್ಯರೋರ್ವರು ತಿಳಿಸಿದರು.
ಏಕಕಾಲದಲ್ಲಿ ಆನ್‌ಲೈನ್ ಮತ್ತು ಭೌತಿಕ ತರಗತಿಗಳನ್ನು ನಡೆಸುವುದು ಕಷ್ಟ. ಹೀಗಾಗಿ ಶಾಲೆಗಳೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿವೆ. ಸಂಘಟನೆಯಿಂದ ಯಾವುದೇ ಸೂಚನೆ ನೀಡಿಲ್ಲ ಎಂದು ಸಿಬಿಎಸ್‌ಇ ಶಾಲಾಡಳಿತ ಮಂಡಳಿಗಳ ಸಂಘದ ರಾಜ್ಯಾಧ್ಯಕ್ಷ ಎಂ. ಶ್ರೀನಿವಾಸನ್ ಹೇಳಿದ್ದಾರೆ.
ಸಂವೇದ ತರಗತಿ ಯಥಾಸ್ಥಿತಿ :
ಬೆಂಗಳೂರು: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭವಾಗಿದ್ದರೂ, ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂವೇದ ತರಗತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಸ್ಪಷ್ಟಪಡಿಸಿದೆ.
ಭೌತಿಕ ತರಗತಿಗಳಿಗಾಗಿ ಪ್ರತ್ಯೇಕ ಗುಂಪುಗಳನ್ನು ಶಾಲಾ ಹಂತದಲ್ಲಿ ರಚನೆ ಮಾಡಲಾಗಿದೆ. ಸೋಮವಾರ, ಮಂಗಳವಾರ ಹಾಗೂ ಬುಧವಾರ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಗುರುವಾರ, ಶುಕ್ರವಾರ ಹಾಗೂ ಶನಿವಾರ ಆನ್‌ಲೈನ್ ತರಗತಿ ಇರುತ್ತದೆ. ಹಾಗೆಯೇ ಸೋಮವಾರದಿಂದ ಬುಧವಾರ ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳುವವರಿಗೆ ಗುರುವಾರದಿಂದ ಶನಿವಾರದ ವರೆಗೆ ಭೌತಿಕ ತರಗತಿ ಇರುತ್ತದೆ. ಆನ್‌ಲೈನ್ ತರಗತಿಯವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸಂವೇದ ತರಗತಿ ಮುಂದುವರಿ ಯಲಿದೆ. ವೇಳಾಪಟ್ಟಿಯಲ್ಲೂ ಬದಲಾವಣೆ ಇಲ್ಲ. ಸಂವೇದ ತರಗತಿಗಳ ಪಾಠವನ್ನು ಯೂ-ಟ್ಯೂಬ್ ಚಾನೆಲ್‌ಗಳಲ್ಲೂ ಅಪ್‌ಲೋಡ್ ಮಾಡಲಿದ್ದೇವೆ ಎಂದು ಡಿಇಎಸ್‌ಇಆರ್‌ಟಿ ನಿರ್ದೇಶಕ ಎಂ. ಆರ್. ಮಾರುತಿ ತಿಳಿಸಿದರು.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.