ಮೌಡ್ಯ ಕರಡು ನನಗೇ ಸಮಾಧಾನ ತಂದಿಲ್ಲ
Team Udayavani, Oct 5, 2017, 9:55 AM IST
ಬೆಂಗಳೂರು: ಮೌಡ್ಯ ನಿಷೇಧ ಕಾಯ್ದೆ ಕರಡು ನನಗೆ ಸಂಪೂರ್ಣವಾಗಿ ಸಮಾಧಾನ ತಂದಿಲ್ಲ ಎಂದು ಕರಡು ಸಮಿತಿ ಅಧ್ಯಕ್ಷರೂ ಆದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಅನಿಷ್ಟ ಪದ್ಧತಿ ಹೋಗಲಾಡಿಸುವ ನಿಟ್ಟಿನಲ್ಲಿ ನಾವಂದು ಕೊಂಡಂತೆ ಕರಡು ರೂಪಿಸಲು ಆಗಲಿಲ್ಲ. ಆದರೂ ಸಮಗ್ರವಾಗಿ ಚರ್ಚಿಸಿ ರೂಪಿಸಿದ್ದೇವೆ ಎಂದರು.
ಒಮ್ಮಿಂದಲೇ ಎಲ್ಲವನ್ನೂ ನಿವಾರಿಸಲು ಕಷ್ಟ. ಸಮಾಜದಲ್ಲಿ ಸಂಘರ್ಷ ಅನಿವಾರ್ಯ. ಇದು ಮೊದಲ ಹಂತ, ಮುಂದೆ ಮತ್ತಷ್ಟು ಸರಿಹೋಗ ಬಹುದು ಎಂದರು. ಆಚರಣೆಗಳು, ಸಂಪ್ರದಾಯಗಳನ್ನು ಸುಲಭವಾಗಿ ಜನರ ಮನಸ್ಸಿನಿಂದ ತೆಗೆಯಲು ಆಗದು. ಇದಕ್ಕೆ ಕಾಲಾವಕಾಶ ಬೇಕು, ನಿರಂತರ ಜಾಗೃತಿ ಮೂಡಿಸಬೇಕಾಗುತ್ತದೆ ಎಂದರು. ಸಂಘರ್ಷವಿಲ್ಲದೆ ಈ ಸಮಾಜದಲ್ಲಿ ಏನೂ ಬದಲಾವಣೆ ಸಾಧ್ಯವಿಲ್ಲ. ಲಾಭ ಪಡೆಯುವ ಮನಃ ಸ್ಥಿತಿಗಳು ಬದಲಾವಣೆಗೆ ಒಪ್ಪುವುದಿಲ್ಲ. ಲಾಭ ಪಡೆಯದೇ ಇರುವವರು ಬದಲಾವಣೆಗೆ
ಆಗ್ರಹಿಸುತ್ತಾರೆ. ಇದು ಸಹಜ ಕ್ರಮ ಎಂದು ಸೂಕ್ಷ್ಮವಾಗಿ ನುಡಿದರು.
ಲಾಭ ಪಡೆಯುವವರು ಆ ಪಕ್ಷ ಈ ಪಕ್ಷ ಅಂತಿಲ್ಲ. ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಇತಿಹಾಸದುದ್ದಕ್ಕೂ ಇಂತಹ ಮನಃಸ್ಥಿತಿಗಳನ್ನು ಕಾಣಬಹುದು. ಒಂದು ಸಮುದಾಯದವರು ಮಾಂಸ ತಿನ್ನುತ್ತಾರೆ ಎಂದು ನಾನು ನೀಡಿದ ಹೇಳಿಕೆಗೆ ವಿಪರೀತ ಅರ್ಥ ಕಲ್ಪಿಸಲಾಗಿದೆ. ಆದರೆ ಬದಲಾವಣೆ ಜಗದ ನಿಯಮ.ಬದಲಾವಣೆಯೇ ಬೇಡ ಎಂದರೆ ಆ ಪ್ರಕ್ರಿಯೆ ನಿಲ್ಲುವುದಿಲ್ಲ. ಬದಲಾವಣೆ ಕಷ್ಟವಾದರೂ ಒಂದಲ್ಲ ಒಂದು ದಿನ ಆಗಲೇಬೇಕು. ಆದರೆ ಕಾಲಕ್ಕೆ ತಕ್ಕಂತೆ ಆಗಲಿ ಎಂದು ನಾವು ಬಯಸಬೇಕು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.