ದೇಶದ ಆರ್ಥಿಕ ಪರಿಸ್ಥಿತಿ ಸ್ಥಿರವಾಗಿದೆ ; ಎರಡು ಲಕ್ಷ ಕೋಟಿ ತೆರಿಗೆ ಸಂಗ್ರಹ: ಸೀತಾರಾಮನ್


Team Udayavani, Apr 26, 2023, 3:48 PM IST

ದೇಶದ ಆರ್ಥಿಕ ಪರಿಸ್ಥಿತಿ ಸ್ಥಿರವಾಗಿದೆ ; ಎರಡು ಲಕ್ಷ ಕೋಟಿ ತೆರಿಗೆ ಸಂಗ್ರಹ: ಸೀತಾರಾಮನ್

ಕಲಬುರಗಿ: ದೇಶದ ಆರ್ಥಿಕ ಸ್ಥಿತಿ ಸ್ಥಿರವಾಗಿದೆ ಮತ್ತು ಉತ್ತಮವಾಗಿದೆ ಎಂದ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದಲ್ಲಿ ಪ್ರಸ್ತುತ ಎರಡು ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ ಎಂದರು.

ವಿರೋಧ ಪಕ್ಷಗಳು ಹಾಗೂ ಅದರಲ್ಲೂ ಬಹಳ ಪ್ರಮುಖವಾಗಿ ಕಾಂಗ್ರೆಸ್ ಆರೋಪ ಮಾಡುತ್ತಿರುವಂತೆ ದೇಶದ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿಲ್ಲ ಎಂದು ಸ್ಪಷ್ಟಪಡಿಸಿದರು. ನಗರದ ಕೆಕೆಸಿಸಿಐ ಸಭಾಂಗಣದಲ್ಲಿ ಗುರುವಾರ ಬಿಜೆಪಿ ಚುನಾವಣಾ ಪ್ರಚಾರ ಅರ್ಥವಾಗಿ ಹಮ್ಮಿಕೊಂಡಿದ್ದ ಉದ್ಯಮಿಗಳು ಹಾಗೂ ಹೂಡಿಕೆದಾರರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು, ಮಾತನಾಡಿದರು.

ಈಗಾಗಲೇ ಎರಡು ಲಕ್ಷ ಕೋಟಿ ತೆರಿಗೆ ಹಣ ಸಂಗ್ರಹವಾಗಿದೆ. ಸಂಗ್ರಹವಾಗಿರುವ ಹಣವನ್ನು ಅಗತ್ಯ ಇರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ದೇಶದ ಜನರಿಗೆ ಒದಗಿಸಿ ಕೊಡುವ ನಿಟ್ಟಿನಲ್ಲಿ ದಯ ಮಾಡಲಾಗುತ್ತಿದೆ. ಇದರಿಂದ ಜಿಡಿಪಿ ಕೂಡ ಮೇಲ್ಮುಖವಾಗಿದೆ ಎಂದರು.

ಇದನ್ನೂ ಓದಿ: 40% Commission; ಲಕ್ಷ್ಮಣ ಸವದಿ ಆರೋಪಕ್ಕೆ ಸಿಎಂ ಬೊಮ್ಮಾಯಿ ತಿರುಗೇಟು

ಡಿಜಿಟಲೀಕರಣದ ಮೂಖ್ಯೇನ ಜನರ ದುಡಿಮೆ ಮುಖೇನ ತೆರಿಗೆ ರೂಪದಲ್ಲಿ ಸಂಗ್ರಹವಾಗುತ್ತಿರುವ ಪ್ರತಿಯೊಂದು ಪೈಸೆಯನ್ನು ಕೂಡ ನರೇಂದ್ರ ಮೋದಿಯವರು ಅತ್ಯಂತ ಯೋಚನಾತ್ಮಕವಾಗಿ ಮತ್ತು ಯೋಜನಾತ್ಮಕವಾಗಿ ವ್ಯಯಿಸುತ್ತಿದ್ದಾರೆ ಎಂದರು.

ಪ್ರತಿಯೊಂದು ಪೈಸೆಯೂ ಸೋರದಂತೆ ನೇರವಾಗಿ ಫಲಾನುಭಗಳ ಖಾತೆಗೆ ಸೇರಲಿ ಎಂದು ಜನಧನ್ ಖಾತೆಗಳನ್ನು ತೆರೆಯಲಾಗಿದೆ. ಅದಲ್ಲದೆ ನಾನಾ ಯೋಜನೆಗಳ ಅಡಿ ಡಿಜಿಟಲ್‌ ಮಾಡಿ ಹಣ ವ್ಯಯವಾಗದಂತೆ ಜನರಿಗೆ ಮುಟ್ಟಿಸುವ ಎಲ್ಲ ಪ್ರಯತ್ನಗಳನ್ನ ನರೇಂದ್ರ ಮೋದಿ ಸರ್ಕಾರ ಮಾಡುತ್ತಿದೆ ಎಂದರು.

ಇದು ಕೂಡ ಭಾರತದ ವಿಕಾಸವಲ್ಲವೇ ಎಂದು ಪ್ರಶ್ನಿಸಿದರು.

ಸ್ಟಾರ್ಟಪ್ ಗಳಿಂದ ನಿರುದ್ಯೋಗ ನಿವಾರಣೆ ಸಾಧ್ಯ  ನಿರ್ಮಲ ಸೀತಾರಾಮನ್:

ಕಲಬುರಗಿ: ಕೇವಲ ಬೊಗಳೆ ಮಾತು ಮತ್ತು ಆರೋಪಗಳಿಂದ ದೇಶದ ಆಂತರಿಕ ಸಮಸ್ಯೆಗಳನ್ನು ಪರಿಹಾರ ಮಾಡಲು ಸಾಧ್ಯವಿಲ್ಲ ಎಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ಸ್ಟಾರ್ಟ್ ಅಪ್ಗಳಿಂದ ನಿರುದ್ಯೋಗ ಸಮಸ್ಯೆಗೆ ಉತ್ತರ ಕಂಡುಕೊಳ್ಳಬಹುದಾಗಿದೆ ಎಂದರು.

ಚುನಾವಣೆ ಪ್ರಚಾರಾರ್ಥ ಕಲ್ಬುರ್ಗಿಗೆ ಗುರುವಾರ ಭೇಟಿ ನೀಡಿದ್ದ ಅವರು ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮಿ ಸಂಸ್ಥೆ ಹಮ್ಮಿಕೊಂಡಿದ್ದ ಉದ್ಯಮಿ ಮತ್ತು ಹೂಡಿಕೆದಾರರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡಲಾಗಿಲ್ಲ ಎಂದು ಕೇವಲ ಆರೋಪ ಮಾಡುವುದರಿಂದ ಭಾಷಣ ಮಾಡುವುದರಿಂದ ಏನೂ ಸಾಧ್ಯವಾಗುವುದಿಲ್ಲ ಕಳೆದ ದಶಕಗಳಲ್ಲಿ ಕಾಂಗ್ರೆಸ್ ಮಾಡದೆ ಇರುವ ಕಾರ್ಯವನ್ನ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಮಾಡಲಾಗುತ್ತಿದೆ ದೇಶದಲ್ಲಿ ಕೌಶಲ್ಯ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನಗಳನ್ನು ಮಾಡಿದ ಬಳಿಕವೇ ಹೊಸ ಉದ್ಯೋಗಗಳಿಗೆ ನೇಮಕಾತಿ ಸಾಧ್ಯವಾಗಲಿದೆ. ಇಲ್ಲದೆ ಹೋದರೆ, ಅರ್ಹತೆ ಇದ್ದರೂ ಕೌಶಲ್ಯವಿಲ್ಲದೆ ಇರುವುದರಿಂದ ಹುದ್ದೆಗಳ ಭರ್ತಿಯ ನಂತರ ಉಂಟಾಗಬಹುದಾದ ಇಲಾಖಾವಾರು ತಾಂತ್ರಿಕ ಸಮಸ್ಯೆಗಳ ನಿವಾರಣೆಗೆ ಕೇಂದ್ರ ಸರ್ಕಾರ ಬಹುಪಾಲು ಅನುದಾನವನ್ನು ಖರ್ಚು ಮಾಡುತ್ತಿದೆ ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

ಹೊಸ ಸ್ಟಾರ್ಟ್ ಅಪ್ ಗಳಿಂದ ಯುವ ಉದ್ಯಮಿಗಳು ಉದ್ಯೋಗದಾತರು ಆಗುತ್ತಿಲ್ಲವೇ?. ಅದಲ್ಲದೆ, ಇತರರಿಗೂ ಕೂಡ ಉದ್ಯೋಗ ನೀಡುವಷ್ಟು ಅವರು ಸಬಲರಾಗುತ್ತಿದ್ದಾರೆ. ಇದು ನಿರುದ್ಯೋಗ ನಿವಾರಣೆ ಅಲ್ಲವೇ ಎಂದು ಪ್ರಶ್ನಿಸಿದರು.

ದೇಶದಲ್ಲಿ ಕೋವಿಡ್ ಆಟೋಪತ್ ತಡೆಯಲು ನಮ್ಮ ದೇಶದಲ್ಲಿ ಲಸಿಕೆಗಳನ್ನು ನಾವು ನಿರ್ಮಾಣ ಮಾಡುವಷ್ಟು ಶಕ್ತತೆಯನ್ನು ಸಾಧಿಸಿದೆವು ಇದು ಜಗತ್ತಿನಲ್ಲಿ ಭಾರತ ಆರ್ಥಿಕವಾಗಿ ಮತ್ತು ಔದ್ಯೋಗಿಕವಾಗಿ ಬೆಳೆಯುತ್ತಿದೆ ಎನ್ನಲು ಸಾಕ್ಷಿಯಾಗಿದೆ ಎಂದ ಅವರು ನಾವು ವ್ಯಾಕ್ಸಿನ್ ಗಳನ್ನು ನಿರ್ಮಾಣ ಮಾಡದೆ ಹೋಗಿದ್ದರೆ ಸಾವು ನೋವು ಇನ್ನಷ್ಟು ಹೆಚ್ಚಾಗುತ್ತಿದ್ದು ಜಗತ್ತಿನ ಮುಂದೆ ನಾವು ಕೈ ಚಾಚುವ ಬದಲಿ ಜಗತ್ತಿನ ಹಲವು ರಾಷ್ಟ್ರಗಳಿಗೆ ನಾವೇ ವ್ಯಾಕ್ಸಿನ್ ರವಾನೆ ಮಾಡಿರುವುದು ನಮ್ಮ ದೇಶದಲ್ಲಿರುವ ಭಾಜಪ ಸರ್ಕಾರದ ಆಡಳಿತ ಕರ್ತೃತ್ವ ಶಕ್ತಿಯನ್ನು ತೋರಿಸುತ್ತದೆ ಎಂದರು.

ಈ ಹಿಂದಿನ ಸರ್ಕಾರಗಳಲ್ಲಿ ಯಾವುದೇ ಯೋಜನೆಯ ಫಲಾನುಭವಿಗೆ ಪರಿಹಾರದ ಹಣ ತಲುಪಿಸಲು ಬಹಳ ದೊಡ್ಡ ಸರ್ಕಸ್ ನಡೆಯುತ್ತಿತ್ತು. ಆದರೆ ಮೋದಿ ಅವರು ನಾಯಕತ್ವ ವಹಿಸಿಒಂಡ  ಬಳಿಕ ಡಿಜಿಟಲೀಕರಣದಿಂದಾಗಿ, ಆಧುನಿಕ ತಂತ್ರಜ್ಞಾನ ಬಳಕೆಯಿಂದಾಗಿ ಇವತ್ತು ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ಹಣ ಹಾಕುವಂತಹ ವ್ಯವಸ್ಥೆ ಜಾರಿಗೆ ತರಲಾಗಿದೆ. ಇಲ್ಲದೆ ಹೋಗಿದ್ದರೆ ಪ್ರತಿಯೊಬ್ಬ ಫಲಾನುಭವಿಗಳಿಗೆ ರೈತರಿಗೆ ಕೃಷಿ ಸಮ್ಮಾನ ಯೋಜನೆಯಡಿ ಚೆಕ್ಕುಗಳನ್ನು ಬರೆದು ಕಳಿಸಿದ್ದರೆ, ಅವು ಮುಟ್ಟುವುದು ಮತ್ತು ಅವುಗಳು ಅಕೌಂಟಿಗೆ ಜಮೆ ಆಗುವುದು ಕನಸಿನ ಮಾತೇ ಆಗಿತ್ತು ಎಂದರು.

ಗರೀಬಿ ಹಠಾವೋ ಯೋಜನೆ ಅಡಿ ಪಕ್ಕ ಮನೆಗಳನ್ನು ಕೊಡುತ್ತಿರುವುದು ಕೂಡ ಮಾನವೀಯ ಸೂಚ್ಯಂಕ ವಿಕಾಸವಾಗಿದೆ. ಆದರೆ, ಇದನ್ನು ಪರಿಗಣಿಸಲು ವಿರೋಧ ಪಕ್ಷಗಳಿಗೆ ಪುರುಸೊತ್ತಿಲ್ಲ ಎಂದ ಅವರು, ಕಾಂಗ್ರೆಸ್ ದೇಶದಲ್ಲಿ ಚುನಾವಣೆ ಸಂಬಂಧ ನೀಡುತ್ತಿರುವ ಭರವಸೆಗಳನ್ನು ಈಗಾಗಲೇ ಯಾವುದೇ ಸಂದರ್ಭದಲ್ಲಿ ಈಡೇರಿಸಲು ಸಾಧ್ಯವಾಗಿಲ್ಲ. ಮಧ್ಯಪ್ರದೇಶದಲ್ಲಿ, ಛತ್ತೀಸ್ಗಡದಲ್ಲಿ ರಾಜಸ್ಥಾನದಲ್ಲಿ ನೀಡಿರುವ ಭರವಸೆಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದ ಅವರು, ಕರ್ನಾಟಕದಲ್ಲಿ ಫ್ರೀ ವಿದ್ಯುತ್, ಸಾವಿರ ರೂಪಾಯಿ ಸಹಾಯಧನ ಸೇರಿದಂತೆ ಇತರೆ ಯೋಜನೆಗಳನ್ನು ಜಾರಿಗೆ ತರಬೇಕಾದರೆ, ಬಜೆಟ್ ನ ಒಂದು ಮೂರ್ ಅಂಶ ಹಣ ವ್ಯಯವಾಗುತ್ತದೆ. ಉಳಿದ ಹಣದಲ್ಲಿ ಕರ್ನಾಟಕವನ್ನು ಹೇಗೆ ಅಭಿವೃದ್ಧಿ ಪಡಿಸುತ್ತೀರಿ ಎಂದು ಪ್ರಶ್ನಿಸಿದರು.

ದೇಶದಲ್ಲಿ ಫೈಜಿ ತಂತ್ರಜ್ಞಾನದಿಂದ ಸಂಪರ್ಕ ಕ್ರಾಂತಿ ಉಂಟಾಗಿದೆ ಎಂದ ಅವರು, ಸಣ್ಣ ಸಣ್ಣ ಪಟ್ಟಣಗಳ ಮಧ್ಯದಲ್ಲೂ ಕೂಡ ಈಗ ನೇರವಾಗಿ ಮತ್ತು ಬೇಗನೆ ಸಂಪರ್ಕ ಸಾಧಿಸಬಹುದಾಗಿದೆ. ಇದರಿಂದ ಸಾಕಷ್ಟು ಕೆಲಸಗಳು ಆಗುತ್ತಿವೆ. ಇದು ಕೂಡ ತಂತ್ರಜ್ಞಾನದ ಬಳಕೆಯಲ್ಲವೇ ಎಂದು ಪ್ರಶ್ನಿಸಿದ ಅವರು, ಶಿಕ್ಷಣ, ಆರೋಗ್ಯ, ಔದ್ಯೋಗಿಕರಣ ಮತ್ತು ಸಾಗರ್ ಮಾಲ ಯೋಜನೆ ಅಡಿ ಹಲವಾರು ಪ್ರಯೋಜನಗಳನ್ನ ಮೋದಿ ನಾಯಕತ್ವದ ಸರ್ಕಾರ ಮಾಡುತ್ತಿದೆ. ಆದ್ದರಿಂದ ಒಂದು ಸ್ಥಿರ ಸರ್ಕಾರದಿಂದ ಮಾತ್ರವೇ ಕೇಂದ್ರ ಹಾಗೂ ರಾಜ್ಯದಲ್ಲಿ ಅಭಿವೃದ್ಧಿ ಸಾಧ್ಯವಾಗಲಿದೆ. ಕರ್ನಾಟಕದಲ್ಲಿ ಬಿಜೆಪಿಯನ್ನು ನಿರಂತರವಾಗಿ ಗೆಲ್ಲಿಸುವ ಮೂಲಕ ಪ್ರಗತಿಪರ ರಾಜ್ಯವಾಗಿ ಭಾರತದಲ್ಲಿ ಕರ್ನಾಟಕ ಕಂಗೊಳಿಸಲಿ ಎಂದು ಆಶಿಸಿದರು.

ಈ ವೇಳೆಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಸಿದ್ದಾಜಿ ಪಾಟೀಲ್, ವಾಣಿಜ್ಯೋದ್ಯಮಿ ಸಂಘದ ಅಧ್ಯಕ್ಷ ಶಶಿಕಾಂತ್ ಪಾಟೀಲ್ ,ಕಾರ್ಯದರ್ಶಿ, ಉಪಾಧ್ಯಕ್ಷರು ಹಾಗೂ ಹಲವಾರು ಹೂಡಿಕೆದಾರರು, ಉದ್ಯಮಿಗಳು ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಇದ್ದರು.

ಟಾಪ್ ನ್ಯೂಸ್

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ

5

Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

siddaramaiah

MUDA case; ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಕರೆದ ಲೋಕಾಯುಕ್ತ ಪೊಲೀಸರು

Ashok-Sha

Waqf Notice: ʼವಕ್ಫ್ ಬೋರ್ಡ್‌ಗೆ ಆಸ್ತಿ ನೋಂದಣಿ ತಕ್ಷಣ ಸ್ಥಗಿತಗೊಳಿಸಲು ಸಿಎಸ್‌ಗೆ ಸೂಚಿಸಿʼ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

9

Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

death

Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.