ಕಣ್ಣಿಲ್ಲದೇ ಕಂಗೆಟ್ಟ ಕುಟುಂಬಕ್ಕೆ ಬೇಕಿದೆ ಬೆಳಕು
Team Udayavani, Dec 14, 2019, 3:06 AM IST
ರಾಯಚೂರು: ಮನೆಯಲ್ಲಿ ಒಬ್ಬರು ಅಂಗ ನ್ಯೂನತೆಯಿಂದ ಬಳಲಿದರೆ ನೋಡಲಾಗದು. ಅಂಥದ್ದರಲ್ಲಿ ಕುಟುಂಬದಲ್ಲಿ ಮೂರು ಜನ ದೃಷ್ಟಿ ಸಮಸ್ಯೆಯಿಂದ ಹಾಗೂ ಒಬ್ಬರು ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ! ಸಿಂಧನೂರು ತಾಲೂಕಿನ ಹೆಡಗಿನಾಳ ಗ್ರಾಮದಲ್ಲಿ ಇಂಥದ್ದೊಂದು ಕುಟುಂಬ ಸಂಕಷ್ಟದಲ್ಲಿ ಕಾಲ ದೂಡುತ್ತಿದೆ. ಬಸಮ್ಮ ಎಂಬಾಕೆ ಹೆರಿಗೆ ವೇಳೆ ದೃಷ್ಟಿ ಕಳೆದುಕೊಂಡಿದ್ದು, ಮಕ್ಕಳಿಗೂ ಆ ಕಾಯಿಲೆ ಬಂದಿದೆ.
ಗಂಡ ಪಾರ್ಶ್ವವಾಯುನಿಂದ ಬಳಲುತ್ತಿದ್ದು, ದುಡಿಯಲು ಶಕ್ತರಾಗಿಲ್ಲ. ಕಣ್ಣು ಕಳೆದುಕೊಂಡ ತಾಯಿಗೂ ಯಾವುದೇ ಕೆಲಸವಿಲ್ಲ. ಈಗ ಇಬ್ಬರು ಮಕ್ಕಳು ಕೂಡ ಅನುವಂಶಿಕ ಕಾಯಿಲೆಗೆ ತುತ್ತಾಗಿದ್ದಾರೆ. ಮಗಳು ಜ್ಯೋತಿಗೆ ಕಣ್ಣು ಕಾಣದಂತಾಗಿದ್ದು, ಮಗ ನವೀನಕುಮಾರ ದೃಷ್ಟಿಯಲ್ಲಿ ದೋಷ ಕಂಡುಬಂದಿದ್ದು, ಶೇ.40ರಷ್ಟು ದೃಷ್ಟಿ ಹೀನತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಅದರ ಜತೆಗೆ ಮತ್ತೂಬ್ಬ ಮಗನಿಗೂ ಈಗಾಗಲೇ ದೃಷ್ಟಿ ಮಂದವಾಗುತ್ತಿದ್ದು, ಈ ಕಾಯಿಲೆಗೆ ತುತ್ತಾಗುವ ಆತಂಕ ಎದುರಾಗಿದೆ.
ಮಗಳು ಜನಿಸಿದಾಗ ತಾಯಿ ಬಸಮ್ಮಗೆ ಸಮಸ್ಯೆಯಾಗಿ ಎರಡು ಕಣ್ಣುಗಳನ್ನು ತೆಗೆಯಲಾಗಿದೆ. ಇದರಿಂದ ಕುಟುಂಬ ನಿರ್ವಹಣೆ ಹೊಣೆ ಮಗಳು ಜ್ಯೋತಿ ಹೆಗಲೇರಿದ್ದು, ವ್ಯಾಸಂಗ ತೊರೆದು ತಂದೆ-ತಾಯಿ ನೋಡಿಕೊಳ್ಳುವುದೇ ಕೆಲಸವಾಗಿತ್ತು. ಆದರೆ, ಆಕೆಗೂ ದೃಷ್ಟಿ ದೋಷ ಆವರಿಸಿ, ಈಗ ಕಣ್ಣು ಕಾಣುತ್ತಿಲ್ಲ. ಮಗ ನವೀನ್‌ಕುಮಾರನಲ್ಲಿ ದೃಷ್ಟಿ ದೋಷ ಕಂಡು ಬಂದಿದ್ದು, ಶಾಲೆಯಲ್ಲಿ ಶಿಕ್ಷಕರು ಗುರುತಿಸಿ ವೈದ್ಯರಿಗೆ ತೋರಿಸಿದಾಗ; ಚಿಕಿತ್ಸೆ ಕೊಡಿಸದಿದ್ದರೆ ಈ ಬಾಲಕನ ದೃಷ್ಟಿಯೂ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಕೊನೆಯ ಮಗ ಪೇತರಪ್ಪಗೂ ಈ ಕಾಯಿಲೆ ಬರಬಹುದು ಎಂದೂ ಎಚ್ಚರಿಸಿದ್ದಾರೆ. ಪಾಲಿಕೋನಿಯಾ ಸಮಸ್ಯೆ: ಇದು ನರದೌರ್ಬಲ್ಯದಿಂದಲೂ ಬರುವ ಸಮಸ್ಯೆಯಾಗಿದ್ದು, ಪಾಲಿಕೋನಿಯಾ ಎಂಬ ಕಾಯಿಲೆ ಇರಬೇಕು ಎಂದು ವೈದ್ಯರು ಅಂದಾಜಿಸಿದ್ದಾರೆ. ನರಗಳು ದುರ್ಬಲಗೊಂಡಾಗ ಅದರ ಪರಿಣಾಮ ದೃಷ್ಟಿ ಮೇಲಾಗುವ ಸಾಧ್ಯತೆ ಇರುತ್ತದೆ. ಇದರ ಮುನ್ಸೂಚನೆ ಬರುತ್ತಿದ್ದಂತೆ ಚಿಕಿತ್ಸೆ ಕೊಡಿಸಬೇಕು.
ಆರಂಭದಲ್ಲಿ ಚಿಕಿತ್ಸೆ ನೀಡಿದಲ್ಲಿ ಕಾಯಿಲೆಯಿಂದ ಗುಣಮುಖರಾಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯರು. ಕಡು ಬಡತನದಲ್ಲಿ ದಿನ ದೂಡುತ್ತಿರುವ ಈ ಕುಟುಂಬಕ್ಕೆ ಚಿಕಿತ್ಸೆ ಕೊಡಿಸುವಷ್ಟು ಶಕ್ತಿಯಿಲ್ಲ. ಮಾಸಾಶನ ಬರುತ್ತಿದೆಯಾದರೂ ಇಡೀ ಕುಟುಂಬದ ನಿರ್ವಹಣೆ ಕಷ್ಟವಾಗಿದೆ. ದಾನಿಗಳು ನೆರವಿಗೆ ಬಂದು ಈ ಸಮಸ್ಯೆ ನಿವಾರಿಸಿದಲ್ಲಿ ಕುಟುಂಬ ಬಹುದೊಡ್ಡ ಸಮಸ್ಯೆಯಿಂದ ಪಾರಾದಂತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.