ಮಸ್ಕಿ: ಪ್ರಥಮ ಸಾಹಿತ್ಯ ಸಮ್ಮೇಳನ ಸಡಗರ
Team Udayavani, Feb 14, 2021, 12:31 PM IST
ಮಸ್ಕಿ (ರಾಯಚೂರು): ನೂತನ ಮಸ್ಕಿ ತಾಲ್ಲೂಕಿನಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಭಾನುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು.
ಗಚ್ಚಿನಮಠದಲ್ಲಿ ತಹಶೀಲ್ದಾರ ಬಲರಾಮ ಕಟ್ಟಿಮನಿ ಮೆರವಣಿಗೆಗೆ ಚಾಲನೆ ನೀಡಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ , ಕಾಡಾದ ಮಾಜಿ ಅದ್ಯಕ್ಷ ಆರ್. ಬಸನಗೌಡ ಸಮ್ಮೇಳನಾಧ್ಯಕ್ಷ ಶರಭಯ್ಯ ಸ್ವಾಮಿ ಗಣಚಾರಿ ಅವರಿಗೆ ಮಾಲಾರ್ಪಣೆ ಮಾಡಿ ರಥದಲ್ಲಿ ಕಳಿಸಿದರು.
ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ಆಮಿದಿಹಾಳ ಲಂಕೆಪ್ಪ ಮತ್ತು ತಂಡದ ಕಣಿ ಹಲಿಗೆ, ಆಮರೇಶ ಹಸಮಕಲ್ ತಂಡದ ಹಗಲು ವೇಷಗಾರರ ತಂಡ ಸೇರಿದಂತೆ ವಿವಿಧ ಕಲಾ ತಂಡಗಳು ಗಮನ ಸೆಳೆದವು.
ಇದನ್ನೂ ಓದಿ:ಫ್ರಂ ಪುಲ್ವಾಮ, ವಿಷಾದನೀಯ ನೆನಪುಗಳು..!
ಮಹಿಳೆಯರು ಪೂರ್ಣಕುಂಭ ಹಾಗೂ ಕಳಸದೊಂದಿಗೆ ಮೆರವಣಿಗೆಯಲ್ಲಿ ಭಾಗವವಹಿಸಿದ್ದರು. ವಿವಿಧ ಮಕ್ಕಳ ವೇಷಭೂಷಣ ಗಮನ ಸೆಳೆದವು.
ಕಸಾಪ ತಾಲ್ಲೂಕು ಘಟಕದ ಅದ್ಯಕ್ಷ. ಘನಮಠದಯ್ಯ ಸಾಲಿಮಠ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಕಾಡಾ ಮಾಜಿ ಅಧ್ಯಕ್ಷ ಆರ್. ಬಸನಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವಣ್ಣ ನಾಯಕ, ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ. ಪಾಟೀಲ್, ಉಪಾಧ್ಯಕ್ಷೆ ಕವಿತಾ ಎಂ ಮಾಟೂರ,ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ಮಿ, ಬಸನಗೌಡ ಪೊಲೀಸ್ ಪಾಟೀಲ್, ಮಹಾಂತೇಶ ಮಸ್ಮಿ ಸೇರಿದಂತೆ ಮುಖಂಡರು ಮತ್ತು ನೂರಾರು ಸಾಹಿತಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.