ನಾಲ್ವರು ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಬಿಸಿ
Team Udayavani, Mar 10, 2017, 10:32 AM IST
ಬೆಂಗಳೂರು: ರಾಜ್ಯದ ನಾಲ್ವರು ಭ್ರಷ್ಟ ಅಧಿಕಾರಿಗಳ ನಿವಾಸ, ಕಚೇರಿ ಹಾಗೂ ಅವರ ಸಂಬಂಧಿಕರ ನಿವಾಸಗಳ ಮೇಲೆ ಗುರುವಾರ ಏಕಕಾಲದಲ್ಲಿ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಕೋಟ್ಯಂತರ ರೂ. ಮೌಲ್ಯದ ಬೇನಾಮಿ ಆಸ್ತಿಗೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಸಣ್ಣನೀರಾವರಿ ಇಲಾಖೆಯ ಶಿರಾ ಉಪವಿಭಾಗದಲ್ಲಿ ಸಹಾಯಕ ಎಂಜಿನಿಯರ್ ಶ್ರೀ ಹರಿ, ಮುಳಬಾಗಿಲಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ, ರಾಮನಗರ ಜಿಲ್ಲೆ ಮಾಯಗಾನಹಳ್ಳಿ ಗ್ರಾಪಂ ಪಿಡಿಓ ಸ್ವಾಮಿ , ಉಡುಪಿಯ ಮೂಕಾಂಬಿಕ ಅರಣ್ಯ ಪ್ರದೇಶದ ವಲಯ ಅರಣ್ಯಾಧಿಕಾರಿ ಶಿವರಾಮ ಆಚಾರಿ ಅವರ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ನಾಲ್ವರು ಅಧಿಕಾರಿಗಳ ಕೋಟ್ಯಂತರ
ರೂ. ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.
1.ಶ್ರೀ ಹರಿ
ಸಣ್ಣನೀರಾವರಿ ಇಲಾಖೆಯ ಶಿರಾ ಉಪವಿಭಾಗದಲ್ಲಿ ಎಇ, ಪಾವಗಡ ಪತ್ನಿ, ಮಾವನ ಹೆಸರಿನಲ್ಲಿ ಪಾವಗಡ ತಾಲೂಕಿನಲ್ಲಿ 50 ಲಕ್ಷ. ರೂ ಮೌಲ್ಯದ 87 ಎಕರೆ ಕೃಷಿ ಭೂಮಿ ಪಾವಗಡದಲ್ಲಿ ಪತ್ನಿ ಹೆಸರಿನಲ್ಲಿ ಮನೆ, ತಾಯಿ ಹೆಸರಿನಲ್ಲಿ ಎರಡಂತಸ್ತಿನ ಮನೆ ವೆ.ಎನ್ ಹೊಸಕೋಟೆ ಸಹರಾ ಇಂಡಿಯಾ ಕಂಪೆನಿ ಬ್ರಾಂಚ್‌ನಲ್ಲಿ 11 ಲಕ್ಷ ರೂ.
ಶೇರ್ ಹಾಗೂ ಬಾಂಡ್
2.ಶಿವರಾಮ ಆಚಾರಿ
ಉಡುಪಿಯ ಮೂಕಾಂಬಿಕ ಅರಣ್ಯ ಪ್ರದೇಶದ ವಲಯ ಅರಣ್ಯಾಧಿಕಾರಿ ಕೊಲ್ಲೂರಿನ ವಸತಿ ಮನೆಯಲ್ಲಿ 3.7 ಲಕ್ಷ
ರೂ ನಗದು ಹಾಗೂ ವಿಮಾಪಾಲಿಸಿ ಜಪ್ತಿ ಕಂಬದ ಕೋಣೆಯಲ್ಲಿ 60 ಲಕ್ಷ ರೂ ಮೌಲ್ಯದ ಮನೆ, ಕಾರಿನಲ್ಲಿದ್ದ ಲಕ್ಷ ನಗದು ವಶ ಕುಂದಾಪುರದಲ್ಲಿ 2 ಕಮರ್ಷಿಯಲ್ ಕಾಂಪ್ಲೆಕ್ಸ್ ಪತ್ನಿ ಶೋಭಾ ಹೆಸರಿನಲ್ಲಿ 2 ಲಕ್ಷ ರೂ ಮೌಲ್ಯದ ನಿವೇಶನ ಕರಿಮಂಜೇಶ್ವರದ ಅತ್ತೆಯ ಮನೆಯಲ್ಲಿ 3 ಲಕ್ಷ ರೂ.
3. ಸಾಮಿ Ì ,
ರಾಮನಗರ ಜಿಲ್ಲೆ ಮಾಯಗಾನಹಳ್ಳಿ ಗ್ರಾಪಂ ಪಿಡಿಓ ಪತ್ನಿ ರೇಖಾ ಹೆಸರಿನಲ್ಲಿ ಚನ್ನಪಟ್ಟಣದಲ್ಲಿ 37 ಲಕ್ಷ ರೂ ಮೌಲ್ಯದ
ಎರಡಂತಸ್ತಿನ 3 ಮನೆಗಳು ಮದ್ದೂರಿನಲ್ಲಿ ಎರಡೂವರೆ ಎಕರೆ ಕೃಷಿ ಭೂಮಿ ಖರೀದಿ 5 ಲಕ್ಷ ರೂ ಮೌಲ್ಯದ 200
ಗ್ರಾಂ ಚಿನ್ನಾಭರಣ, ಒಂದೂವರೆ ಕೆಜಿ ಬೆಳ್ಳಿ ಆಭರಣ
4. ಮಂಜುನಾಥ,
ಸಹಾಯಕ ಕಾರ್ಯ ಪಾಲಕ ಎಂಜಿನಿಯರ್, ಮುಳಬಾಗಿಲು ಕೋಲಾರದ ಗಾಂಧಿನಗರದಲ್ಲಿ 2 ಕೋಟಿ ರು. ಮೌಲ್ಯದ
ಡ್ಯುಪ್ಲೆಕ್ಸ್ ಮನೆ ಸಾರಿಗೆ ನಗರದಲ್ಲಿ 30 ಲಕ್ಷ ರೂ ಮೌಲ್ಯದ ಮನೆ, ಇಟ್ಟಿಗೆ ಪ್ಯಾಕ್ಟರಿ ಕೋಲಾರದಲ್ಲಿ 54 ಲಕ್ಷ ರೂ.
ಬೆಲೆಬಾಳುವ 3 ಎಕರೆ ಕೃಷಿ ಜಮೀನು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.