ಅರಸು ನಂತರ ಪೂರ್ಣಾವಧಿ ಸಿಎಂ ನಾನೇ
Team Udayavani, Feb 24, 2018, 8:15 AM IST
ವಿಧಾನಸಭೆ: ರಾಜ್ಯದಲ್ಲಿ ದೇವರಾಜ ಅರಸು ಅವರ ನಂತರ ಐದು ವರ್ಷ ಭರ್ತಿ ಮುಖ್ಯಮಂತ್ರಿಯಾಗಿ ಅವಧಿ ಪೂರೈಸುತ್ತಿರುವುದು ನಾನೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿ ರಾಜ್ಯದ ಜನತೆಯ ಆಶೀರ್ವಾದದಿಂದ ಐದು ವರ್ಷ ಅಧಿಕಾರ ನಡೆಸುವ ಅವಕಾಶ ನನಗೆ ದೊರೆತಿದೆ. ಇದು ನನಗೆ ಹೆಮ್ಮೆಯೂ ಸಹ ಎಂದು
ಹೇಳಿದರು. ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ಅವರ ನಂತರ ಹಣಕಾಸು ಸಚಿವನಾಗಿ 13ನೇ ಬಜೆಟ್ ಮಂಡಿಸಿರುವುದು ನಾನೇ. ಮುಖ್ಯಮಂತ್ರಿಯಾಗಿ ಆರನೇ ಬಜೆಟ್ ಮಂಡಿಸಿದ್ದೇನೆ. ರಾಜ್ಯದ ಸಮಗ್ರ ಅಭಿವೃದಿಟಛಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಈ ಬಗ್ಗೆ ಬಹಿರಂಗ ಚರ್ಚೆಗೂ ನಾನು ಸಿದ್ಧ ಎಂದು ಪುನರುಚ್ಚರಿಸಿದರು.
ವಿದಾಯ: ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ಪ್ರಾರಂಭದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಕೊನೆಯ ಅಧಿವೇಶನವಾದ್ದರಿಂದ ಎಲ್ಲರಿಗೂ ವಿದಾಯ ಹೇಳಿದರು. ಐದು ವರ್ಷ ಸುಗಮವಾಗಿ ಸರ್ಕಾರ ನಡೆಸಲು ಸಹಕರಿಸಿದ ಎಲ್ಲ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸದನ ಸುಸೂತ್ರವಾಗಿ ನಡೆಸಿದ ಸ್ಪೀಕರ್- ಉಪಾಧ್ಯಕ್ಷರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ವೇಗಕ್ಕೆ ತಕ್ಕಂತೆ ಕೆಲಸ ಮಾಡಿದ ಅಧಿಕಾರಿ ವರ್ಗಕ್ಕೂ ಅಭಿನಂದಿಸುತ್ತೇನೆಂದು
ಹೇಳಿದರು. ಇಲ್ಲಿರುವ ಎಲ್ಲ ಸದಸ್ಯರೂ ಟಿಕೆಟ್ ಸಿಕ್ಕರೆ ಗೆದ್ದು ಬನ್ನಿ ಎಂದು ಹಾರೈಸುತ್ತೇನೆ. ಎಷ್ಟು ಜನಕ್ಕೆ ಟಿಕೆಟ್ ಸಿಗುತ್ತೋ
ಇಲ್ಲವೋ ಗೊತ್ತಿಲ್ಲ ಆದರೆ, ಟಿಕೆಟ್ ಸಿಕ್ಕವರು ಗೆದ್ದು ಬನ್ನಿ ಎಂದಾಗ ಸದನದಲ್ಲಿ ನಗೆ ಅಲೆ. ಆಗ, ಜೆಡಿಎಸ್‌ನ ಕೋನರೆಡ್ಡಿ ಏನನ್ನೋ ಹೇಳಲು ಎದ್ದುನಿಂತಾಗ, ನೀನು ಕೂತ್ಕೊಳಪ್ಪಾ, ನಿನಗೆ ಟಿಕೆಟ್ ಘೋಷಣೆ ಆಗೋಗಿದೆ ಎಂದು ಸುಮ್ಮನಾಗಿಸಿದರು.
ವರ್ಷದಲ್ಲಿ 60 ದಿನ ಅಧಿವೇಶನ ನಡೆಸಬೇಕೆಂದು ನಾವೇ ಕಾನೂನು ಮಾಡಿಕೊಂಡಿದ್ದೇವೆ. ಆದರೆ, ಅದು ಸಾಧ್ಯವಾಗಲಿಲ್ಲ. ಆದರೆ, 13 ನೇ ವಿಧಾನಸಭೆಯು 201 ದಿನ ಅಧಿವೇಶನ ನಡೆಸಿತ್ತು. 14 ನೇ ವಿಧಾನಸಭೆಯಲ್ಲಿ 241 ದಿನ ಅಧಿವೇಶನ ನಡೆಸಿದೆ. ಈ ವಿಚಾರದಲ್ಲಿ ಸ್ವಲ್ಪ ಸಮಾಧಾನ ಎಂದರು. ಇತ್ತೀಚಿನ ದಿನಗಳಲ್ಲಿ ಕಲಾಪಕ್ಕೆ ಸದಸ್ಯರ ಗೈರು ಹಾಜರಿ ಹೆಚ್ಚಾಗುತ್ತಿದ್ದು ಸಾರ್ವಜನಿಕ ವಲಯದಲ್ಲೂ ಈ ಬಗ್ಗೆ ಚರ್ಚೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ಕಲಾಪದಲ್ಲೂ ಗುಣಮಟ್ಟ ಕುಸಿಯುತ್ತಿದೆ ಎಂಬ ಮಾತಿದೆ. ಗುಣಮಟ್ಟ ಉತ್ತಮಗೊಳಿಸುವತ್ತ ನಮ್ಮ ಪ್ರಯತ್ನ ಇರಬೇಕು, ಕುಸಿಯಲು ಬಿಡಬಾರದು. ಇದು ಎಲ್ಲರ ಹೊಣೆಗಾರಿಕೆ. ದೇಶದಲ್ಲೇ ಕರ್ನಾಟಕ ಸಂಸದೀಯ ವ್ಯವಸ್ಥೆ ಮಾದರಿಯಾಗಿದೆ. ಇದನ್ನು ಮತ್ತಷ್ಟು ಎತ್ತರಕ್ಕೆ ಏರಿಸುವ ಕೆಲಸ ನಾವು ಮಾಡಬೇಕು ಎಂದು ತಿಳಿಸಿದರು. ಪರಿಷತ್‌ನಲ್ಲೂ ಮಧ್ಯಾಹ್ನದ ನಂತರ ಧನವಿನಿಯೋಗ ವಿಧೇಯಕದ ಮೇಲಿನ ಚರ್ಚೆಗೆ ಉತ್ತರಿಸುತ್ತ ಐದು ವರ್ಷ ಮುಖ್ಯಮಂತ್ರಿ ಆಗಿ ಕೆಲಸ ಮಾಡಲು ಸಹಕರಿಸಿದ ಸಭಾಪತಿ, ಉಪಸಭಾಪತಿ, ಸದಸ್ಯರು ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್.ಯಡಿಯೂರಪ್ಪ
Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್ ಬೆಳ್ಳುಳ್ಳಿ ವಶಕ್ಕೆ
Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.