![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Oct 18, 2021, 8:44 PM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಕೋವಿಡ್ ಸೋಂಕು ಹೊಸ ಪ್ರಕರಣಗಳು 100ಕ್ಕಿಂತ ಕಡಿಮೆ ವರದಿಯಾಗಿವೆ. ಅಲ್ಲದೆ, 18 ತಿಂಗಳ ಅನಂತರ ಇದೇ ಮೊದಲ ಬಾರಿ ಹೊಸ ಪ್ರಕರಣಗಳು 200 ಆಸುಪಾಸಿಗೆ ಇಳಿಕೆಯಾಗಿವೆ.
ಸೋಮವಾರ 214 ಮಂದಿಗೆ ಸೋಂಕು ದೃಢಪಟ್ಟಿದ್ದು, 12 ಮಂದಿ ಮೃತಪಟ್ಟಿದ್ದಾರೆ. 488 ಮಂದಿ ಗುಣಮುಖರಾಗಿದ್ದಾರೆ. ಪಾಸಿಟಿವಿಟಿ ದರ ಶೇ. 0.3ರಷ್ಟಿದೆ.
ಎಲ್ಲಿ ಎಷ್ಟು ಮಂದಿಗೆ ಸೋಂಕು:
ಅತಿ ಹೆಚ್ಚು ಬೆಂಗಳೂರು 83 ಪ್ರಕರಣ ವರದಿಯಾಗಿದೆ. ದಕ್ಷಿಣ ಕನ್ನಡ 22, ಮೈಸೂರು 27, ತುಮಕೂರು 14, ಶಿವಮೊಗ್ಗ ಮತ್ತು ಹಾಸನ ತಲಾ 13 ಮಂದಿಗೆ ಸೋಂಕು ತಗುಲಿದ್ದು, ಉಳಿದಂತೆ 13 ಜಿಲ್ಲೆಗಳಲ್ಲಿ ಬೆರಳೆಣಿಕೆ, 12 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ದಾಖಲಾಗಿದೆ. ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಇನ್ನು 12 ಸಾವಿನ ಪೈಕಿ ಬೆಂಗಳೂರು ನಗರದಲ್ಲಿ 4, ಮೈಸೂರು 2, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಮಂಡ್ಯ, ತುಮಕೂರು ಹಾಗೂ ಉಡುಪಿಯಲ್ಲಿ ತಲಾ ಒಂದು ಸಾವು ವರದಿಯಾಗಿದೆ.
ಇದನ್ನೂ ಓದಿ:ಮುಂಬರುವ ದಿನಗಳಲ್ಲಿ ಕರ್ನಾಟಕ ಎಲ್ಲಾ ಕ್ಷೇತ್ರದಲ್ಲೂ ಅಗ್ರಸ್ಥಾನ ಪಡೆಯಲಿದೆ :ಅಶ್ವತ್ಥನಾರಾಯಣ
ಕೋವಿಡ್ ಮೂರನೇ ಅಲೆ ಆತಂಕ ದೂರ ಎನ್ನುತ್ತಿವೆ ಈ ಅಂಶಗಳು:
*ಸಾವಿರಕ್ಕೆ ನಾಲ್ಕು ಮಂದಿಗೆ ಮಾತ್ರ ಸೋಂಕು:
ಅಕ್ಟೋಬರ್‌ನಲ್ಲಿ ಮೂರನೇ ಅಲೆ ಎಂದು ತಜ್ಞರು ಅಂದಾಜಿಸಿದ್ದರು. ಆದರೆ, ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಸರಾಸರಿ ಶೇ.0.4 ರಷ್ಟಿದೆ. ಅಂದರೆ, ಸೋಂಕು ಪರೀಕ್ಷೆಗೊಳಪಡುವ ಪ್ರತಿ ಒಂದು ಸಾವಿರ ಮಂದಿಯಲ್ಲಿ ನಾಲ್ಕು ಮಂದಿಯಲ್ಲಿ ಮಾತ್ರ ಕೊರೊನಾ ಪತ್ತೆಯಾಗುತ್ತಿದೆ.
*ನಾಲ್ಕು ತಿಂಗಳಾದರೂ ಡೆಲ್ಟಾ ಪ್ಲಸ್ ನಾಲ್ಕೇ/ಹೆಚ್ಚಲಿಲ್ಲ:
ಮೂರನೇ ಅಲೆಗೆ ಡೆಲ್ಟಾ ಪ್ಲಸ್ ರೂಪಾಂತರಿ ಕಾರಣವಾಗುತ್ತದೆ ಎಂದು ವಂಶವಾಹಿ ತಜ್ಞರು ತಿಳಿಸಿದ್ದರು. ಆದರೆ, ಡೆಲ್ಟಾ ಪ್ಲಸ್ ಮೊದಲ ಪ್ರಕರಣಗಳ ವರದಿಯಾಗಿ ನಾಲ್ಕು ತಿಂಗಳಾದರೂ ಇವರೆಗೂ ಒಟ್ಟಾರೆ ಪ್ರಕರಣಗಳು ನಾಲ್ಕು ಮಾತ್ರ.
*ಕೇರಳ ಕಾಡಲಿಲ್ಲ:
ನೆರೆಯ ಕೇರಳದಲ್ಲಿ ವೈರಾಣು ಆರ್ಭಟಿಸಿದರೂ, ರಾಜ್ಯದಲ್ಲಿ ಅಕ್ಟೋಬರ್‌ನಿಂದೀಚೆಗೆ ಸರಾಸರಿ 420 ಪ್ರಕರಣಗಳು ಪತ್ತೆಯಾಗಿದ್ದು, ದಿನದಿಂದ ದಿನಕ್ಕೆ ಸೋಂಕು ಹೊಸ ಪ್ರಕರಣಗಳು ಇಳಿಕೆಯಾಗಿ 200 ಆಸುಪಾಸಿಗೆ ಬಂದಿದೆ.
*ಸರ್ಕಾರವೂ ವಿನಾಯ್ತಿ:
ತಜ್ಞರು ವಿದೇಶದಿಂದ ಬರುವ ಪ್ರಯಾಣಿಕರ ತಪಾಸಣೆ ವಿನಾಯ್ತಿ ನೀಡಿದ್ದು, 1-5 ನೇ ತರಗತಿ ಮಕ್ಕಳ ಶಾಲೆ ಆರಂಭಕ್ಕೆ ಸೂಚನೆ ನೀಡಿದ್ದಾರೆ.
*ಲಸಿಕೆ ಶಕ್ತಿ:
ರಾಜ್ಯದಲ್ಲಿ ಲಸಿಕೆ ಅಭಿಯಾನ ಯಶಸ್ವಿಯಾಗಿ ಸಾಗಿದ್ದು, ಶೇ.85 ರಷ್ಟು ಮಂದಿ ಮೊದಲ ಡೋಸ್, ಶೇ.43 ರಷ್ಟು ಮಂದಿ ಎರಡನೂ ಡೋಸ್ ಪೂರ್ಣಗೊಳಿಸಿದ್ದಾರೆ. ಲಸಿಕೆಯ ಪ್ರತಿಕಾಯ ಅಂಶ ಸೋಂಕನ್ನು ಹತ್ತಿಕ್ಕಲು ಸಹಕಾರಿಯಾಗಿವೆ.
You seem to have an Ad Blocker on.
To continue reading, please turn it off or whitelist Udayavani.