ಅನುಭವ ಮಂಟಪಕ್ಕೆ ಅನ್ವರ್ಥವಾದ ಮಹಾಸಂಗಮ
Team Udayavani, Feb 17, 2020, 3:03 AM IST
ಬೆಂಗಳೂರು: ಮೂರು ನದಿಗಳು ಬಂದು ಸೇರಿದ ಕೂಡಲಸಂಗಮದಂತೆ ನಾನಾ ದಿಕ್ಕುಗಳಿಂದ ಹರಿದು ಬಂದ ಶರಣರ ಮಹಾಸಂಗಮ ಅದು. ಕಣ್ಣು ಹಾಯಿಸಿದಷ್ಟೂ ದೂರದವರೆಗೆ ಶಿವನ ಧ್ಯಾನದಲ್ಲಿ ಕುಳಿತ ಭಕ್ತ ಸಮೂಹ, ಹಣೆ ಮೇಲೆ ವಿಭೂತಿ, ಕೈಯಲ್ಲಿ ಶಿವಲಿಂಗ, ಬಾಯಲ್ಲಿ ಮಂತ್ರಪಠಣ. ಈ ಮಧ್ಯೆ ಆಗಾಗ್ಗೆ ಅನುರಣಿಸುವ ವಚನಗಳ ಸಾಲು….
ಇದೆಲ್ಲವನ್ನೂ ಒಳಗೊಂಡ ಆ ಅಸಂಖ್ಯ ಪ್ರಮಥರ ಗಣಮೇಳ, ಅನುಭವ ಮಂಟಪಕ್ಕೆ ಅನ್ವರ್ಥ ದಂತಿತ್ತು. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು ನೈಸ್ ರಸ್ತೆಯ “ನಂದಿ’ ಮೈದಾನ. ತಮಿಳುನಾಡು, ಆಂಧ್ರಪ್ರದೇಶ ಸೇರಿ ರಾಜ್ಯದ ವಿವಿಧ ಭಾಗಗಳಿಂದ ಶರಣರ ಸಾಗರವೇ ಮೇಳಕ್ಕೆ ಹರಿದು ಬಂದಿತ್ತು. ಬೆಳಿಗ್ಗೆಯೇ ರೈಲು, ಬಸ್‌ಗಳಲ್ಲಿ ಬಂದಿಳಿದ ಭಕ್ತರು ಸಹಜ ಶಿವಯೋಗಕ್ಕೆ ಅಣಿಯಾಗುತ್ತಿದ್ದರು. ಹೆಸರೇ ಸೂಚಿಸುವಂತೆ ಅದು “ಶಿವಯೋಗ ಸಂಭ್ರಮ’ವಾಗಿತ್ತು.
ಮೈದಾನದಲ್ಲಿ ಬೃಹತ್ ವೇದಿಕೆಗಳನ್ನು ಹಾಕಲಾಗಿತ್ತು. ಅದರ ಮುಂಭಾಗ ಅನುಭವಮಂಟಪವನ್ನು ಹೋಲುತ್ತಿತ್ತು. ಒಂದೆಡೆ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಮತ್ತೂಂದೆಡೆ ಮುರುಘಾ ಶರಣರ ಭಾವಚಿತ್ರಗಳನ್ನು ಹಾಕಲಾಗಿತ್ತು. ಅದು ಬಂದವರಲ್ಲಿ ಭಕ್ತಿಯನ್ನು ಇಮ್ಮಡಿಗೊಳಿಸುತ್ತಿತ್ತು.
ಭಕ್ತರು, ಶರಣರು ಕೈಮುಗಿದು ಒಳಗೆ ಪ್ರವೇಶಿಸುತ್ತಿದ್ದರು. ಮಂಟಪದೊಳಗೆ ಇಡೀ ದಿನ ವಚನಗಳ ಗಾಯನ-ನೃತ್ಯ, ವಚನ ಚಳವಳಿಯ ಮೆಲುಕು, ಕಲ್ಯಾಣ ಕ್ರಾಂತಿಯ ಪ್ರಸ್ತುತತೆ, ಇದೆಲ್ಲವೂ ಮುಗಿದು ಹರಟುವಾಗಲೂ ಭಜನೆಯಲ್ಲಿ ಶರಣರ ಸಾಲುಗಳು ಅನುರಣಿಸುತ್ತಿದ್ದವು. ಒಟ್ಟಾರೆ 12ನೇ ಶತಮಾನದ ಗತವೈಭವವನ್ನು ಕಟ್ಟಿಕೊಡುವಂತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.