ಕದಿಯಲು ಬಂದವನ ರುಂಡ ಕಡಿದರು
Team Udayavani, Sep 23, 2019, 3:00 AM IST
ಹರಿಹರ: ಕುರಿಗಾಯಿಯೊಬ್ಬ ಕುರಿ ಕದಿಯಲು ಬಂದವನ ರುಂಡ ಕತ್ತರಿಸಿದ ಘಟನೆ ತಾಲೂಕಿನ ಜಿಟಿ ಕಟ್ಟೆ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಶನಿವಾರ ರಾತ್ರಿ ನಡೆದಿದೆ. ಮಲೇಬೆನ್ನೂರು ಮೂಲದ ಚಮನ್ ಸಾಬ್ (45) ಕೊಲೆಗೀಡಾದ ವ್ಯಕ್ತಿ. ಬೆಳಗಾವಿ ತಾ.ಚಿಕ್ಕೋಡಿ ಗ್ರಾಮದ ಆರೋಪಿ, ಕುರಿಗಾಯಿ ಅರ್ಜುನಪ್ಪ ಭಾನುವಾರ ತಾನೇ ಠಾಣೆಗೆ ಶರಣಾಗಿದ್ದಾನೆ.
ಹಲವು ದಿನಗಳಿಂದ ಜಿಟಿ ಕಟ್ಟೆ ಗ್ರಾಮದ ಗೌಡ್ರ ಶೇಖರಪ್ಪನವರ ಜಮೀನಿನಲ್ಲಿ ಕುರಿಗಳನ್ನು ಬಿಡಲಾಗಿತ್ತು. ಶನಿವಾರ ರಾತ್ರಿ 1 ಗಂಟೆ ಸುಮಾರಿಗೆ ಚಮನ್ ಸಾಬ್ ಮತ್ತಿತರ ನಾಲ್ವರು ಕುರಿ ಕಳ್ಳತನ ಮಾಡಲು ಬಂದಿದ್ದರು. ಅವರನ್ನು ಬೆನ್ನಟ್ಟಿದಾಗ ಉಳಿದವರು ಪರಾರಿಯಾಗಿದ್ದು, ಚಮನ್ ಸಾಬ್ ಸಿಕ್ಕಿಬಿದ್ದ.
ರೊಚ್ಚಿಗೆದ್ದು ಕೊಡಲಿಯಿಂದ ಆತನ ತಲೆ ಕತ್ತರಿಸಿ ಕೊಲೆ ಮಾಡಿರುವುದಾಗಿ ಆರೋಪಿ ಅರ್ಜುನಪ್ಪ ಪೊಲೀಸರಿಗೆ ತಿಳಿಸಿದ್ದಾನೆ. ಮೃತ ಚಮನ್ ಸಾಬ್ ಮತ್ತಿತರ ಗುಂಪಿನ ಮೇಲೆ ಜಿಲ್ಲೆಯ ಹಲವೆಡೆ ಕುರಿ ಕಳ್ಳತನದ ಆರೋಪಗಳಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಮಲೇಬೆನ್ನೂರು ಗ್ರಾಮಾಂತರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.