ನಾನು ಬಿಟ್ಟು ಬಂದ ಮೇಲೆ ಜೆಡಿಎಸ್ ಶಾಸಕರ ಸಂಖ್ಯೆ ಏರಲೇ ಇಲ್ಲ: ಹೆಚ್ ಡಿಕೆಗೆ ಸಿದ್ದು ಟಾಂಗ್
Team Udayavani, Dec 6, 2020, 5:05 PM IST
ಬೆಂಗಳೂರು: ಕುಮಾರಸ್ವಾಮಿಗೆ ಇಮೇಜ್ ಇದ್ದಿದ್ದರೆ ನಾನು ಪಕ್ಷ ಬಿಟ್ಟು ಬಂದ ಮೇಲೆ ಅವರ ಪಕ್ಷದ ಶಾಸಕರ ಸಂಖ್ಯೆ 59 ರಿಂದ 28ಕ್ಕೆ ಹೇಗೆ ಬಂತು ? ಆ ಮೇಲೆ ಇವರ ಪಕ್ಷದ ಶಾಸಕರ ಸಂಖ್ಯೆಯೂ ಏರಲೇ ಇಲ್ಲವಲ್ಲ. ಗುಡ್ ವಿಲ್ ಇದ್ದರೆ ತಾನೆ ಅವರಿಗೆ ಜನಪ್ರಿಯತೆ ಇರುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ನಾಳೆಯಿಂದ ಸದನ ಪ್ರಾರಂಭವಾಗುವುದರಿಂದ ಪಕ್ಷದ ಹಿರಿಯ ನಾಯಕರ ಸಭೆ ಕರೆದಿದ್ದೇನೆ. ಗೋಹತ್ಯೆ ನಿಷೇಧ, ಲವ್ ಜಿಹಾದ್ ಬಗ್ಗೆ ಕಾನೂನು ತರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಇವುಗಳ ಬಗೆ ನಮ್ಮ ನಿಲುವು ಏನಿರಬೇಕು ಎನ್ನುವುದನ್ನು ಚರ್ಚಿಸಿದ್ದೇವೆ.
ಲವ್ ಜಿಹಾದ್, ಗೊಹತ್ಯೆ ನಿಷೇಧ ನೀತಿ ಸಂಹಿತೆ ಇರುವುದರಿಂದ ಹೊಸ ಕಾಯ್ದೆ ಜಾರಿ ಮಾಡಿದರೆ ಮತದಾರರ ಮೇಲೆ ಪ್ರಭಾವ ಬೀರಲಿದೆ. ಹೀಗಾಗಿ ಈಗ ಕಾಯ್ದೆ ಜಾರಿಗೆ ತರಬಾರದು. ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ವೈಟ್ ಪೇಪರ್ ಹೊರಡಿಸುವಂತೆ ಸದನದಲ್ಲಿ ಆಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ಬಿಜೆಪಿಯವರು ಹೊಸ ಸಮಸ್ಯೆಗಳನ್ನು ಹುಟ್ಟು ಹಾಕಿದ್ದಾರೆ. ಈ ಬಾರಿ ಮೂರು ಬಾರಿ ಪ್ರವಾಹ ಬಂದಿದೆ. ಇದುವರೆಗೂ ಪರಿಹಾರ ನೀಡಿಲ್ಲ. ಕಳೆದ ವರ್ಷದ ಪರಹಾರವನ್ನೂ ಪೂರ್ಣವಾಗಿ ನೀಡಿಲ್ಲ. ಅನೇಕ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡಿಲ್ಲ. ವಿದ್ಯುತ್ ಬೆಲೆ ಹೆಚ್ಚಳ ಮಾಡಿದ್ದಾರೆ. ಅಗತ್ಯ ಇಲ್ಲದಿದ್ದರೂ ವಿದ್ಯುತ್ ಖರಿದಿ ಮಾಡುತ್ತಿದ್ದಾರೆ. ಫಲಾನುಭವಿಗಳಿಗೆ ಮನೆಗಳನ್ನು ನೀಡಿಲ್ಲ.
ಇದನ್ನೂ ಓದಿ: ಸಿದ್ದರಾಮಯ್ಯ ಹೇಳಿಕೆಗಳಲ್ಲಿ ಗಂಭೀರತೆಯೇ ಇರಲ್ಲ: ರವಿ
ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ ತರಲು ಮುಂದಾಗಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡುತ್ತೇವೆ. ಸರ್ಕಾರ ಮಿತವ್ಯಯ್ಯದ ಬದಲು ದುಂಧು ವೆಚ್ಚಕ್ಕೆ ಮುಂದಾಗಿದೆ. ಸಾಲ ಹೆಚ್ಚು ಮಾಡಿಕೊಂಡಿದ್ದಾರೆ. ಸಂಬಳ ಕೊಡಲು ದುಡ್ಡಿಲ್ಲ. ಸಾಲದ ಬಡ್ಡಿ ಕಟ್ಟಲು ಹಣ ಇಲ್ಲ ಇವರ ಬಳಿ. ನಾಳೆ ಮಧ್ಯಾಹ್ನ ಬಿಎಸಿ ಸಭೆ ಕರೆಯಲಿದ್ದಾರೆ. ಅಲ್ಲಿ ಸರ್ಕಾರದ ನಿರ್ಧಾರ ಏನಿದೆ ಎನ್ನುವುದು ತಿಳಿಸಬೇಕು ಎಂದು ಆಗ್ರಹಿಸಿದರು.
ಸದನದಲ್ಲಿ ಏಳು ದಿನಗಳಲ್ಲಿ ಎಲ್ಲ ವಿಷಯಗಳನ್ನು ಚರ್ಚೆ ಮಾಡಲು ಆಗುವುದಿಲ್ಲ. ಲವ್ ಜಿಹಾದ್ ಹಾಗೂ ಗೋಹತ್ಯೆ ಕಾಯಿದೆ ಬಿಲ್ ತರುವ ಮೊದಲೇ ವಿರೋಧಿಸುತ್ತೇವೆ. ಅಸೆಂಬ್ಲಿ ನಡೆಸಬೇಕಾ ಬೇಡವೆ ಎನ್ನುವ ಪ್ರಶ್ನೆಯೂ ಎದ್ದಿದೆ. ಪಂಚಾಯತಿ ಚುನಾವಣೆ ಇರುವುದರಿಂದ ಬಹಳ ಜನ ಶಾಸಕರು ಗೈರಾಗುವ ಸಾಧ್ಯತೆ ಇದೆ.
ಪರಿಷತ್ ಸಭಾಪತಿ ಪದಚ್ಯುತಿಗೆ ಜೆಡಿಎಸ್ ನಡೆ ಏನು ಎನ್ನುವುದು ಗೊತ್ತಾಗಬೇಕು. ದೇವೇಗೌಡರು ಜಾತ್ಯತೀತರು ಅಂತ ಹೇಳಿಕೊಳ್ಳುತ್ತಾರೆ. ಆದರೇ ಅದು ಗೊತ್ತಾಗಬೇಕಲ್ಲಾ?
ಇದನ್ನೂ ಓದಿ: ಕಾಂಗ್ರೆಸ್ ನಲ್ಲಿ ಈಗಿರುವುದು ಬಣವಲ್ಲ, ಒಂದೇ ಬಣ್ಣ: ಹರ್ಷ ಮೊಯ್ಲಿ
ಕುಮಾರಸ್ವಾಮಿಗೆ ವ್ಯೆಯಕ್ತಿಕವಾಗಿ ಕಾಂಗ್ರೆಸ್ ಬಗ್ಗೆ ದ್ವೇಷ ಇದೆ. ಇವರು ಬಿಜೆಪಿ ಜೊತೆ ಹೋಗಿದ್ದರೆ ಸಿಎಂ ಆಗಿರುತ್ತಿದ್ದೆ ಎಂದು ಹೇಳಿದರೆ, ಇವರನ್ನು ಬಿ ಟೀಂ ಎಂದು ಕರೆಯದೆ ಮತ್ತೇನು ಹೇಳಬೇಕು. ಜೆಡಿಎಸ್ ಜೊತೆ ಸರ್ಕಾರ ಮಾಡುವ ವಿಷಯದಲ್ಲಿ, ಮೊದಲ ಮಾತುಕತೆಯಲ್ಲಿ ನಾನು ಭಾಗಿಯೇ ಆಗಿರಲಿಲ್ಲ. ನಮ್ಮ ಹೈ ಕಮಾಂಡ್ ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಜೆಡಿಎಸ್ ಗೆ ಬೆಂಬಲ ಸೂಚಿಸಿದ್ದರು. ಎಂದು ತಿಳಿಸಿದರು.
ಇದನ್ನೂ ಓದಿ: ಗುಡ್ಡೆಕೊಪ್ಲದಲ್ಲಿ ಲಂಗರು ಹಾಕಿದ ಡ್ರೆಜ್ಜರ್ ಗೆ ಒಂದು ವರ್ಷ! ವಿಳಂಬವಾದ ವಿಲೇವಾರಿ ಕ್ರಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ
Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.