ಅರ್ಚಕನ ಅಶ್ಲೀಲ ಚಿತ್ರ ವೈರಲ್
Team Udayavani, Nov 22, 2017, 8:36 AM IST
ಕೊಪ್ಪಳ/ಗಂಗಾವತಿ: ಇತಿಹಾಸ ಪ್ರಸಿದ್ಧ ಕಿಷ್ಕಿಂದ ಅಂಜನಾದ್ರಿ ಬೆಟ್ಟದ ಮುಖ್ಯ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಅವರದ್ದು ಎನ್ನಲಾದ ಅಶ್ಲೀಲ ಚಿತ್ರ ಹಾಗೂ ಯುವತಿ ಜೊತೆ ಅಶ್ಲೀಲವಾಗಿ ಮಾತನಾಡುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
2010ರಲ್ಲಿ ಕಿಷ್ಕಿಂದ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇಗುಲದ ಮುಖ್ಯ ಅರ್ಚಕರನ್ನಾಗಿ ಮಹಾಂತ ವಿದ್ಯಾದಾಸ ಬಾಬಾ ಅವರನ್ನು ನೇಮಿಸಲಾಗಿತ್ತು. ಕಿಷ್ಕಿಂದ ಅಂಜನಾದ್ರಿ ಪರ್ವತ ಟ್ರಸ್ಟ್ ಕಮಿಟಿಯವರ ಮಾತಿಗೆ ಕಿಮ್ಮತ್ತು ನೀಡದೆ ದೇವಾಲಯದಲ್ಲಿ ಹಲವು ಕಾರ್ಯ ಕೈಗೊಂಡಿದ್ದರು. ರಾತ್ರಿ ವೇಳೆ ಅಂಜನಾದ್ರಿ ಬೆಟ್ಟದಲ್ಲಿ ಮಹಿಳೆ ವಾಸ ನಿಷೇಧವಿದ್ದರೂ ಅರ್ಚಕ ಮಹಿಳೆ ಯರನ್ನು ಕೆಲಸಕ್ಕೆ ನೇಮಿಸಿಕೊಂಡು ಕೆಲವರ ಜೊತೆ ಅನೈತಿಕವಾಗಿ ವರ್ತಿಸುತ್ತಿರುವ ಆರೋಪವಿದೆ. ಈ ವರ್ತನೆ ಖಂಡಿಸಿ ಹಲವು ಭಾರಿ ಟ್ರಸ್ಟ್ ಕಮಿಟಿಯವರು ಬುದಿಟಛಿವಾದ ಹೇಳಿದರೂ ಬಾಬಾ ಕೇಳುತ್ತಿರಲಿಲ್ಲ ಎನ್ನಲಾಗಿದೆ.
ಕಿಷ್ಕಿಂದ ಅಂಜನಾದ್ರಿ ಬೆಟ್ಟದ ಟ್ರಸ್ಟ್ ಸ್ಥಳೀಯ ರಾಜವಂಶಸ್ಥರು ಹಾಗೂ ಜನರನ್ನೊಳಗೊಂಡ ಕಮಿಟಿ ಆಗಿದ್ದು, ದೇವಾಲಯದ ಆಗುಹೋಗುಗಳ ಬಗ್ಗೆ ನಿಗಾ ಇಡಲು ಸ್ಥಾಪಿಸಿ ನೋಂದಾಯಿಸಲಾಗಿದೆ. ಇದೀಗ ಬಾಬಾ ಕೃತ್ಯ ಖಂಡಿಸಿ ಟ್ರಸ್ಟ್ ಅರ್ಚಕ ಸ್ಥಾನದಿಂದ ಕಿತ್ತೂಗೆದು ಸ್ಥಳೀಯರನ್ನು ನೇಮಿಸಲು ನಿರ್ಣಯ ಕೈಗೊಂಡಿದೆ.
ಆರೋಪ ಸುಳ್ಳು: ಈ ಮಧ್ಯೆ, ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಂತ್ ವಿದ್ಯಾದಾಸ್ ಬಾಬಾ, ರಾಜಾ ನರಸಿಂಹದೇವರಾಯಲು, ಶಾಸಕ ಇಕ್ಬಾಲ್ ಅನ್ಸಾರಿ ಸೇರಿದಂತೆ ಇತರರು ಅಜಿತ್ ಎಂಬ ಯುವಕನ ಮೂಲಕ ನನಗೆ ಹಣದ ಬೇಡಿಕೆ ಇಟ್ಟಿದ್ದರು. ಶಾಸಕ ಇಕ್ಬಾಲ್ ಅನ್ಸಾರಿ ಕೂಡ ಅನೇಕ ಬಾರಿ ನನಗೆ ದೂರವಾಣಿ ಕರೆ ಮಾಡಿ ಪರ್ವತ ಬಿಟ್ಟು ಹೋಗುವಂತೆ ಧಮಕಿ ಹಾಕಿದ್ದಾರೆ. ಆದರೆ, ನಾನು ಅದಕ್ಕೆ ಸ್ಪಂದಿಸಲಿಲ್ಲ. ಈ ಕಾರಣಕ್ಕಾಗಿ ನನ್ನ ಬೆತ್ತಲೆ ಫೋಟೋ ಸೇರಿದಂತೆ ಆಡಿಯೋ ಒಂದನ್ನು ಸೃಷ್ಟಿಸಿ ನನಗೆ ಅಪಚಾರ ಮಾಡುತ್ತಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ’ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.