ವರುಣನಿಗಾಗಿ ಕಡೆಗೂ ಶುರುವಾದ ಪ್ರಾಜೆಕ್ಟ್ ವರ್ಷಧಾರೆ
Team Udayavani, Aug 22, 2017, 6:00 AM IST
ಬೆಂಗಳೂರು: ಸತತ ಮೂರು ವರ್ಷಗಳ ಭೀಕರ ಬರಗಾಲದಿಂದ ಕಂಗಾಲಾಗಿರುವ ರೈತರಿಗೆ ಸಂಜೀವಿನಿ ರೂಪದಲ್ಲಿ ಸರ್ಕಾರ ಜಾರಿಗೆ ತಂದಿರುವ ಬಹುಚರ್ಚಿತ ಮೋಡ ಬಿತ್ತನೆಯ “ವರ್ಷಧಾರೆ’ ಯೋಜನೆಗೆ ಸೋಮವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು. ಆದರೆ, ವರ್ಷಧಾರೆಗೆ ಆರಂಭದಲ್ಲೇ ತೊಡಕು ಉಂಟಾಗಿದ್ದು, ರಡಾರ್ ಸಂಕೇತಗಳಂತೆ
ರಾಮನಗರ ಜಿಲ್ಲೆ ಮಾಗಡಿಯ ಸುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಮೋಡ ಬಿತ್ತನೆ ನಿಗದಿಯಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ವಿಮಾನ ಹಾರಾಟ ವಿಳಂಬವಾಗಿದ್ದಕ್ಕೆ ಆನೇಕಲ್‌ನಲ್ಲಿ ಮೋಡ ಬಿತ್ತನೆ ಮಾಡಲಾಯಿತು.
ವಿಮಾನದಲ್ಲಿ ಸಚಿವರಾದ ಎಚ್.ಕೆ. ಪಾಟೀಲ್, ಕೃಷ್ಣಭೈರೇಗೌಡ, ಎಂ.ಆರ್. ಸೀತಾರಾಂ ಇದ್ದರು. “ವರ್ಷಧಾರೆ’ ಯೋಜನೆಗೆ ಗ್ರಾಮೀಣಾಭಿವೃದಿಟಛಿ ಸಚಿವ ಎಚ್.ಕೆ. ಪಾಟೀಲ್ ಚಾಲನೆ ಕೊಟ್ಟ ಬಳಿಕ, ಜಕ್ಕೂರು ವಾಯು ನೆಲೆಯಿಂದ ಅಮೆರಿಕಾದ ವಿಶೇಷ ವಿಮಾನ “ಬಿಕ್ಯೂ-100 ಬೀಚ್‌ಕ್ರಾಫ್ಟ್’ ಮಧ್ಯಾಹ್ನ 2.45ಕ್ಕೆ ರಾಮನಗರ ಜಿಲ್ಲೆಯ ಮಾಗಡಿ
ಕಡೆ ಹಾರಲು ಸಿದಟಛಿವಾಗಿತ್ತು. ಆದರೆ, ಯಲಹಂಕ ವಾಯುನೆಲೆಯಲ್ಲಿ ಯುದಟಛಿ ವಿಮಾನಗಳ ತರಬೇತಿ ಹಾರಾಟ ನಡೆಯುತ್ತಿದ್ದರಿಂದ ಮೋಡ ಬಿತ್ತನೆ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ಸಿಕ್ಕಿಲ್ಲ.
ಹಾಗಾಗಿ 2 ಗಂಟೆ ತಡವಾಗಿ, ಸಂಜೆ 4.45ಕ್ಕೆ ಆರಂಭಿಸಿತು. ಮೋಡ ಬಿತ್ತನೆ ಕಾರ್ಯ ಸಂಜೆ 6.15ಕ್ಕೆ ಅಂತ್ಯವಾಯಿತು. ಬಳಿಕ ವಿಮಾನ ಜಕ್ಕೂರು ವಾಯು ನೆಲೆಗೆ ಬಂದಿಳಿಯಿತು.
ಈ ಕುರಿತು ಸ್ಪಷ್ಟೀಕರಣ ನೀಡಿದ ಸಚಿವ ಎಚ್.ಕೆ. ಪಾಟೀಲ್ ಹಾಗೂ ಕೃಷ್ಣ ಭೈರೇಗೌಡ, ತಂತ್ರಜ್ಞಾನದಿಂದ ಮೋಡ ಸೃಷ್ಟಿ ಮಾಡಲು ಆಗುವುದಿಲ್ಲ. ಮಳೆ ಬರಿಸುವ ಮೋಡಗಳ ಸಾಮರ್ಥಯ ಹೆಚ್ಚಿಸಿ ಮಳೆ ಬರಿಸುವುದು ಮೋಡ ಬಿತ್ತನೆ. ರಡಾರ್ ಸಂಕೇತಗಳಂತೆ ಮಾಗಡಿಯಲ್ಲಿ ಮೋಡ ಬಿತ್ತನೆಗೆ ನಿರ್ಧರಿಸಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ವಿಮಾನ ಹಾರಾಟ ವಿಳಂಬವಾಯಿತು. ಹಾಗಾಗಿ, ವಿಮಾನ ಮೋಡ ಬಿತ್ತನೆಗೆಂದು ಮಾಗಡಿಗೆ ಹೋದಾದ ಅಲ್ಲಿ ಮಳೆ
ಬರಿಸುವ ಮೋಡಗಳ ಸಂಖ್ಯೆ ಕ್ಷೀಣಿಸಿತ್ತು. ಜಕ್ಕೂರಿನಿಂದ 60 ಕಿ.ಮೀ ದೂರದ ಆನೇಕಲ್‌ನಲ್ಲಿ ಮೋಡ ಬಿತ್ತನೆ ಮಾಡಲಾಯಿತು. ಅಲ್ಲಿಯೂ ದಟ್ಟ ಮೋಡಗಳು ಅಷ್ಟೊಂದು ಇರಲಿಲ್ಲ, ಸ್ವಲ್ಪ ಮಳೆಯೂ ಬರುತ್ತಿತ್ತು. ಆದರೂ, ಪ್ರಾಯೋಗಿಕ ಎಂದರು.
ಪ್ರಪಂಚದ ಮುಂದುವರಿದ ದೇಶಗಳಲ್ಲಿ ಇದೊಂದು ಸಾಮಾನ್ಯ ಪ್ರಕ್ರಿಯೆ. ಈ ಹಿಂದೆ ನಡೆದ ಮೋಡ ಬಿತ್ತನೆಗೂ, ಈಗ ನಡೆಯುವ ಮೋಡ ಬಿತ್ತನೆಗೂ ಅಜಗಜಾಂತರ ವಿದೆ. ಮೋಡ ಬಿತ್ತನೆಯ ಯಶಸ್ಸು ಶೇ.90ರಷ್ಟು ಖಚಿತ.
– ಪ್ರೊ. ರಾಮ್‌ಸಾಗರ್, ಖಭೌತಿಕ ತಜ್ಞ
ಮಾಹಿತಿ ಮತ್ತು ಅನುಭವದ ಕೊರತೆ ಇರುವವರು ಮೋಡ ಬಿತ್ತನೆ ಬಗ್ಗೆ ಏನೇನೋ ಹೇಳುತ್ತಾರೆ. ಆದರೆ, ಇದು ವೈಜ್ಞಾನಿಕವಾಗಿ ಸಾಬೀತಾಗಿದೆ. ಈಗಿನ ಮೋಡ ಬಿತ್ತನೆಗೆ “ಪ್ರಾಜೆಕ್ಟ್ ವರ್ಷಧಾರೆ’ ಎಂದು ಹೆಸರಿಡಲಾಗಿದೆ.
– ಎಚ್.ಕೆ. ಪಾಟೀಲ್, ಪಂಚಾಯತ್‌ರಾಜ್ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.