ಹವಾಲ್ದಾರ್ಗೆ ಆವಾಜ್ ಹಾಕಿದ ಕುಡುಕರಿಗೆ ಸಾರ್ವಜನಿಕರ ಧರ್ಮದೇಟು
Team Udayavani, Apr 29, 2019, 3:00 AM IST
ಚನ್ನಮ್ಮನ ಕಿತ್ತೂರು: ಕ್ಷುಲ್ಲಕ ಕಾರಣಕ್ಕೆ ಹೋಟೆಲ್ವೊಂದರಲ್ಲಿ ಸಪ್ಲಾಯರ್ನನ್ನು ಥಳಿಸುತ್ತಿದ್ದ ಮೂವರು ಕುಡುಕರನ್ನು (ಮದ್ಯ ಸೇವಿಸಿದ್ದ ಯುವಕರು) ಸಾರ್ವಜನಿಕರೇ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಪಟ್ಟಣದ ಗುರುವಾರ ಪೇಟೆ ಪೊಲೀಸ್ ಠಾಣೆ ಎದುರುಗಡೆ ಯುವಕರು ಹೋಟೆಲ್ ಸಪ್ಲಾಯರ್ನನ್ನು ವಿನಾಕಾರಣ ಥಳಿಸಲು ಪ್ರಾರಂಭಿಸಿದರು.
ಹೋಟೆಲ್ ಮಾಲೀಕ ಬಿಡಿಸಲು ಹೋದಾಗ ಆತನನ್ನೂ ಎಳೆದಾಡಿದರು. ಆಗ ಮಾಲೀಕ, ಪೊಲೀಸ್ ಠಾಣೆಗೆ ಸುದ್ದಿ ತಿಳಿಸಿದ. ಸ್ಥಳಕ್ಕೆ ಆಗಮಿಸಿದ ಹವಾಲ್ದಾರ್ ಎಲ್.ಎಚ್.ನಾಯ್ಕರ ಜಗಳ ಬಿಡಿಸಲು ಮುಂದಾಗುತ್ತಿದ್ದಂತೆ ಕುಡುಕರು ಅವರ ಮೇಲೆಯೇ ಹಲ್ಲೆ ನಡೆಸಲು ಮುಂದಾದರು.
ಇದನ್ನು ಕಂಡ ಸಾರ್ವಜನಿಕರು ಕುಡುಕರನ್ನು ಥಳಿಸಿ ಠಾಣೆಗೆ ಒಪ್ಪಿಸಿದರು. ಆರೋಪಿಗಳಾದ ಸಮೀಪದ ಗುಡಿಕೊಟಬಾಗಿಯ ಮಹೇಶ ಕಂಬಳಿ, ಮಂಜುನಾಥ ಕಂಬಳಿ ಸೇರಿ ಮೂವರ ವಿರುದ್ಧ ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಓರ್ವ ಆರೋಪಿ ಪರಾರಿಯಾಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇವಿ ಬೈಕ್ ಶೋ ರೂಮ್ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು
CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ
Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್ ಸ್ಥಾಪನೆ: ಸಿಎಂ ಸಿದ್ದರಾಮಯ್ಯ
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.