ಕಾಯ್ದೆ ಉದ್ದೇಶ ನಿಯಂತ್ರಣವಲ್ಲ, ನಿಗಾ 


Team Udayavani, Jun 19, 2017, 11:53 AM IST

basava.jpg

ರಾಜ್ಯ ಸರ್ಕಾರ ವಿಶ್ವವಿದ್ಯಾಲಯಗಳ ಮೇಲೆ ನಿಯಂತ್ರಣ ಹೊಂದುವ ಉದ್ದೇಶದ ತಿದ್ದುಪಡಿ ವಿಧೇಯಕ ವಿಧಾನಮಂಡಲದಲ್ಲಿ ಮಂಡನೆ ಮಾಡಿದೆ. ಕುಲಪತಿ, ಕುಲಸಚಿವ ಹುದ್ದೆಗೆ ಕೆಎಎಸ್‌ ಅಧಿಕಾರಿಗಳ ನೇಮಕ ಸೇರಿದಂತೆ ವಿಶ್ವವಿದ್ಯಾಲಯದ ಆಡಳಿತದಲ್ಲಿ ಸರ್ಕಾರ ನೇರ ಪ್ರವೇಶಕ್ಕೆ ಈ ಕಾಯ್ದೆ  ¨ಲಿ‌ É ಅವಕಾಶವಿರುವುದರಿಂದ ಇದು ವಿವಾದಕ್ಕೆ ಕಾರಣವಾಗುವ ಲಕ್ಷಣಗಳು ಕಂಡುಬರುತ್ತಿವೆ. ತಿದ್ದುಪಡಿ ಕಾಯ್ದೆಯ ಉದ್ದೇಶ ಹಾಗೂ ಅದರಲ್ಲಿ ಅಂಶಗಳ ಬಗ್ಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಜತೆ ” ಉದಯವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

– ವಿವಿ ಕಾಯ್ದೆಗೆ ಸಮಗ್ರ ತಿದ್ದುಪಡಿ ಹಿಂದಿನ ಉದ್ದೇಶ ಏನು ?
ವಿವಿಗಳಲ್ಲಿ ಏನು ನಡೆಯುತ್ತಿದೆ ಎಂಬುದು ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ. ಯಾವ ವಿವಿಯಲ್ಲಿ ಎಷ್ಟು ಜಾಗ ಇದೆ, ಎಷ್ಟು ಕಟ್ಟಡ ಇವೆ, ಎಷ್ಟು ಪ್ರಾಧ್ಯಾಪಕರಿದ್ದಾರೆ, ಎಷ್ಟು ಹಣಕಾಸು ವ್ಯವಹಾರ ನಡೆಯುತ್ತದೆ ಎಂಬ ಬಗ್ಗೆ ಸರ್ಕಾರಕ್ಕೆ ಮಾಹಿತಿಯೂ ಬರುವುದಿಲ್ಲ. ಹೀಗಾಗಿ, ಸರ್ಕಾರ, ವಿಶ್ವವಿದ್ಯಾಲಯಗಳ ನಡುವೆ ಇನ್ನೂ ಉತ್ತಮ ಸಂವಹನ ಸೇರಿದಂತೆ ವಿವಿಗಳ ಗುಣಮಟ್ಟ ಸುಧಾರಣೆ ಉದ್ದೇಶದಿಂದಲೇ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ.

– ಆದರೆ, ವಿವಿಗಳ ಮೇಲೆ ನಿಯಂತ್ರಣ ಸಾಧಿಸುವ ಸರ್ಕಾರದ ಪ್ರಯತ್ನ ಎಂಬ ಆರೋಪವಿದೆಯಲ್ಲಾ?
ನಿಯಂತ್ರಣ ಅಲ್ಲ, ಬೇಕಾದರೆ ನಿಗಾ ಎನ್ನಬಹುದು. ನನ್ನ ಪ್ರಕಾರ ಇದರ ಅಗತ್ಯತೆ ಇದೆ. ಯಾಕೆಂದರೆ, ಕೆಲವು ವಿವಿಗಳಲ್ಲಿ ಅವ್ಯವಹಾರವೂ ನಡೆದಿದೆ. ಕಾಮಗಾರಿಗಳಿಗೆ ಅನುಮೋದನೆ ನೀಡಿದ ಮೊತ್ತಕ್ಕಿಂತ ಡಬಲ್‌ ಹಣ ಬಿಡುಗಡೆ
ಮಾಡಿಕೊಳ್ಳಲಾಗಿದೆ. ಬೆಂಗಳೂರು ವಿವಿಯಲ್ಲಿ 1100 ಎಕರೆ ಜಾಗ ಇದೆ. ಅದರಲ್ಲಿ ನೂರು ಎಕರೆ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಇಂತಹ ಸಂಗತಿಗಳನ್ನು ಸರ್ಕಾರ ಗಮನಿಸದೇ ಹೋದರೆ, ವಿವಿಗಳ ಆಸ್ತಿ ಕೈ ತಪ್ಪುವುದಿಲ್ಲವೇ?

– ಇತ್ತೀಚೆಗೆ ನೀವು ಕುಲಪತಿಗಳ ವಿರುದಟಛಿ ಟೀಕೆ ಮಾಡುತ್ತಿದ್ದೀರಿ. ಸರ್ಕಾರದ ಸಚಿವರಾಗಿ ನೀವು
ವಿವಿ ಕುಲಪತಿಗಳು ಭ್ರಷ್ಟರು ಎಂದು ಹೇಳಬಹುದಾ?

ಹೌದು, ಬಹುತೇಕ ವಿವಿಗಳಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಸಾಕಷ್ಟು ಗೋಲ್‌ಮಾಲ್‌ ಆಗಿದೆ. ಒಂದು ಕಾಮಗಾರಿಗೂ ಸರ್ಕಾರದಿಂದ ಅನುಮತಿ ಪಡೆಯುವುದಿಲ್ಲ. ವಿಶ್ವೇಶ್ವರಯ್ಯ ವಿವಿಯ ಮುದ್ದೇನಹಳ್ಳಿ ಕೇಂದ್ರ ಸ್ಥಾಪನೆಗೆ 49 ಕೋಟಿಗೆ ಅನುಮೋದನೆ ಪಡೆದು, 74 ಕೋಟಿ ರೂಪಾಯಿ ಪೇಮೆಂಟ್‌ ಮಾಡಿದೆ. ಕುಲಪತಿ ಮನೆ ರಿಪೇರಿ ಮಾಡಲಿಕ್ಕೆ 5 ಕೋಟಿ ರೂಪಾಯಿ ಖರ್ಚು ಲೆಕ್ಕ ತೋರಿಸಲಾಗಿತ್ತು. ಅದರ ಬಗ್ಗೆ ತನಿಖೆ ಮಾಡಿದಾಗ ಎಲ್ಲಾ ಬಯಲಿಗೆ ಬಂತು. ಈಗ ವಿಸಿ ಸಸ್ಪೆಂಡ್‌ ಆಗಿದ್ದಾರೆ. ಅದೇ ರೀತಿ ಧಾರವಾಡದ ಕರ್ನಾಟಕ ವಿವಿ ಕುಲಪತಿ, ಶಿವಮೊಗ್ಗ, ಮೈಸೂರು, ವಿಜಯಪುರ ವಿವಿ ಕುಲಪತಿಗಳು ಅವ್ಯವಹಾರದ ಕೇಸ್‌ನಲ್ಲಿಯೇ ಅಮಾನತ್ತಾಗಿದ್ದಾರೆ.

– ನಿಮ್ಮ ಪ್ರಕಾರ ಕುಲಪತಿಗಳು ಅವ್ಯವಹಾರ ಅಥವಾ ಭ್ರಷ್ಟಾಚಾರ ಎಸಗಿದರೆ ಕ್ರಮಕ್ಕೆ ಅವಕಾಶ ಕಲ್ಪಿಸಿಕೊಳ್ಳಲು ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆಯಾ?
ಹೌದು. ಈಗಿರುವ ಕಾಯ್ದೆಯಲ್ಲಿ ಅವರ ವಿರುದಟಛಿ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಯಾವ ರೀತಿಯಲ್ಲೂ ಅಧಿಕಾರ ಇಲ್ಲ. ಹೊಸ ಕಾಯ್ದೆ ಪ್ರಕಾರ ತಪ್ಪು ಮಾಡುವ ಎಲ್ಲರಿಗೂ ಶಿಕ್ಷೆ ಆಗುತ್ತದೆ. ಸರ್ಕಾರದ ಕ್ರಮ ವಿಳಂಬ ಆಗಬಹುದು ಆದರೆ, ಕೈ ಕಟ್ಟಿ ಕೂರುವುದಿಲ್ಲ.

– ವಿವಿಗಳ ಕುಲಪತಿ ಹಾಗೂ ಕುಲಸಚಿವರ ನೇಮಕಾತಿಯಲ್ಲಿ ಪ್ರತಿ ಬಾರಿ ಗೊಂದಲ ಯಾಕೆ?
ಈಗಿರುವ ಕಾಯ್ದೆಯಲ್ಲಿ ಸರ್ಕಾರ ಏನೂ ಮಾಡುವಂತಿಲ್ಲ. ಕೇವಲ ರಾಜ್ಯಪಾಲರು ಸೂಚಿಸಿರುವ ವ್ಯಕ್ತಿಗಳ ನೇಮಕ ಮಾಡುವುದಷ್ಟೇ ನಮ್ಮ ಕೆಲಸ. ಅಲ್ಲದೇ ವಿಸಿಗಳು ನಿವೃತ್ತಿ ಆಗುವವರೆಗೂ ಶೋಧನಾ ಸಮಿತಿ ರಚನೆ ಆಗದಿರುವುದರಿಂದ ವಿಸಿಗಳ ನೇಮಕ ವಿಳಂಬ ಆಗುತ್ತಿದೆ. ಹೀಗಾಗಿ ಮೂರು ತಿಂಗಳು ಮೊದಲೇ ವಿಸಿಗಳ ನೇಮಕಕ್ಕೆ ಶೋಧನಾ ಸಮಿತಿ ರಚಿಸಿ, ವಿಸಿಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

– ಉನ್ನತ ಶಿಕ್ಷಣ ಇಲಾಖೆಯಲ್ಲಿ ಸಚಿವರಾಗಿ ವರ್ಷ ಪೂರೈಸುತ್ತಿದ್ದೀರಿ ? ಇಲಾಖೆಯಲ್ಲಿ ಏನಾದರೂ ಬದಲಾವಣೆಯಾಗಿದೆಯಾ?
ಉನ್ನತ ಶಿಕ್ಷಣ ಇಲಾಖೆಯಲ್ಲಿ ಮಾಡಲು ಸಾಕಷ್ಟು ಕೆಲಸ ಇದೆ. ಇಲಾಖೆಯ ವ್ಯಾಪ್ತಿಯಲ್ಲಿ 52 ವಿಶ್ವವಿದ್ಯಾಲಯಗಳಿದ್ದು, 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. 3 ಸಾವಿರಕ್ಕೂ ಹೆಚ್ಚು ಖಾಸಗಿ ಕಾಲೇಜುಗಳಿವೆ. 20 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ನಾನು ಮಂತ್ರಿಯಾಗಿ ಒಂದು ವರ್ಷ ಆಯಿತು. ನನಗಿಂತಲೂ ಮೊದಲು
ಆರ್‌.ವಿ.ದೇಶಪಾಂಡೆ ಮತ್ತು ಟಿ.ಬಿ.ಜಯಚಂದ್ರ ಈ ಇಲಾಖೆಯ ಜವಾಬ್ದಾರಿ ಹೊತ್ತಿದ್ದರು. ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಒಂದೊಂದೇ ಪರಿಹರಿಸುವ ಪ್ರಯತ್ನ ನಡೆಸಿದ್ದೇನೆ.

– ಬೊಧಕ ವರ್ಗದ ಕೊರತೆ ನೀಗಿದೆಯಾ ?
ರಾಜ್ಯದ ಎಲ್ಲಾ ವಿವಿಗಳಲ್ಲಿ ಮೂರು ಸಾವಿರ ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ 2160 ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಈ ವರ್ಷ 700 ಜನರ ನೇಮಕ ಮಾಡುತ್ತೇವೆ. 412 ಕಾಲೇಜುಗಳಲ್ಲಿ 375 ಪ್ರಿನ್ಸಿಪಾಲ್‌ ಹುದ್ದೆಗಳು ಖಾಲಿ ಇವೆ. ಅವುಗಳನ್ನು ನೇರ ನೇಮಕ ಮಾಡಲು ವಿಶೇಷ ನೇಮಕ ಕಾಯ್ದೆ ತರಲು ತೀರ್ಮಾನಿಸಲಾಗಿದೆ.

– ಖಾಸಗಿ ವಿವಿಗಳ ನಿಯಂತ್ರಣಕ್ಕೆ ಏನಾದರೂ ಕ್ರಮ ಕೈಗೊಂಡಿದ್ದೀರಾ ?
ಖಾಸಗಿ ವಿವಿಗಳ ನಿಯಂತ್ರಣಕ್ಕೂ ಕಾಯ್ದೆ ತಿದ್ದುಪಡಿ ಮಾಡಲಾಗುತ್ತಿದೆ. ಈಗಾಗಲೇ ಗೋವಾ ವಿವಿ ವಿಶ್ರಾಂತ ಕುಲಪತಿ ಬಿ.ಎಸ್‌.ಸೋಂದೇ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ವಿವಿ ಸ್ಥಾಪನೆಗೆ ಅನುಮತಿ ಪಡೆದು ಇನ್ನೂ ಸ್ಥಾಪನೆ ಮಾಡದ ವಿವಿಗಳ ವಿರುದ್ದ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಈ ಬಗ್ಗೆ ವಿವಿಗಳಿಂದ ಮಾಹಿತಿ ಪಡೆದು
ನಂತರ ಕ್ರಮ ಕೈಗೊಳ್ಳಲಾಗುವುದು.

– ಶಂಕರ ಪಾಗೋಜಿ

ಟಾಪ್ ನ್ಯೂಸ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.