ಕೋವಿಡ್ ಸೋಲಿಸಿದ ಸೋಲಿಗರು!
ಪೋಡುಗಳಿಗೆ ಸುಳಿಯದ ಕೋವಿಡ್; ಅರಣ್ಯ ಇಲಾಖೆಯಿಂದಲೂ ನೆರವು
Team Udayavani, Dec 22, 2020, 6:10 AM IST
ಸಾಂದರ್ಭಿಕ ಚಿತ್ರ
ಚಾಮರಾಜನಗರ: ಮಾಯಾವಿ ಕೊರೊನಾಕ್ಕೆ ಜಗತ್ತು ಮುಗ್ಗರಿಸಿ ಬಿದ್ದಿದೆ. ಜೀವಗಳನ್ನು ಜಗ್ಗಾಡಿದೆ. ಆದರೆ ಕರುನಾಡಿನ ಈ ಒಂದು ಭಾಗಕ್ಕೆ ಮಾತ್ರ ಕೋವಿಡ್ ಕಾಲಿಟ್ಟಿಲ್ಲ!
ಇದು ಕಾಡನ್ನೇ ನಂಬಿಕೊಂಡು, ಬೆಟ್ಟವನ್ನೇ ಜೀವ ಮಾಡಿಕೊಂಡ ಸೋಲಿಗರು ಕೋವಿಡ್ ಗೆದ್ದ ಕಥೆ. ಬಿಳಿಗಿರಿರಂಗನ ಬೆಟ್ಟದ ತಪ್ಪಲಿನ ನಿವಾಸಿ ಬುಡಕಟ್ಟು ಜನರು ಈ ಸೋಲಿಗರು. 27 ಪೋಡುಗಳಲ್ಲಿನ 10 ಸಾವಿರ ಮಂದಿಯಲ್ಲಿ ಒಬ್ಬರಿಗೂ ಕೋವಿಡ್ ಬಾಧಿಸಿಲ್ಲ. ದೇಶವಿಡೀ ಆತಂಕದ ಉಸಿರು ಬಿಡುತ್ತಿದ್ದಾಗ ಕಾಡಿನಲ್ಲಿ ಯಾವ ಭಯವೂ ಇಲ್ಲದೆ ಸೋಲಿಗರು ನೆಮ್ಮದಿಯಿಂದ ಇದ್ದರು.
ಪ್ರವಾಸಿಗರೇ, ನಿಲ್ಲಿ!
ಅರಣ್ಯಕ್ಕೆ ಪ್ರವಾಸಿಗರ ಭೇಟಿ ಬಂದ್ ಮಾಡಿರುವುದು ಸೋಲಿಗರನ್ನು ಪಾರು ಮಾಡಿತು. ಅರಣ್ಯಾಧಿಕಾರಿಗಳು ಪೋಡುಗಳಿಗೆ ತೆರಳಿ ಸುರಕ್ಷಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದ್ದರು.
ಆದೇಶ ಪಾಲನೆ
ಅರಣ್ಯ ಇಲಾಖೆಯವರು ಜಾಗೃತಿ ಮೂಡಿಸಿದ್ದರಿಂದ ಅವರು ಹೇಳಿ ದಂತೆ ನಡೆದುಕೊಂಡಿದ್ದೇವೆ. ಇಲ್ಲಿಯ ವರೆಗೆ ನಮ್ಮ ಪೋಡುಗಳಲ್ಲಿ ಯಾರಿಗೂ ಕೋವಿಡ್ ಕಾಣಿಸಿಕೊಂಡಿಲ್ಲ ಎನ್ನುತ್ತಾರೆ ಕೆ. ಗುಡಿಯ ಕನ್ನೇರಿ ಪೋಡಿನ ಮುಖ್ಯಸ್ಥ ಕೋಣುರೇಗೌಡ.
ಗೆದ್ದದ್ದು ಹೇಗೆ?
ಮಾರ್ಚ್‌ನಲ್ಲಿ ಲಾಕ್‌ಡೌನ್ ಮಾಡಲಾಯಿತು. ರಾಜ್ಯ- ಜಿಲ್ಲೆಗಳ ಗಡಿ ಬಂದ್ ಆದವು. ಹೊಸ ವೈರಾಣು ಅವತರಿಸಿದೆ ಎಂಬ ಸುದ್ದಿ ಅರಣ್ಯಾಧಿಕಾರಿಗಳ ಮೂಲಕ ಕಿವಿಗೆ ಬಿದ್ದಾಗ ಸೋಲಿಗರು ಎಚ್ಚೆತ್ತುಕೊಂಡರು. ತಾವು ವಾಸವಿರುವ ಅರಣ್ಯ ಪ್ರದೇಶಗಳ ಗಡಿಗಳನ್ನು ತಾವೇ ಬಂದ್ ಮಾಡಿದರು. ತಮ್ಮ ಪೋಡುಗಳಿಗೆ ಬೇಲಿ ಹಾಕಿಕೊಂಡರು. ಹೊರಗಿನವರಾರೂ ಒಳಗೆ ಬಾರದಂತೆ ಹಗಲು-ರಾತ್ರಿ ಕಾದರು.
“ಕೊರೊನಾ ಬಂದಾಗ ಸೋಲಿಗರ ಆರೋಗ್ಯದ ಬಗ್ಗೆ ನಮಗೆ ಆತಂಕವಿತ್ತು. ಆದರೆ ಅವರು ಸ್ವಯಂ ರಕ್ಷಣೆ ಮಾಡಿಕೊಂಡರು’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ನಿರ್ದೇಶಕ ಸಂತೋಷ್ ಕುಮಾರ್ ಹೇಳಿದ್ದಾರೆ.
ಸಾಮಾನ್ಯರಿಗಿಂತ ಮಿಗಿಲು
ಕೊರೊನಾ ಬಗ್ಗೆ ಸಾಮಾನ್ಯ ಜನರು ಮುನ್ನೆಚ್ಚರಿಕೆ ವಹಿಸ ದಿರುವುದು ಎಲ್ಲೆಡೆ ಕಂಡು ಬರುತ್ತಿದೆ. ಬುಡಕಟ್ಟು ಜನರು ಅವಿದ್ಯಾವಂತರು. ಆದರೆ ಆರೋಗ್ಯದ ವಿಷಯ, ಸ್ವಯಂ ರಕ್ಷಣೆ, ಮುನ್ನೆಚ್ಚರಿಕೆಯಲ್ಲಿ ಇತರರಿಗಿಂತ ಮೇಲು ಸ್ತರದಲ್ಲಿ ಇದ್ದಾರೆ ಎಂದಿದ್ದಾರೆ ಚಾಮರಾಜನಗರ ಸಿಸಿಎಫ್ ಮನೋಜ್ ಕುಮಾರ್.
ನಾಗಪ್ಪ ಎಸ್. ಹಳ್ಳಿಹೊಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.