ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಗಮನಾರ್ಹ ಸಾಧನೆ
Team Udayavani, May 28, 2020, 8:05 AM IST
ಬೆಂಗಳೂರು: ಕೋವಿಡ್ 19- ವೈರಸ್ ನಿಯಂತ್ರಣ ಕಾರ್ಯದಲ್ಲಿ ರಾಜ್ಯವು ದೇಶದ ಇತರೆ ರಾಜ್ಯಗಳಿಗಿಂತ ಗಮ ನಾರ್ಹ ಸಾಧನೆ ಮಾಡಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು. ವಿಪ್ರೊ ಜಿಇ ಹೆಲ್ತ್‌ಕೇರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್ ಪರೀಕ್ಷಾ ಸ್ಮಾರ್ಟ್ ಕಿಯೋಸ್ಕ್ ಅನ್ನು ಬುಧವಾರ ವಿಧಾನಸೌ ಧದ ಮುಂಭಾಗ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಹೊಸ ಸೋಂಕಿತ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಮಹಾರಾಷ್ಟ್ರ, ಇತರೆ ಹೊರ ರಾಜ್ಯಗಳಿಂದ ಬರುವವರರಿಂದ ಸೋಂಕು ಹೆಚ್ಚಾಗುತ್ತಿದೆ.
ಕೋವಿಡ್- 19 ವೈರಸ್ ಹರಡು ವುದನ್ನು ಸರ್ಕಾರ ಯಶಸ್ವಿಯಾಗಿ ತಡೆಗಟ್ಟು ವಲ್ಲಿ ಆರೋಗ್ಯ ಸೇವೆ ಹಾಗೂ ಆರೋಗ್ಯ ಕಾರ್ಯಕರ್ತರ ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು. ಸದ್ಯಕ್ಕೆ ಜಾರಿಯಲ್ಲಿರುವ ಕ್ರಮಗಳ ಜತೆಗೆ ರೋಗ ಲಕ್ಷಣವಿರುವವರನ್ನು ಪರೀಕ್ಷಿಸಲು ಅನು ಕೂಲ ವಾಗುವಂತೆ ಸರ್ಕಾರ ವಿಪ್ರೊ ಜಿಇ ಹೆಲ್ತ್‌ಕೇರ್ ಸಹಯೋಗದಲ್ಲಿ ಜನಸಂಖ್ಯೆ ಆಧಾರಿತ ಪರೀಕ್ಷೆಗಾಗಿ ಸ್ಮಾರ್ಟ್ ಕಿಯೋಸ್ಕ್ ವ್ಯವಸ್ಥೆ ಜಾರಿಗೊಳಿಸುತ್ತಿದೆ.
ಈ ಸ್ಮಾರ್ಟ್ ಕಿಯೋಸ್ಕ್ಗಳಿಂದ ಆರೋಗ್ಯ ಕಾರ್ಯಕರ್ತರು ಹಾಗೂ ಶಂಕಿತ ರೋಗಿಗಳ ಸಂಪರ್ಕ ತಡೆಯುವ ಮೂಲಕ ಆರೋಗ್ಯ ಕಾರ್ಯ ಕರ್ತರು ಸೋಂಕಿಗೆ ಒಳಗಾಗುವುದನ್ನು ತಪ್ಪಿಸಬಹು ದಾಗಿದೆ ಎಂದು ತಿಳಿಸಿದರು. ಅತ್ಯಾಧುನಿಕ ಸೌಲಭ್ಯವಿರುವ ಕಿಯೋಸ್ಕ್ ಅನ್ನು ಅಭಿವೃದ್ಧಿಪಡಿಸಿರುವ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಲಾಗುವುದು. ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ 15 ಸ್ಥಳಗಳಲ್ಲಿ ಈ ಕಿಯೋಸ್ಕ್ಗಳು ಕಾರ್ಯ ನಿರ್ವಹಿಸಲಿವೆ.
ಕೋವಿಡ್ ವಿರುದ್ಧ ಹೋರಾಟದಲ್ಲಿ ಕೈಜೋಡಿಸಿರುವ ವಿಪ್ರೊ ಜಿಇ ಹೆಲ್ತ್‌ಕೇರ್ ಸಂಸ್ಥೆ ಇತರೆ ಸಂಸ್ಥೆಗಳಿಗೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ 60 ಕೋವಿಡ್ ಪರೀಕ್ಷಾ ಪ್ರಯೋಗಾಲಯ ಗಳನ್ನು ಸ್ಥಾಪಿಸುವ ಮೂಲಕ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇಡೀ ದೇಶದ ಪ್ರಮುಖ ನಗರಗಳ ಪೈಕಿ ಬೆಂಗಳೂರು ನಗರ ಸೋಂಕು ತಡೆಯುವಲ್ಲಿ ಯಶಸ್ವಿಯಾಗಿದೆ ಎಂಬುದನ್ನು ಕೇಂದ್ರ ಸರ್ಕಾರ ಮನಗಂಡು ಬೆಂಗಳೂರಿನ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಜತೆಗೆ ಇದೇ ರೀತಿ ಮುಂದುವರಿಯಬೇಕು ಎಂದು ಸಲಹೆ ನೀಡಿದೆ.
ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, ಸೋಂಕು ಪತ್ತೆಗೆ ಮಾದರಿ ಸಂಗ್ರಹವೇ ದೊಡ್ಡ ಸವಾಲಾಗಿತ್ತು. ವಿಪ್ರೋ ಜಿಇ ಹೆಲ್ತ್‌ಕೇರ್ ಸಂಸ್ಥೆಯು ರೋಗಿ, ವೈದ್ಯರು, ವೈದ್ಯ ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ವಿಶಿಷ್ಟವಾದ ಕಿಯೋಸ್ಕ್ ಸಿದಟಛಿಪಡಿಸಿದೆ. ವೈದ್ಯರು ಮತ್ತು ರೋಗಿ ಪರಸ್ಪರ ಸಂಪರ್ಕಕ್ಕೆ ಬರದೇ ಪರೀಕ್ಷೆ ನಡೆಸಲು ಸಾಧ್ಯವಾಗುವುದರಿಂದ ಯಾವುದೇ ರೀತಿಯ ಆತಂಕಕ್ಕೆ ಅವಕಾಶವಿರದು ಎಂದು ಹೇಳಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ಭಗವಂತ ಖೂಬಾ, ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ವಿಪ್ರೊ ಜಿಇ ಹೆಲ್ತ್ ಕೇರ್‌ನ ಅಧ್ಯಕ್ಷರೂ ಆದ ಸಿಇಒ ನಳಿನ್ ಕಾಂತ್ ಗೊಲ್ಲಗುಂಟ ಉಪಸ್ಥಿತರಿದ್ದರು.
ತ್ವರಿತವಾಗಿ ಪರಿಹಾರ ವಿತರಣೆಗೆ ಸೂಚನೆ: ಸಂಕಷ್ಟಕ್ಕೆ ಸಿಲುಕಿದ್ದ ಕೆಲ ಸಮುದಾಯ ಗಳಿಗೆ ಸರ್ಕಾರ ಈಗಾಗಲೇ ಪರಿಹಾರ ಘೋಷಿಸಿದೆ. ಆ ಸಮುದಾಯಗಳಿಗೆ ತ್ವರಿತವಾಗಿ ಪರಿಹಾರ ತಲುಪಿಸುವ ಕೆಲಸವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು. ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ನಾನೂಸೂಚನೆ ನೀಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು. ಈ ಸಂಬಂಧ ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿಗಳೊಂದಿಗೂ ಚರ್ಚಿಸಿ ದ್ದೇನೆ. ಇತರೆ ಕೆಲ ಸಮುದಾಯಗಳು ಪರಿಹಾರ ಕ್ಕಾಗಿ ಮನವಿ ಮಾಡುತ್ತಿದ್ದು, ಇದನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಉಳಿದ ಸಮುದಾಯಗಳಿಗೂ ನೆರವು ನೀಡಲು ಯತ್ನಿಸಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.