23ರಂದು ಕುಮಾರಸ್ವಾಮಿಗೆ ಹೃದಯದ ಕವಾಟ ಬದಲು
Team Udayavani, Sep 19, 2017, 9:56 AM IST
ರಾಮನಗರ: ಸೆ.23ರಂದು ತಮ್ಮ ಹೃದಯದ ವಾಲ್ಟ್ ಬದಲಾವಣೆಗಾಗಿ ಶಸ್ತಚಿಕಿತ್ಸೆಗೆ ಒಳಗಾಗುತ್ತಿರುವುದಾಗಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಶನಿವಾರ ನಿಧನರಾದ ತಮ್ಮ ಆಪ್ತ ಕಾರ್ಯದರ್ಶಿ ವೈ.ಟಿ.ಸೋಮಶೇಖರ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 2007ರಲ್ಲಿ ತಮ್ಮ ಹೃದಯದಲ್ಲಿ ಟಿಶ್ಯು ವಾಲ್ಟ್ ಅಳವಡಿಸಲಾಗಿತ್ತು. ಇದೇ ವಾಲ್ಟ್ನ ಬದಲಾವಣೆ ಮಾಡಬೇಕಾಗಿದೆ ಎಂಬ ವೈದ್ಯರು ಸಲಹೆಯಂತೆ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದೇನೆ. ಈಗಾಗಲೇ ತಾವು ಬೆಂಗಳೂರು ಮತ್ತು ಅಮೆರಿಕಾ ವೈದ್ಯರ ಸಲಹೆಯನ್ನು ಪಡೆದುಕೊಂಡಿದ್ದು, ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಎಲ್ಲಾ ರೀತಿಯ ಪರೀಕ್ಷೆಗಳಿಗೂ ಒಳಪಟ್ಟಿರುವುದಾಗಿ ತಿಳಿಸಿದರು.
ಕಳೆದ ಡಿಸೆಂಬರ್ನಲ್ಲಿ ಆಂಜಿಯೋಗ್ರಾಂ, ಇಕೋ ಪರೀಕ್ಷೆಗಳನ್ನು ಮಾಡಿಸಿದಾಗ ವೈದ್ಯರು ವಾಲ್ಟ್ ಬದಲಾವಣೆ ಸಮಸ್ಯೆ ಇಲ್ಲ ಎಂದಿದ್ದರು. ಆರೇಳು ತಿಂಗಳುಗಳಿಂದ ತಮಗೆ ಕೆಮ್ಮಿನ ಸಮಸ್ಯೆ ಇದ್ದು, ನಿವಾರಣೆಯಾಗಿಲ್ಲ. ಕೆಮ್ಮಿನಿಂದಾಗಿಯೇ ಹೃದಯದ ಮೇಲೆ ಒತ್ತಡ ಬಿದ್ದು ವಾಲ್ಟ್ ಬದಲಾಯಿಸಬೇಕಾಗಿದೆ. ಇಸ್ರೆಲ್ ಪ್ರವಾಸಕ್ಕೆ ತೆರಳಿದ ವೇಳೆ ಮುಂಬೈನಲ್ಲೇ ತಮಗೆ ನಿಶ್ಶಕ್ತರಾಗುತ್ತಿದ್ದ ಅನುಭವ ಆಗಿತ್ತು. ಆದರೂ ರೈತರಿಗೆ ಏನಾದರೊಂದು ವಿಶಿಷ್ಟ ಕಾರ್ಯಕ್ರಮ ಕೊಡಬೇಕೆಂಬ ಉದ್ದೇಶದಲ್ಲಿ ಪ್ರವಾಸವನ್ನು ಮುಂದುವರಿಸಿದ್ದೆ. ಇಸ್ರೆಲ್ನಲ್ಲಿ ವೈದ್ಯರನ್ನು ಸಂಪರ್ಕಿಸಿದಾಗ ತಕ್ಷಣ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂಬ ಸಲಹೆ ಬಂತು. ನಂತರ ತಾವು ಸುಧಾರಿಸಿಕೊಂಡು ಬೆಂಗಳೂರಿಗೆ ಬಂದಿದ್ದು, ಇದೀಗ ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆ ಆಗಲಿದೆ ಎಂದರು.
ಕೆಲವು ಮಾಧ್ಯಮಗಳಲ್ಲಿ ತಮ್ಮ ಆರೋಗ್ಯ ಸಮಸ್ಯೆ ಕುರಿತು ಊಹಾಪೋಹದ ಸುದ್ದಿಗಳನ್ನು ಬಿತ್ತರ ಮಾಡುತ್ತಿವೆ. ಕಾರ್ಯಕರ್ತರು ಇದಕ್ಕೆ ಕಿವಿಗೊಡಬಾರದು, ಶಸ್ತ್ರ ಚಿಕಿತ್ಸೆ ನಂತರ 15 ದಿನ ವಿಶ್ರಾಂತಿ ಪಡೆದು ಮತ್ತೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.