ಮಳೆ ನಿಂತು ಹೋದ ಮೇಲೆ ಮುನ್ನೆಚ್ಚರಿಕೆ ಬಂದಿದೆ! ಪಂಚಾಯತ್‌ಗೊಂದು ಮಳೆ ಮಾಪನ ಕೇಂದ್ರ

ಮಾಪನಗಳ ಅಸಮರ್ಪಕ ನಿರ್ವಹಣೆ

Team Udayavani, Sep 8, 2022, 7:53 AM IST

thumb news rain benglore

ಬೆಂಗಳೂರು: ರಾಜ್ಯದಲ್ಲಿ ಮಳೆಯ ಅವಾಂತರ ತಗ್ಗಿಸಲು ಬಹುಮುಖ್ಯ ಪಾತ್ರ ವಹಿಸಬೇಕಿದ್ದ ಮಳೆ ಮಾಪನಗಳು ಕೆಲ ತಿಂಗಳು ಗಳಿಂದ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದು ನೆರೆ ಹಾವಳಿ ನಿರ್ವಹಣೆ ಮೇಲೆ ಪರಿಣಾಮ ಬೀರುತ್ತಿದೆ.

ಪ್ರತೀ ಗ್ರಾಮ ಪಂಚಾಯತ್‌ ಗೊಂದು ಮಳೆ ಮಾಪನ ಮತ್ತು ಹೋಬಳಿಗೊಂದು ಹವಾಮಾನ ಮಾಪನ ಕೇಂದ್ರಗಳನ್ನು ಸ್ಥಾಪಿಸ ಲಾಗಿದೆ. ಇವುಗಳು ನೀಡುವ ಅಂಕಿ-ಅಂಶ ಆಧರಿಸಿ ಯಾವ ಭಾಗದಲ್ಲಿ ಎಷ್ಟು ಪ್ರಮಾಣದ ಮಳೆ ಬೀಳುತ್ತಿದೆ? ಎಷ್ಟು ಅವಧಿಯಲ್ಲಿ ಹಾಗೂ ಯಾವ ತೀವ್ರತೆಯಲ್ಲಿ ಮಳೆಯಾಗುತ್ತಿದೆ? ಇತ್ಯಾದಿ ಮಾಹಿತಿ ಪಡೆಯಲಾಗುತ್ತಿತ್ತು. ಅದನ್ನು ಆಧರಿಸಿ ಸ್ಥಳೀಯವಾಗಿ ಮಳೆ ಸಂದೇಶಗಳನ್ನು ರವಾನಿಸ ಲಾಗುತ್ತದೆ. ಆ ಮಳೆ ತೀವ್ರ
ಗೊಂಡರೆ ಎಚ್ಚರಿಕೆ ಸಂದೇಶಗಳನ್ನು ನೀಡಲಾಗುತ್ತದೆ. ಆದರೆ ಬೆಂಗ ಳೂರು ಒಳಗೊಂಡಂತೆ ಕೆಲವೆಡೆ ಮಳೆ ಸುರಿದು 2 ದಿನಗಳ ಅನಂತರ ಈ “ಎಚ್ಚರಿಕೆ ಸಂದೇಶ’ಗಳು ಬರುತ್ತಿವೆ.

ಮಳೆ ಮಾಹಿತಿ ಸಂದೇಶಗಳು ಈ ಮೊದಲು ಆಯಾ ಜಿಲ್ಲಾಧಿಕಾರಿ, ತಹಶೀಲ್ದಾರ್‌, ಕಂದಾಯ ಅಧಿ ಕಾರಿ, ಸ್ಥಳೀಯ ಸಂಸ್ಥೆಗಳಲ್ಲಿನ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರತಿ 15 ನಿಮಿಷಕ್ಕೊಮ್ಮೆ ರವಾನೆಯಾಗುತ್ತಿತ್ತು. ಕೆಲವೊಮ್ಮೆ ಮಳೆ ತೀವ್ರಗೊಂಡರೆ, ಆ ತೀವ್ರತೆ ಬಗ್ಗೆಯೂ ಎಚ್ಚರಿಕೆ ಸಂದೇಶ ಕಳುಹಿಸಲಾಗುತ್ತಿತ್ತು. ಅದನ್ನು ಆಧರಿಸಿ ಸ್ಥಳೀಯ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದರು.

ಮಳೆ ಅವಾಂತರಗಳನ್ನು ತಗ್ಗಿಸುವುದು ಮಾತ್ರವಲ್ಲ; ಅದರಿಂದ ಸಂತ್ರಸ್ತರಾದವರಿಗೆ ಪರಿಹಾರ ನೀಡುವಲ್ಲಿಯೂ ಈ ಅಂಕಿ-ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಯಾವ ಭಾಗದಲ್ಲಿ ಎಷ್ಟು ಮಳೆಯಾಗಿದೆ ಎಂಬುದನ್ನು ಆಧರಿಸಿ, ಎಷ್ಟು ಬಾಧಿತವಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಇದು ನೆರವಾಗುತ್ತದೆ.

ದೊಡ್ಡ ಮಾಪನ ಜಾಲ
ದೇಶದಲ್ಲಿ ಅತಿ ದೊಡ್ಡ ಮಳೆ ಮಾಪನ ಜಾಲ ಹೊಂದಿರುವ ರಾಜ್ಯ ಕರ್ನಾಟಕ. ಇದರಿಂದ ಹೆಚ್ಚು ವ್ಯವಸ್ಥಿತವಾಗಿ ನಿರ್ವಹಿಸಬಹುದಾಗಿದ್ದು, ಉಳಿದ ರಾಜ್ಯಗಳಿಗೆ ಇದು ಮಾದರಿ ಆಗಿದೆ. ವಿಶ್ವ ಹವಾಮಾನ ಸಂಸ್ಥೆ ಮತ್ತು ಭಾರತೀಯ ಹವಾಮಾನ ಇಲಾಖೆಯು ಪ್ರತಿ 350 ಚದರ ಕಿ.ಮೀ.ಗೊಂದು ಮಳೆ ಮಾಪನ ಇದ್ದರೆ ಸಾಕು ಎಂದು ಹೇಳಿವೆ. ನಮ್ಮಲ್ಲಿ ಅಂದಾಜು ಪ್ರತಿ 35 ಚ. ಕಿ.ಮೀ.ಗೊಂದು ಮಾಪನಗಳನ್ನು ಅಳವಡಿಸಲಾಗಿದೆ.

ಹವಾಮಾನ ಮಾಪನ ಕೇಂದ್ರ
ಹವಾಮಾನ ಮಾಪನ ಕೇಂದ್ರಗಳು ಮಳೆಯ ಜತೆಗೆ ಆ ಭಾಗದ ಉಷ್ಣಾಂಶ, ತೇವಾಂಶ, ಗಾಳಿಯ ವೇಗ ಸೇರಿದಂತೆ ಇತರೆ ಮಾಹಿತಿಗಳನ್ನೂ ನೀಡುತ್ತವೆ. ಹೋಬಳಿಗೊಂದು ಈ ಕೇಂದ್ರಗಳನ್ನು ಅಳವಡಿಸಲಾಗಿದೆ.

95 ಗಂಟೆ ಅನಂತರ ಎಚ್ಚರಿಕೆ
ಉದಾಹರಣೆಗೆ ಬೆಳಗಾವಿಯ ಸವದತ್ತಿ, ಕೋಲಾರದ ಶ್ರೀನಿವಾಸ ಪುರ ವ್ಯಾಪ್ತಿಯಲ್ಲಿನ ಕೆಲವು ಗ್ರಾ.ಪಂ.ಗಳ ಮಳೆಯ ಎಚ್ಚರಿಕೆ ಸಂದೇಶಗಳು 95 ಗಂಟೆಗಳ ಅನಂತರ ಬಂದಿದ್ದರೆ, ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ, ತುಮಕೂರಿನ ಚಿಕ್ಕನಾಯಕನಹಳ್ಳಿ ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂ.ಗಳ ಮಳೆ ಮಾಹಿತಿ 70 ಗಂಟೆ ತಡವಾಗಿ ಬರುತ್ತಿವೆ. ಇನ್ನೂ ವಿಚಿತ್ರವೆಂದರೆ ಆ. 29ರಂದು ಬೆಂಗ ಳೂರು ನಗರದ ಆನೇಕಲ್‌, ಬೆಂಗಳೂರು ದಕ್ಷಿಣದ ಮಳೆಯ ಎಚ್ಚ ರಿಕೆ ಸಂದೇಶಗಳು ಸೆ. 5ರಂದು ಮೊಬೈಲ್‌ಗೆ ಬಂದಿವೆ. ಇವು ಕೆಲವು ಮಾದರಿಗಳಷ್ಟೇ. ಅನೇಕ ಗ್ರಾ.ಪಂ. ಮಟ್ಟದಲ್ಲಿ ಮಳೆ ಮಾಪನಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರು ಗಳು ಸ್ವತಃ ಅಲ್ಲಿನ ನಿವಾಸಿಗಳಿಂದ ಕೇಳಿಬರುತ್ತಿವೆ.

ಎಲ್ಲ ಕಡೆಗಳಲ್ಲೂ ನಿಯಮಿತವಾಗಿ ಮಳೆ ಮಾಪನಗಳಿಂದ ಮಳೆ ಪ್ರಮಾಣ ದಾಖಲಾಗುತ್ತಿದೆ. ಜತೆಗೆ ಅದು ಸಂಬಂಧಪಟ್ಟವರಿಗೆ ಆಯಾ ಸ್ಥಳೀಯ ಮಟ್ಟದಲ್ಲಿ ಸಂದೇಶದ ರೂಪದಲ್ಲಿ ರವಾನೆಯೂ ಆಗುತ್ತಿದೆ. ಇದರಲ್ಲಿ ಯಾವುದೇ ತೊಂದರೆ ಅಥವಾ ಅಡತಡೆ ಆಗುತ್ತಿಲ್ಲ.
– ಮನೋಜ್‌ ರಾಜನ್‌, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಯುಕ್ತ


-ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

BGv-Cong-Ses

Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.